ಡೆಹ್ರಾಡೂನ್: ಬಾಬಾ ರಾಮದೇವ್ ಅವರು ಇತ್ತೀಚೆಗೆ ವಿವಾದಾತ್ಮಕ ಹೇಳಿಕೆಗಳಿಂದ ಮುನ್ನೆಲೆಗೆ ಬರುತ್ತಲೇ ಇದ್ದಾರೆ. ಎಲ್ಲದರ ನಡುವೆ ಈಗ ಮತ್ತೊಂದು ಹೇಳಿಕೆ ನೀಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದೊಂದಿಗೆ ಮಾತಿನ ಚಕಮಕಿಯ ಮಧ್ಯೆಯೇ ಒಂದು ವರ್ಷದೊಳಗೆ 1000 ಅಲೋಪತಿ ವೈದ್ಯರನ್ನು ಆಯುರ್ವೇದ ವೈದ್ಯರಾಗಿ ಪರಿವರ್ತಿಸುವುದಾಗಿ ಹೇಳಿದ್ದಾರೆ.
ಇದು ಧರ್ಮದ ಬದಲಾವಣೆಯಾಗುವುದಿಲ್ಲ. ಬದಲಾಗಿ ಅಲೋಪತಿಯಿಂದ ಆಯುರ್ವೇದದ ವೈದ್ಯರ ಬದಲಾವಣೆ ಮಾತ್ರ ಹಾಗೆ ಆಯುರ್ವೇದದ ಶಕ್ತಿಯನ್ನು ಜನರಿಗೆ ಸಾಬೀತುಪಡಿಸುವುದು ಏಕೈಕ ಗುರಿಯಾಗಿದೆ ಎಂದು ಬಾಬಾ ಹೇಳಿದ್ದಾರೆ.
ಇನ್ನು ಬಾಬಾ ರಾಮದೇವ್ ಅವರು ಪ್ರತಿದಿನ ಬೆಳಗ್ಗೆ 1000 ಜನರ ಉಪಸ್ಥಿತಿಯಲ್ಲಿ ಹರಿದ್ವಾರದ ಯೋಗ ಗ್ರಾಮದಲ್ಲಿ ಯೋಗ ಕಾರ್ಯ ಮಾಡುತ್ತಿದ್ದಾರೆ.
ಆಯುರ್ವೇದವನ್ನು ತೆಗೆದುಕೊಳ್ಳಲು ಆಸಕ್ತಿ ಹೊಂದಿರುವ ಅನೇಕ ನಿವೃತ್ತ ಅಲೋಪತಿ ವೈದ್ಯರಿದ್ದಾರೆ ಎಂದು ಇದೇ ವೇಳೆ ತಿಳಿಸಿದ್ದಾರೆ.