ಕರ್ನಾಟಕ

karnataka

ETV Bharat / bharat

ಕೃಷಿ ಕಾನೂನು ಹಿಂತೆಗೆದುಕೊಳ್ಳುವ ತನಕ ಪ್ರತಿಭಟನೆ ಮುಂದುವರಿಕೆ: ಟಿಕಾಯತ್ ಘೋಷಣೆ​

ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಎಲ್ಲ ರೈತರು ಸರ್ಕಾರದ ವಿರುದ್ಧ ಒಂದಾಗಿ ರೈತ ಚಳವಳಿ ನಡೆಸಿದ್ದಾರೆ. ಇನ್ನು ಬಿಕೆಯು ವಕ್ತಾರ ರಾಕೇಶ್ ಟಿಕಾಯತ್ ಅವರ ನೇತೃತ್ವದಲ್ಲಿ ರೈತರು 'ಕಪ್ಪು ಪೇಟ' ಧರಿಸಿ ಗಾಜಿಪುರ ಗಡಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು

ರಾಕೇಶ್​ ಟಿಕಾಯತ್​
ರಾಕೇಶ್​ ಟಿಕಾಯತ್​

By

Published : May 26, 2021, 3:17 PM IST

ನವದೆಹಲಿ:ಭಾರತೀಯ ಚಳವಳಿ ದೇಶಾದ್ಯಂತ ರೈತರನ್ನು ಒಂದುಗೂಡಿಸಿದೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್​ ಹೇಳಿದ್ದಾರೆ.

ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಎಲ್ಲ ರೈತರು ಸರ್ಕಾರದ ವಿರುದ್ಧ ಒಂದಾಗಿರುವುದರಿಂದ ರೈತ ಚಳವಳಿ ಅದ್ಭುತ ಯಶಸ್ಸು ಕಂಡಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರ ರಾಕೇಶ್ ಟಿಕಾಯತ್ ಅವರ ನೇತೃತ್ವದಲ್ಲಿ ರೈತರು 'ಕಪ್ಪು ಪೇಟ' ಧರಿಸಿ ಗಾಜಿಪುರ ಗಡಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು. "ಪ್ರತಿಭಟನೆಗಳು ಶಾಂತಿಯುತವಾಗಿ ನಡೆಯಲಿವೆ. ನಾವು ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಿದ್ದೇವೆ. ಹೆಚ್ಚಿನವರು ಇಲ್ಲಿಗೆ ಬರುವ ನಿರೀಕ್ಷೆಯಿಲ್ಲ. ಪ್ರತಿಭಟನೆಯನ್ನು ಬೆಂಬಲಿಸಲು ಜನರು ಎಲ್ಲಿ ಸಾಧ್ಯವೋ ಅಲ್ಲಿ ಕಪ್ಪು ಧ್ವಜಗಳನ್ನು ಹಾರಿಸುತ್ತಿದ್ದಾರೆ" ಎಂದು ಅವರು ಹೇಳಿದರು.

ಸರ್ಕಾರವನ್ನು ಪ್ರತಿನಿಧಿಸುವ ಪ್ರತಿಮೆ ಸಹ ರೈತರು ಸುಟ್ಟು ಹಾಕಿದ್ದು, ಇದು ರೈತರು ಮತ್ತು ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಯಿತು. ಕೆಲ ರೈತರ ಗುಂಪು ಪ್ರತಿಭಟನೆಯನ್ನು ನಿರ್ವಹಿಸುತ್ತಿದ್ದರೆ, ಇತರರು ತಮ್ಮದೇ ಆದ ಬದ್ಧತೆಗಳನ್ನು ಹೊಂದಿರುವುದರಿಂದ ಕೃಷಿ ಸಂಬಂಧಿತ ಕೆಲಸಗಳು ಮತ್ತು ಮನೆ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.

"ಕೇಂದ್ರವು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ತನಕ ನಾವು ಪ್ರತಿಭಟನೆ ಮುಂದುವರಿಸುತ್ತೇವೆ. ತ್ರಿವರ್ಣ ಬಣ್ಣದ ಧ್ವಜಗಳನ್ನು ಹಾಕುವ ಮೂಲಕ ಪ್ರತಿಭಟನೆ ನಡೆಸಲು ನಾವು ಯೋಜಿಸಿದ್ದೆವು. ಆದರೆ, ಅಧಿಕಾರಿಗಳು ಇದಕ್ಕೆ ಆಕ್ಷೇಪಣೆ ತೋರಿದ್ದಾರೆ. ಆದ್ದರಿಂದ ನಾವು ಕಪ್ಪು ಧ್ವಜಗಳನ್ನು ಹಾರಿಸುವ ಮೂಲಕ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಿದ್ದೇವೆ" ಎಂದು ಟಿಕಾಯತ್​ ಹೇಳಿದರು.

ABOUT THE AUTHOR

...view details