ನವದೆಹಲಿ: ದೆಹಲಿಯ ಆಡಳಿತಗಾರರ ಮುಂದೆ ನಮ್ಮ ಪಕ್ಷವು ಎಂದಿಗೂ ಶರಣಾಗುವುದಿಲ್ಲ. ಕೇಸರಿ ಪಕ್ಷವನ್ನು ಅಧಿಕಾರದಿಂದ ದೂರ ಉಳಿಸಿಕೊಳ್ಳಲು ಬಿಜೆಪಿಯೇತರ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಕರೆ ನೀಡಿದ್ದಾರೆ.
ನವದೆಹಲಿಯ ತಾಕತ್ತೂರ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎನ್‌ಸಿಪಿಯ ಎಂಟನೇ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪವಾರ್, ಹೆಚ್ಚುತ್ತಿರುವ ಹಣದುಬ್ಬರ, ನಿರುದ್ಯೋಗ, ರೈತರ ಪ್ರತಿಭಟನೆಗಳನ್ನು ಹತ್ತಿಕ್ಕುವ ಮತ್ತು ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದ್ವೇಷವನ್ನು ಹೆಚ್ಚಿಸುವ ಕ್ರಮದ ಬಗ್ಗೆ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ:ಬಿಜೆಪಿ ವಿರುದ್ಧ ಶರದ್ ಪವಾರ್ ವಾಗ್ದಾಳಿ: 'ನಿತೀಶ್ ಕುಮಾರ್ ಜಾಣತನದ ಹೆಜ್ಜೆ ಇಟ್ಟಿದ್ದಾರೆ' ಎಂದು ಗುಣಗಾನ
ದೆಹಲಿಯ ಆಡಳಿತಗಾರರಿಗೆ ಸವಾಲು ಹಾಕಿದ್ದ ಪೇಶ್ವಾ: ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಹಣ ಬಲದಂತಹ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಈಗಿನ ಸರ್ಕಾರಕ್ಕೆ ನಾವು ಪ್ರಜಾಸತ್ತಾತ್ಮಕವಾಗಿ ಸವಾಲು ಹಾಕಬೇಕಾಗಿದೆ. ನಾವು ಹೋರಾಟಕ್ಕೆ ಸಿದ್ಧರಾಗಿರಬೇಕೆಂದು ರಾಜ್ಯಸಭಾ ಸದಸ್ಯರಾದ 81 ವರ್ಷದ ನಾಯಕ, ತಮ್ಮ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಅಲ್ಲದೇ, ಸಮಾವೇಶ ನಡೆದ ಸ್ಥಳವಾದ ತಾಕತ್ತೂರ ಒಳಾಂಗಣ ಕ್ರೀಡಾಂಗಣ ಮಹತ್ವವನ್ನು ಒತ್ತಿ ಹೇಳಿದ ಪವಾರ್, ಇದೇ ಸ್ಥಳದಲ್ಲಿಯೇ ಬಾಜಿರಾವ್ ಪೇಶ್ವಾ 1737ರಲ್ಲಿ ತನ್ನ ಸೈನ್ಯದೊಂದಿಗೆ ಬೀಡುಬಿಟ್ಟಿದ್ದ ಮತ್ತು ದೆಹಲಿಯ ಆಡಳಿತಗಾರರಿಗೆ ಸವಾಲು ಹಾಕಿದ್ದ ಎಂದು ಎನ್ನುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದರು.