ಅರ್ರಾ (ಬಿಹಾರ):ಕೌಟುಂಬಿಕ ಕಲಹ ಹಿನ್ನೆಲೆ ಪತಿಯೋರ್ವ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಬಿಹಾರದ ಭೋಜ್ಪುರದ ನಾವಡ ಪೊಲೀಸ್ ಠಾಣೆ ವ್ಯಾಪ್ತಿಯ ಅನಿತ್ ಬಡಾವಣೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಜಗದೀಶ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಆಯರ್ ನಿವಾಸಿ ಅಣ್ಣು ಖಾತೂನ್ ಎಂದು ಗುರುತಿಸಲಾಗಿದೆ. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಮೃತ ಮಹಿಳೆ ರೀಲ್ಸ್ ಮಾಡುತ್ತಿದ್ದು, ಇದು ಆಕೆಯ ಪತಿಗೆ ಇಷ್ಟವಿರಲಿಲ್ಲ.
ರೀಲ್ಸ್ ಮಾಡುವ ವಿಚಾರವಾಗಿ ಗಲಾಟೆ:ರೀಲ್ಸ್ ಮಾಡುವ ವಿಚಾರವಾಗಿ ಅನಿಲ್ ಹಾಗೂ ಆತನ ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಭಾನುವಾರವೂ ಇದೇ ವಿಚಾರವಾಗಿ ಜಗಳವಾಗಿದೆ. ಅನಿಲ್ ರೀಲ್ಸ್ ಮಾಡುವ ಆ್ಯಪ್ ಡಿಲೀಟ್ ಮಾಡುವಂತೆ ಪತ್ನಿಗೆ ಹೇಳಿದ್ದಾನೆ. ಆದ್ರೆ ಆಕೆ ಇದಕ್ಕೆ ನಿರಾಕರಿಸಿದ್ದಾಳೆ. ಇದಾದ ನಂತರ ಕೋಪಗೊಂಡ ಅನಿಲ್ ಕೋಪದಿಂದ ಆಕೆಯ ಕತ್ತು ಸೀಳಿದ್ದಾನೆ.
ಪ್ರೇಮ ವಿವಾಹವಾಗಿದ್ದ ದಂಪತಿ: ಹತ್ಯೆ ಬಳಿಕ ರಾತ್ರಿಯಿಡೀ ಆಕೆಯ ಶವದ ಬಳಿಯೇ ಕುಳಿತಿದ್ದಾನೆ. ಬೆಳಗ್ಗೆ ಘಟನೆ ಬಗ್ಗೆ ನಾವಡ ಪೊಲೀಸ್ ಠಾಣೆಗೆ ಮಾಹಿತಿ ಲಭಿಸಿದೆ. ಬಳಿಕ ನಾವಡ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮೃತ ದೇಹವನ್ನು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿದ್ದಾರೆ. ಜಗದೀಶ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಆಯರ್ ನಿವಾಸಿ ಅಣ್ಣು ಖಾತೂನ್ ಅವರು ಐತ್ನ ಶಿವಶಂಕರ್ ಚೌಧರಿ ಅವರ ಪುತ್ರ ಅನಿಲ್ ಚೌಧರಿ ಅವರನ್ನು 10 ವರ್ಷಗಳ ಹಿಂದೆ ವಿವಾಹವಾಗಿದ್ದರು ಎಂದು ಹೇಳಲಾಗುತ್ತಿದೆ. ಇಬ್ಬರ ನಡುವೆ ಪ್ರೇಮ ವಿವಾಹವಾಗಿತ್ತು.
ರೀಲ್ಸ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಗ ಮತ್ತು ಸೊಸೆ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎಂದು ಪತ್ನಿಯನ್ನು ಕೊಂದ ಅನಿಲ್ ಚೌಧರಿ ತಂದೆ ಶಿವಶಂಕರ್ ಚೌಧರಿ ತಿಳಿಸಿದ್ದಾರೆ. ಸೊಸೆ ಅಣ್ಣು ಮೊಬೈಲ್ನಲ್ಲಿ ವಿಡಿಯೋ ಮಾಡಿ ಶೇರ್ ಮಾಡುತ್ತಿದ್ದಳು. ಇದಕ್ಕೆ ಅನಿಲ್ ಆಕ್ಷೇಪ ವ್ಯಕ್ತಪಡಿಸಿದ್ದು, ರೀಲ್ಸ್ ಮಾಡಬೇಡ ಎಂದು ಪತ್ನಿಗೆ ಹಲವು ಬಾರಿ ಮನವಿ ಮಾಡಿದ್ದ ಎಂದಿದ್ದಾರೆ.