ನವದೆಹಲಿ:ಟೋಕಿಯೋ ಪ್ಯಾರಾಲಿಂಪಿಕ್ಸ್ನ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಎಸ್ಎಲ್ - 4 ಈವೆಂಟ್ನಲ್ಲಿ ಬೆಳ್ಳಿ ಗೆದ್ದ ಸುಹಾಸ್ ಯತಿರಾಜ್ಗೆ ಪತ್ನಿ ರಿತು ಶುಭಕೋರಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುಹಾಸ್ ಪ್ಯಾರಾಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದು ಸಾಧನೆ ಮಾಡಿದ್ದರು.
ಇನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಹಾಸ್ ಎಲ್ವೈ ಅವರ ಪತ್ನಿ ರಿತು ಸುಹಾಸ್, ಗಾಜಿಯಾಬಾದ್ನಲ್ಲಿ ಸಹಾಯಕ ವಿಭಾಗಾಧಿಕಾರಿಯಾಗಿದ್ದಾರೆ. ಪತಿಯ ಸಾಧನೆ ಬಗ್ಗೆ ಮಾತನಾಡಿದ ಅವರು, "ಸುಹಾಸ್ ಪದಕ ಗೆದ್ದ ಕ್ಷಣ ನನಗೆ ಮಾತ್ರವಲ್ಲ ಇಡೀ ದೇಶಕ್ಕೆ ಸಂತೋಷದ ಕ್ಷಣವಾಗಿದೆ. 6 ವರ್ಷಗಳಲ್ಲಿ ನನ್ನ ಪತಿ ಆಟ ಆಡುವುದನ್ನು ನಾನು ಸಂಪೂರ್ಣವಾಗಿ ನೋಡಿಲ್ಲ. ಆದರೆ, ಪ್ಯಾರಾಲಿಂಪಿಕ್ಸ್ನಲ್ಲಿ ಆಟವನ್ನು ನೋಡುವಾಗ ಆತ ತನ್ನನ್ನು ತಾನು ತೊಡಗಿಸಿಕೊಂಡ ರೀತಿ ಬಗ್ಗೆ ನನಗೆ ಮನವರಿಕೆ ಆಯಿತು" ಎಂದು ಹೇಳಿದರು.