ಭಾರತದಲ್ಲಿ ಕೊರೊನಾ ಎರಡನೇ ಅಲೆಯ ನಂತರ ಮೂರನೆಯ ಅಲೆ ಬರಲಿದೆ ಎಂಬ ವದಂತಿಗಳಿವೆ. ಅದು ಮಕ್ಕಳಿಗೆ ತೀವ್ರವಾಗಿ ಹೊಡೆತ ನೀಡಿಲಿದೆ ಎಂದು ಹೇಳಲಾಗುತ್ತಿದೆ. ಆದರೆ, ವೈದ್ಯರು ಮತ್ತು ತಜ್ಞರು ಮಕ್ಕಳ ಬಗೆಗಿನ ಈ ವದಂತಿ ಒಪ್ಪುವುದಿಲ್ಲ. ಬದಲಾಗಿ, ಪರಿಸ್ಥಿತಿಯಲ್ಲಿ ಭಯಭೀತರಾಗುವ ಬದಲು ಮಕ್ಕಳು ಸೋಂಕಿನಿಂದ ದೂರವಿರಲು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡುತ್ತಿದ್ದಾರೆ. ಈ ಕುರಿತು ಈಟಿವಿ ಭಾರತ ಸುಖೀಭವ ತಂಡ ಕೆಲ ತಜ್ಞರ ಜೊತೆ ಸಂವಾದ ನಡೆಸಿದೆ.
ವೈದ್ಯರ ಅಭಿಪ್ರಾಯ:
ಕೊರೊನಾ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹೇಳಲು ಜಾಗತಿಕ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ದತ್ತಾಂಶವಿದೆ ಎಂದು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಸ್ಪಷ್ಟಪಡಿಸಿದರು. ವಯಸ್ಕರರಿಗೆ ಹೋಲಿಸಿದರೆ ಎರಡನೇ ತರಂಗದಲ್ಲೂ ಕಡಿಮೆ ಮಕ್ಕಳು ವೈರಸ್‌ನಿಂದ ಸೋಂಕಿಗೆ ಒಳಗಾಗಿದ್ದರು. ಸೋಂಕಿತರು ಕಡಿಮೆ ಮಟ್ಟದಲ್ಲಿ ಸೋಂಕಿಗೆ ತುತ್ತಾಗಿದ್ದರು ಎಂದು ಅವರು ಹೇಳಿದರು.
ಇಂದೋರ್‌ನ ಆ್ಯಪಲ್ ಆಸ್ಪತ್ರೆ ತಜ್ಞ ಜನರಲ್ ಫಿಸಿಶಿಯನ್, ಡಾ. ಸಂಜಯ್ ಕೆ. ಜೈನ್ ಪ್ರಕಾರ, ಸಾಂಕ್ರಾಮಿಕ ರೋಗದ ಆರಂಭದಿಂದಲೇ ಈ ವೈರಸ್ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿ, ಜನರ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದ, ಈಗಾಗಲೇ ಗಂಭೀರ ಕಾಯಿಲೆ ಅಥವಾ ವೈದ್ಯಕೀಯ ಸ್ಥಿತಿಯಿಂದ ಬಳಲುತ್ತಿರುವ ಮಕ್ಕಳು ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಇತರರಿಗೆ ಹೋಲಿಸಿದರೆ ಕೊರೊನಾ ಸೋಂಕಿಗೆ ಬೇಗ ತುತ್ತಾಗುವ ಸಾಧ್ಯತೆಯಿದೆ.
ಆರೋಗ್ಯವಂತ ಮಕ್ಕಳಲ್ಲಿ ಕೊರೊನಾ ತೀವ್ರ ಪ್ರಕರಣಗಳು ವರದಿಯಾಗಿಲ್ಲ. ಮಕ್ಕಳಲ್ಲಿ ಸೋಂಕಿನ ಅಂಕಿ - ಅಂಶಗಳನ್ನು ಗಮನಿಸಿದರೆ, ಮೊದಲನೆಯದಕ್ಕೆ ಹೋಲಿಸಿದರೆ ಸೋಂಕಿತ ಮಕ್ಕಳ ಸಂಖ್ಯೆ ಎರಡನೇ ಅಲೆಯಲ್ಲಿ ಹೆಚ್ಚಿದೆ. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಸೋಂಕು ಕಡಿಮೆ ಮಟ್ಟದಲ್ಲಿದೆ.
ಮಕ್ಕಳ ಆರೋಗ್ಯ ನೋಡಿಕೊಳ್ಳುವುದು ಹೇಗೆ:
ಭವಿಷ್ಯದ ಬಗ್ಗೆ ಸರಿಯಾಗಿ ತಿಳಿಯದೇ ಇರುವುದರಿಂದ ಪೋಷಕರು ತಮ್ಮ ಪುಟ್ಟ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಬಹಳ ಮುಖ್ಯ ಎಂದು ಡೆಹ್ರಾಡೂನ್‌ನಲ್ಲಿ ಅಭ್ಯಾಸ ಮಾಡುತ್ತಿರುವ ಶಿಶುವೈದ್ಯ ಡಾ.ಲತಿಕಾ ಜೋಶಿ ಹೇಳುತ್ತಾರೆ. ಅವರ ಆಹಾರ ಪದ್ಧತಿ ಮಾತ್ರವಲ್ಲದೇ ದಿನಚರಿ ಮತ್ತು ವ್ಯಾಯಾಮದ ಅಭ್ಯಾಸವನ್ನೂ ಗಮನಿಸಬೇಕು.
ಮಕ್ಕಳ ಆರೋಗ್ಯದ ಬಗ್ಗೆ ಅನುಸರಿಸಲು ಶಿಫಾರಸು ಮಾಡುವ ಕೆಲವು ಕ್ರಮಗಳು ಇಲ್ಲಿವೆ:
- ತಮ್ಮನ್ನು ಮತ್ತು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡಲು ಮಕ್ಕಳನ್ನು ಪ್ರೋತ್ಸಾಹಿಸಿ. ಆಗಾಗ್ಗೆ ತಮ್ಮ ಕೈಗಳನ್ನು ತೊಳೆಯಲು ಅಥವಾ ಸ್ವಚ್ಛಗೊಳಿಸಲು ಹೇಳಿ.
- ತಾಜಾ, ಮನೆಯಲ್ಲಿ ಬೇಯಿಸಿದ, ಆರೋಗ್ಯಕರ ಮತ್ತು ಜೀರ್ಣವಾಗುವ ಊಟ ನೀಡಿ. ತಾಜಾ ಹಸಿರು ತರಕಾರಿಗಳು ಮತ್ತು ಎಲ್ಲ ರೀತಿಯ ದ್ವಿದಳ ಧಾನ್ಯಗಳನ್ನು ಮಕ್ಕಳ ಆಹಾರದಲ್ಲಿ ಸೇರಿಸಿ. ಹೊರಗಿನ ಆಹಾರವನ್ನು, ವಿಶೇಷವಾಗಿ ಜಂಕ್ ಫುಡ್ ತಿನ್ನುವುದರಿಂದ ದೂರವಿರಿ.
- ತಮ್ಮ ದೈನಂದಿನ ಆಹಾರದಲ್ಲಿ ತಾಜಾ ಹಣ್ಣುಗಳು, ಡೈರಿ ಉತ್ಪನ್ನಗಳು ಮತ್ತು ಒಣ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ಉತ್ತಮ ಪ್ರಮಾಣದ ಪ್ರೋಟೀನ್ ಮತ್ತು ಸತು ನೀಡಲು ಇದು ಸಹಕಾರಿ.
- ದೇಹವನ್ನು ಹೈಡ್ರೀಕರಿಸುವುದಕ್ಕಾಗಿ ಹೆಚ್ಚು ನೀರು, ಎಳನೀರು ಮತ್ತು ಇತರ ಆರೋಗ್ಯಕರ ಪಾನೀಯಗಳನ್ನು ಕುಡಿಯಲು ಹೇಳಿ.
- ದೈನಂದಿನ ವ್ಯಾಯಾಮ ದಿನಚರಿಯಲ್ಲಿ ಪಾಲ್ಗೊಳ್ಳಲು ಅವರನ್ನು ಪ್ರೋತ್ಸಾಹಿಸಿ. ಉಸಿರಾಟದ ವ್ಯಾಯಾಮ, ಯೋಗ ಮತ್ತು ಪ್ರಾಣಾಯಾಮ ಅಭ್ಯಾಸ ಮಾಡಿಕೊಳ್ಳಿ.
- ಅವರ ಸುತ್ತ ಸಕಾರಾತ್ಮಕ ವಾತಾವರಣ ನಿರ್ಮಾಣ ಮಾಡಿ ಮತ್ತು ಒತ್ತಡ, ಆತಂಕ ಮತ್ತು ಭಯದಿಂದ ದೂರವಿರಿ.
- ನೈರ್ಮಲ್ಯದ ಅಗತ್ಯತೆಯನ್ನು ಅವರಿಗೆ ವಿವರಿಸಿ. ಮಾಸ್ಕ್ ಇಲ್ಲದೇ ಅವರನ್ನು ಮನೆಯಿಂದ ಹೊರಗೆ ಹೋಗಲು ಬಿಡಬೇಡಿ.
- ಮಕ್ಕಳ ಗುಂಪಿನೊಂದಿಗೆ ಆಟವಾಡುವುದನ್ನು ತಡೆಯಿರಿ. ಹುಟ್ಟುಹಬ್ಬದ ಕೂಟಗಳಿಗೆ ಅಥವಾ ಅಂತಹ ಇತರ ಕೂಟಗಳಿಗೆ ಹೋಗಲು ಬಿಡಬೇಡಿ.
- ಯಾವುದೇ ರೋಗಲಕ್ಷಣಗಳಿದ್ದಲ್ಲಿ, ಮಗುವನ್ನು ಪ್ರತ್ಯೇಕವಾಗಿರಿಸಿ ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಿ.