ನವದೆಹಲಿ: ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ಜನಾಂಗೀಯ ನಿಂದನೆ ಬಗ್ಗೆ ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾತನಾಡಿದ್ದು, ಅಗತ್ಯವಿದ್ದಾಗ ಈ ಪ್ರಕರಣಗಳನ್ನು ಭಾರತ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ಸದನದಲ್ಲಿ ಭಾಗಿಯಾಗಿ ಪ್ರತಿಕ್ರಿಯೆ ನೀಡಿದ ಅವರು, ಭಾರತ, ಮಹಾತ್ಮ ಗಾಂಧಿಯವರ ಜನ್ಮಭೂಮಿಯಾಗಿದ್ದು, ನಮ್ಮ ದೇಶದಲ್ಲಿ ಜನಾಂಗೀಯ ನೀತಿಗಳಿಗೆ ಅವಕಾಶವಿಲ್ಲ. ಸೂಕ್ತ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿ ಜನಾಂಗೀಯ ನಿಂದನೆ ಬಗ್ಗೆ ಬ್ರಿಟನ್ ಜತೆ ಮಾತನಾಡಲಿದ್ದೇನೆ ಎಂದು ಹೇಳಿದ್ದಾರೆ.
ಸದನದಲ್ಲಿ ಮಾತನಾಡಿದ ಎಸ್.ಜೈಶಂಕರ್ ಕರ್ನಾಟಕದ ಉಡುಪಿ ಮೂಲದ ವಿದ್ಯಾರ್ಥಿನಿ ರಶ್ಮಿ ಸಮಂತ್ ಅವರ ವಿರುದ್ಧ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಜನಾಂಗೀಯ ನಿಂದನೆ ನಡೆದ ಬಗ್ಗೆ ಸದನದಲ್ಲಿ ಅಶ್ವಿನಿ ವೈಷ್ಣವ್ ಅವರು ಬೆಳಕು ಚೆಲ್ಲಿದ್ದರು. ಇದೇ ವಿಚಾರವಾಗಿ ಸದನದಲ್ಲಿ ಎಸ್.ಜೈಶಂಕರ್ ಮಾತನಾಡಿದ್ದಾರೆ. ಬ್ರಿಟನ್ ನಮಗೆ ಮಿತ್ರರಾಷ್ಟ್ರವಾಗಿದ್ದು, ಆ ದೇಶದೊಂದಿಗೆ ಯಾವುದೇ ವಿಷಯದಲ್ಲಿ ವ್ಯವಹಾರ ನಡೆಸುವಾಗ ಅತ್ಯಂತ ಎಚ್ಚರಿಕೆಯಿಂದ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ ಎಂದಿರುವ ಅವರು, ಅಗತ್ಯವಿದ್ದಾಗ ಇಂತಹ ವಿಷಯದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಂಜನಾಗೆ ಜಸ್ಪ್ರೀತ್ ಕ್ಲೀನ್ ಬೌಲ್ಡ್! ಬದುಕಿನ 2ನೇ ಇನ್ನಿಂಗ್ಸ್ ಆರಂಭಿಸಿದ ಬುಮ್ರಾ
ಕರ್ನಾಟಕದ ಉಡುಪಿ ಮೂಲದ ಸಮಂತ್ ಆಕ್ಸಫರ್ಡ್ ವಿವಿ ವಿದ್ಯಾರ್ಥಿ ಸಂಘದ ಮೊದಲ ಭಾರತೀಯ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇವರ ವಿರುದ್ಧ ಜನಾಂಗೀಯ ನಿಂದನೆ ವ್ಯಕ್ತವಾಗುತ್ತಿದ್ದಂತೆ ಕೇವಲ 5 ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದರು.