ಕೋಲ್ಕತ್ತಾ:ಪಶ್ಚಿಮ ಬಂಗಾಳ ಚುನಾವಣೆ ಹಿನ್ನೆಲೆ ಗೃಹ ಸಚಿವ ಅಮಿತ್ ಶಾ ಬಂಗಾಳದಲ್ಲಿ ಮತಬೇಟೆ ಆರಂಭಿಸಿದ್ದಾರೆ. ಚುನಾವಣೆ ಗೆಲ್ಲುವ ದೃಷ್ಟಿಯಿಂದ ಬಂಗಾಳ ಜನತೆಗೆ ಬರಪೂರ ಯೋಜನೆಗಳ ಘೋಷಣೆ ಮುಂದುವರಿಸಿದ್ದಾರೆ.
ಇದೀಗ ಬಂಗಾಳದಲ್ಲಿ 7ನೇ ವೇತನ ಆಯೋಗ ಅನುಷ್ಠಾನ ಸಂಬಂಧ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದು, ಈ ಬೆನ್ನಲ್ಲೆ ಇಂದಿನ ಅಮಿತ್ ಶಾ ರ‍್ಯಾಲಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಶುಭ ಸುದ್ದಿ ನೀಡಿದ್ದಾರೆ. ಬಂಗಾಳಿಗರು ಬಿಜೆಪಿಗೆ ಮತ ಹಾಕಿ ಗೆಲ್ಲಿಸಿದರೆ ಕೂಡಲೇ 7ನೇ ವೇತನ ಆಯೋಗದ ಶಿಫಾರಸುಗಳನ್ನ ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ 7ನೇ ವೇತನ ಆಯೋಗ ಜಾರಿ ಅಮಿತ್ ಶಾ ಘೋಷಣೆ 24 ಪರಗಣ ಪ್ರದೇಶಲ್ಲಿಂದು ಅಮಿತ್ ಶಾ ಚುನಾವಣಾ ರ‍್ಯಾಲಿ ಕೈಗೊಂಡಿದ್ದು, ಈ ವೇಳೆ 7ನೇ ವೇತನ ಆಯೋಗದ ಅನುಷ್ಠಾನದ ಭರವಸೆ ನೀಡಿದ್ದಾರೆ. ಈ ಭರವಸೆ ಸಂಬಂಧ ಪ್ರತಿಕ್ರಿಯಿಸಲು ಬಂಗಾಳದ ಪಶ್ಚಿಮ ಬಂಗಾಳ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ನಿರಾಕರಿಸಿದ್ದು, ಸಿಎಂ ಮಮತಾ ಬ್ಯಾನರ್ಜಿ ಈ ಕುರಿತು ಚರ್ಚಿಸಲಿದ್ದಾರೆ ಎಂದಿದ್ದಾರೆ.
ಇದಲ್ಲದೇ ಮೀನುಗಾರಿಕೆಗೆ ಹೆಸರಾಗಿರುವ ಕಾಕಾದ್ವೀಪ್ ಪ್ರದೇಶದಲ್ಲಿ ರ‍್ಯಾಲಿ ನಡೆಸುವ ವೇಳೆ ಅಲ್ಲಿನ ನಾಗರಿಕರಿಗೆ ಹಲವು ಭರವಸೆಗಳ ನೀಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ 4 ಲಕ್ಷ ಮೀನುಗಾರರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಸೌಲಭ್ಯ ನೀಡಲಾಗುವುದು, ಅಲ್ಲದೆ ಇದೇ ವೇಳೆ ಗಂಗಾಸಾಗರ್ ಪ್ರದೇಶವನ್ನು ವಿಶ್ವದರ್ಜೆಯ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಭೇಟಿ ಮಾಡಿದ ಯುರೋಪಿಯನ್ ನಿಯೋಗ
ಇದಕ್ಕೂ ಮೊದಲು ಇಲ್ಲಿನ ನಿರಾಶ್ರಿತರ ಮನೆಗಳಿಗೆ ಭೇಟಿ ನೀಡಿ ಅವರ ಸಂಕಷ್ಟಗಳನ್ನ ಆಲಿಸಿದರು. ಬಳಿಕ ಕೇಂದ್ರ ಗೃಹ ಸಚಿವ ಮತ್ತು ಇತರ ಪಕ್ಷದ ಮುಖಂಡರಾದ ಮುಕುಲ್ ರಾಯ್, ಕೈಲಾಶ್ ವಿಜಯವರ್ಗಿಯಾ ಮತ್ತು ದಿಲೀಪ್ ಘೋಷ್ ಅವರು ನಾರಾಯಣಪುರ ಗ್ರಾಮದಲ್ಲಿರುವ ಬಾಂಗ್ಲಾದೇಶದಿಂದ ಬಂದು ನೆಲೆಸಿರುವ ವಲಸೆಗಾರರ ಕುಟುಂಬಸ್ಥರ ನಿವಾಸದಲ್ಲಿ ಊಟ ಮಾಡಿದರು.
ನಿರಾಶ್ರಿತರ ಮನೆಯಲ್ಲಿ ಅಮಿತ್ ಶಾ ಊಟ