ಕರ್ನಾಟಕ

karnataka

ETV Bharat / bharat

'ನಾನು ಯಾವಾಗಲೂ ಸೀಟ್​​ಬೆಲ್ಟ್​ ಧರಿಸುವೆ' ಸೈರಸ್​ ಮಿಸ್ತ್ರಿ ಸಾವಿನ ಬೆನ್ನಲ್ಲೇ ಆನಂದ್ ಮಹೀಂದ್ರಾ ಪ್ರತಿಕ್ರಿಯೆ

ಭಾನುವಾರ ಮುಂಬೈನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸೈರಸ್​ ಮಿಸ್ತ್ರಿ ದುರ್ಮರಣಕ್ಕೀಡಾಗಿದ್ದಾರೆ. ಇದರ ಬೆನ್ನಲ್ಲೇ ಆನಂದ್ ಮಹೀಂದ್ರಾ ವಿಶೇಷವಾದ ಮನವಿ ಮಾಡಿದ್ದಾರೆ.

Anand Mahindra twitter
Anand Mahindra twitter

By

Published : Sep 5, 2022, 1:06 PM IST

ಮುಂಬೈ(ಮಹಾರಾಷ್ಟ್ರ):ರಸ್ತೆ ಅಪಘಾತದಲ್ಲಿ ಟಾಟಾ ಸಮೂಹದ ಮಾಜಿ ಅಧ್ಯಕ್ಷರಾದ ಕೈಗಾರಿಕೋದ್ಯಮಿ ಸೈರಸ್ ಮಿಸ್ತ್ರಿ ವಿಧಿವಶರಾಗಿದ್ದಾರೆ. ಆದರೆ, ಅವರ ಅಕಾಲಿಕ ಸಾವಿಗೆ ಸೀಟ್​ಬೆಲ್ಟ್​ ಹಾಕದಿರುವುದೇ ಮುಖ್ಯ ಕಾರಣ ಎಂಬ ಗಂಭೀರ ವಿಚಾರ ತಿಳಿದುಬಂದಿದೆ. ಇದರ ಬೆನ್ನಲ್ಲೇ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಎಲ್ಲರಲ್ಲೂ ವಿಶೇಷ ಮನವಿ ಮಾಡಿ ಟ್ವೀಟ್ ಮಾಡಿದ್ದಾರೆ.

ಯಾವಾಗಲೂ ಸೀಟ್ ಬೆಲ್ಟ್ ಧರಿಸಿ​:ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದರೂ ಯಾವಾಗಲೂ ಸೀಟ್ ಬೆಲ್ಟ್ ಧರಿಸುವುದಾಗಿ ಪ್ರತಿಜ್ಞೆ ಮಾಡಿದ್ದೇನೆ. ನೀವೂ ಕೂಡ ಅದೇ ರೀತಿ ಮಾಡಿ. ನಾವೆಲ್ಲರೂ ನಮ್ಮ ಕುಟುಂಬಗಳಿಗೆ ಋಣಿಯಾಗಿದ್ದೇವೆ ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ:ರಸ್ತೆ ಅಪಘಾತದಲ್ಲಿ ಟಾಟಾ ಸಮೂಹದ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಾವು: ಈಟಿವಿ ಭಾರತ ಎಕ್ಸ್​ಕ್ಲೂಸಿವ್​ ವಿಡಿಯೋ

ಸೈರಸ್ ಮಿಸ್ತ್ರಿ 2012ರಲ್ಲಿ ಟಾಟಾ ಗ್ರೂಪ್‌ನ 6ನೇ ಅಧ್ಯಕ್ಷರಾಗಿ ನೇಮಕವಾಗಿದ್ದರು. ಆದಾಗ್ಯೂ, ಅವರನ್ನು ಟಾಟಾ ನಿರ್ದೇಶಕರ ಮಂಡಳಿಯು 2016ರ ಅಕ್ಟೋಬರ್ 24ರಂದು ವಜಾಗೊಳಿಸಿತ್ತು. ಅಲ್ಲದೇ, ಟಾಟಾ ಸನ್ಸ್ ಮತ್ತು ಸೈರಸ್ ಮಿಸ್ತ್ರಿ ನಡುವೆ ವಿವಾದವಿತ್ತು. ಇದರಿಂದಲೇ ಸಾಕಷ್ಟು ಸುದ್ದಿಯಾಗಿದ್ದರು. ಬಳಿಕ ಈ ವಿವಾದ ಪ್ರಕರಣ ನೇರವಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಡಿವೈಡರ್​ಗೆ ಡಿಕ್ಕಿ ಹೊಡೆದು ದುರಂತ:ಅಹಮದಾಬಾದ್​ನಿಂದ ಮುಂಬೈಗೆ ಸೈರಸ್ ಮಿಸ್ತ್ರಿ ಮರ್ಸಿಡಿಸ್ ಕಾರಿನಲ್ಲಿ ಬರುತ್ತಿದ್ದರು. ಮಧ್ಯಾಹ್ನ 3.15ರ ಸುಮಾರಿಗೆ ಮುಂಬೈನ ಸಮೀಪದ ಪಾಲ್ಘರ್​ ಜಿಲ್ಲೆಯ ಸೂರ್ಯ ನದಿಯ ಸೇತುವೆ ಮೇಲೆ ಡಿವೈಡರ್​ಗೆ ಕಾರು ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಮಹತ್ವದ ಸಂಗತಿಯೆಂದರೆ, ಮಿಸ್ತ್ರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಸೀಟ್​​ಬೆಲ್ಟ್​ ಹಾಕಿರಲಿಲ್ಲ. ಒಂದು ವೇಳೆ ಸೀಟ್‌ ಬೆಲ್ಟ್‌ ಧರಿಸಿದ್ದಿದ್ದರೆ ಸ್ವಲ್ಪ ಅಪಾಯ ತಪ್ಪುತ್ತಿತ್ತೇನೋ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details