ವಾರಾಣಸಿ(ಉತ್ತರಪ್ರದೇಶ):ಪಕ್ಷಗಳು ಚುನಾವಣೆಯಲ್ಲಿ ಗೆಲ್ಲಲು ನಡೆಸುವ ಕಸರತ್ತುಗಳು ಒಂದೆರಡಲ್ಲ. ಪಂಚರಾಜ್ಯಗಳ ಚುನಾವಣೆಯಲ್ಲಿ ಪಕ್ಷಗಳು ಜನರನ್ನು ತಲುಪಲು ನಾನಾ ಮಾರ್ಗಗಳನ್ನು ಅನುಸರಿಸುತ್ತಿವೆ. ಬಹಿರಂಗ ಪ್ರಚಾರಕ್ಕೆ ಚುನಾವಣಾ ಆಯೋಗ ಅನುಮತಿ ನೀಡದ ಕಾರಣ, ವಿಭಿನ್ನ ತಂತ್ರಗಳನ್ನು ಪಕ್ಷಗಳು ಅನುಸರಿಸುತ್ತಿವೆ.
ಕೆಲವೇ ದಿನಗಳ ಹಿಂದೆ ಬಿಜೆಪಿ ಸಂಸದ ಹಾಗೂ ನಟ ರವಿ ಕಿಶನ್ ವಿಧಾನಸಭಾ ಚುನಾವಣೆಯಲ್ಲಿ ಮತದಾರರನ್ನು ಒಲಿಸಿಕೊಳ್ಳಲು ಯುಪಿ ಮೇನ್ ಸಬ್ ಬಾ (ಉತ್ತರ ಪ್ರದೇಶದಲ್ಲಿ ಎಲ್ಲವೂ ಇದೆ) ಎಂಬ ಹಾಡನ್ನು ಬಿಡುಗಡೆ ಮಾಡಿದ್ದರು. ಈ ವಿಡಿಯೋದಲ್ಲಿ ಉತ್ತರ ಪ್ರದೇಶದ ಯೋಗಿ ಸರ್ಕಾರವನ್ನು ಹೊಗಳಲಾಗಿತ್ತು. ರವಿ ಕಿಶನ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.
ಈಗ ಆ ಹಾಡಿಗೆ ಪ್ರತಿಕ್ರಿಯೆಯಾಗಿ ಯುಪಿ ಮೇನ್ ಕಾ ಬಾ ( ಉತ್ತರ ಪ್ರದೇಶದಲ್ಲಿ ಏನಿದೆ?) ಎಂಬ ಹಾಡನ್ನು ಬೋಜಪುರಿ ಗಾಯಕಿ ನೇಹಾ ಸಿಂಗ್ ರಾಥೋಡ್ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋ ರವಿ ಕಿಶನ್ ಹಾಡಿಗೆ ವಿರುದ್ಧವಿದ್ದು, ಯೋಗಿ ಸರ್ಕಾರದ ವಿರುದ್ಧ ಈ ಹಾಡಿನಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.