ಸಂಗಾರೆಡ್ಡಿ (ತೆಲಂಗಾಣ): ಆ ಇಬ್ಬರು ಮಕ್ಕಳಿಗೆ ಮತ್ತೊಬ್ಬರ ಸಹಾಯವಿಲ್ಲದೆ ನಡೆಯಲು ಮತ್ತು ಏನನ್ನೂ ತಿನ್ನಲು ಸಹ ಸಾಧ್ಯವಿಲ್ಲ. ಹುಟ್ಟಿನಿಂದಲೇ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಮಕ್ಕಳು ಎಲ್ಲಿ ಕುಳಿತುಕೊಳ್ಳುತ್ತಾರೋ, ಅಲ್ಲಿಯೇ ಇರುತ್ತಾರೆ. ಅಷ್ಟೇ ಅಲ್ಲದೇ ಅವರು ಎಷ್ಟು ದಿನ ಬದುಕುತ್ತಾರೆ ಎಂದು ಹೇಳಲು ಸಾಧ್ಯವಿಲ್ಲವೆಂದು ವೈದ್ಯರು ಹೇಳಿದ್ದಾರೆ. ಇಂತಹ ಮಕ್ಕಳನ್ನು ಪೋಷಿಸಲು ಬಡ ಪೋಷಕರು ಹೆಣಗಾಡುತ್ತಿದ್ದಾರೆ.
ಸಂಗಾರೆಡ್ಡಿ ಜಿಲ್ಲೆಯ ನಿಜಾಂಪೇಟ್ ಮಂಡಲದ ರಾಮಿರೆಡ್ಡಿಪೇಟೆಯ ಜಿ.ದುರ್ಗಯ್ಯ ಮತ್ತು ಲಕ್ಷ್ಮಿ ಎಂಬುವರ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ದುರ್ಗಯ್ಯ ಮೀನು ಹಿಡಿದು ಜೀವನ ನಡೆಸುತ್ತಿದ್ದು, ಅವರ ಇಬ್ಬರು ಮಕ್ಕಳಾದ ಪೋಚಯ್ಯ (10) ಮತ್ತು ಮಲ್ಲೇಶಂ (8) ಹುಟ್ಟಿನಿಂದಲೇ ಸ್ನಾಯುಕ್ಷಯದಿಂದ ಬಳಲುತ್ತಿದ್ದಾರೆ. 2015ರಲ್ಲಿ ಪ್ರಮಾಣಪತ್ರದ ಸ್ವೀಕೃತಿಯೊಂದಿಗೆ, ಅಂದಿನಿಂದ ಅವರಿಗೆ ಪಿಂಚಣಿ ನೀಡಲು ಪ್ರಾರಂಭಿಸಲಾಯಿತು. ಈ ದಾಖಲೆ ಐದು ವರ್ಷಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.