ನವದೆಹಲಿ:ಪತಿಯ ಆದಾಯ ಎಷ್ಟು?, ಆಸ್ತಿಯ ವಿವರಗಳನ್ನು ಅವರು ಒಂದಾಗಿದ್ದಾಗ ತಿಳಿದುಕೊಳ್ಳುವುದು ಸಾಮಾನ್ಯ. ಆದರೆ, ಅವರಿಬ್ಬರು ಬೇರೆಯಾದಾಗ ಈ ಮಾಹಿತಿ ಪಡೆಯುವುದು ಹೇಗೆ?. ವಿಚ್ಛೇದನಕ್ಕೆ ಮುಂದಾದಾಗ ಭಾವನೆಗಳ ಜೊತೆಗೆ ಹಣಕಾಸಿನ ವಿಚಾರಗಳೂ ಮಹತ್ವ ಪಡೆಯುತ್ತವೆ. ಇಲ್ಲೊಬ್ಬ ಗೃಹಿಣಿ ತಮ್ಮ ಪತಿಯ ಆದಾಯವನ್ನು ತಿಳಿದುಕೊಳ್ಳಲು ಆರ್ಟಿಐ ಹಕ್ಕನ್ನು ಬಳಸಿಕೊಂಡಿದ್ದಾರೆ.
ಸಂಜು ಗುಪ್ತಾ ಎಂಬುವರು ತನ್ನ ಗಂಡನಿಂದ ವಿಚ್ಛೇದನಕ್ಕೆ ಮುಂದಾಗಿದ್ದು, ಅವರು ತಮ್ಮ ಪತಿಯ ಆಸ್ತಿಯ ವಿವರ ತಿಳಿದುಕೊಳ್ಳಲು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಾರೆ. ಪತಿ ತಮ್ಮ ವೈಯಕ್ತಿಕ ವಿವರ ನೀಡಲು ನಿರಾಕರಿಸಿದ್ದರಿಂದ ಅಧಿಕಾರಿಗಳು ಸಂಜು ಗುಪ್ತಾರಿಗೆ ಮಾಹಿತಿ ನೀಡಿಲ್ಲ.
ಬಳಿಕ ಮಹಿಳೆ ಈ ಬಗ್ಗೆ ಎಫ್ಎಎಗೆ(ಫಸ್ಟ್ ಅಪಿಲೇಟ್ ಅಥಾರಿಟಿ)ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಅರ್ಜಿ ಪರಿಶೀಲಿಸಿದ ಎಪ್ಎಎ ಮಾಹಿತಿ ನೀಡಲಾಗಲ್ಲ ಎಂದಿದ್ದ ಅಧಿಕಾರಿಯ ನಿರ್ಣಯವನ್ನು ಎತ್ತಿ ಹಿಡಿದಿದೆ. ಇದರಿಂದ ಮಹಿಳೆ ನೇರವಾಗಿ ಕೇಂದ್ರ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.