ಲಖನೌ (ಉತ್ತರ ಪ್ರದೇಶ):ಕೌಟುಂಬಿಕ ಕಲಹದಿಂದ ತವರು ಮನೆ ಸೇರಿದ್ದ ಪತ್ನಿಯನ್ನು ಮನವೊಲಿಸಿ ಕರೆತರಲು ತೆರಳಿದ್ದ ಪತಿಯ ನಾಲಿಗೆಯನ್ನೇ ಮಹಿಳೆಯೊಬ್ಬರು ಕಚ್ಚಿರುವ ವಿಲಕ್ಷಣ ಘಟನೆ ಲಖನೌದ ಠಾಕೂರ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ಠಾಕೂರ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಮುನ್ನಾ ಹಾಗೂ ಸಲ್ಮಾ ಎಂಬ ದಂಪತಿ ವಾಸವಾಗಿದ್ದವರು. ಮದುವೆಯಾಗಿ ಕೆಲ ವರ್ಷಗಳ ಬಳಿಕ ಗಂಡ -ಹೆಂಡತಿ ನಡುವೆ ಜಗಳ ನಡೆದಿದೆ. ಇದರಿಂದ ಮನನೊಂದ ಪತ್ನಿ ತನ್ನ ಮಕ್ಕಳೊಂದಿಗೆ ತಾಯಿಯ ಮನೆಯಲ್ಲಿ ತೆರಳಿ ಅಲ್ಲಿಯೇ ವಾಸವಾಗಿದ್ದರು. ಶುಕ್ರವಾರ, ಪತಿ ತನ್ನ ಹೆಂಡತಿ ಮತ್ತು ಮಕ್ಕಳನ್ನು ಕರೆದುಕೊಂಡು ಹೋಗಲು ಪತ್ನಿ ಮನೆಗೆ ಬಂದಾಗ, ಹೆಂಡತಿ ಬರಲು ನಿರಾಕರಿಸಿದ್ದಾರೆ. ಈ ವೇಳೆ, ಇಬ್ಬರ ನಡುವೆ ಜಗಳ ಹೆಚ್ಚಾಗಿದ್ದು, ಕೋಪಗೊಂಡ ಪತ್ನಿ ತನ್ನ ಹಲ್ಲುಗಳಿಂದ ಪತಿಯ ನಾಲಿಗೆಯನ್ನು ಕಚ್ಚಿದ್ದಾರೆ. ಆಗ ಪತಿಯ ನಾಲಿಗೆ ಬಿದ್ದು ಹೋಗಿದೆ ಎಂದು ಹೇಳಲಾಗುತ್ತಿದೆ. ಪರಿಣಾಮ ಪತಿ ಗಾಯಗೊಂಡು ಅಲ್ಲೇ ಕೆಳಕ್ಕೆ ಕುಸಿದಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ:ಗೂಡಂಗಡಿಗೆ ನುಗ್ಗಿ ಸಿಗರೇಟ್, 30 ಸಾವಿರ ಹಣ ಕದ್ದ ಆರೋಪಿ ಸೆರೆ- ವಿಡಿಯೋ
ಹಲವು ಬಾರಿ ರಾಜಿ ಒಪ್ಪಂದ:ಹಲವು ವರ್ಷಗಳ ಹಿಂದೆ ಮುನ್ನಾ ಅವರು ಠಾಕೂರ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಸಲ್ಮಾ ಎಂಬ ಹುಡುಗಿಯನ್ನು ಮದುವೆಯಾಗಿದ್ದರು. ಮದುವೆಯಾಗಿ ಕೆಲ ವರ್ಷಗಳ ಬಳಿಕ ಇಬ್ಬರ ನಡುವೆ ಜಗಳ ನಡೆದಿದೆ. ಈ ಹಿನ್ನೆಲೆಯಲ್ಲಿ ಸಲ್ಮಾ ತನ್ನ ಮಕ್ಕಳೊಂದಿಗೆ ತಾಯಿಯ ಮನೆಯಲ್ಲಿ ವಾಸವಾಗಿದ್ದರು. ಇಬ್ಬರ ನಡುವೆ ಹಲವು ಬಾರಿ ರಾಜಿ ಒಪ್ಪಂದ ನಡೆದಿದ್ದರೂ ಪತ್ನಿ ಅತ್ತೆಯ ಮನೆಗೆ ಹೋಗಲು ನಿರಾಕರಿಸಿದ್ದರಂತೆ. ಪತಿ ಮುನ್ನಾ ಶುಕ್ರವಾರ ಬೆಳಗ್ಗೆ ಮಕ್ಕಳನ್ನು ಭೇಟಿಯಾಗಲು ಪತ್ನಿಯ ತಾಯಿ ಮನೆಗೆ ಹೋಗಿದ್ದರು. ಮಕ್ಕಳನ್ನು ಭೇಟಿಯಾಗಲು ಮುಂದಾದ ಪತಿಗೆ ಪತ್ನಿ ಅನುಮತಿಯನ್ನು ನೀಡಿಲ್ಲ ಎನ್ನಲಾಗಿದೆ. ಆಗ ಮುನ್ನಾ ಮಕ್ಕಳನ್ನು ಭೇಟಿಯಾಗಲೇಬೇಕು ಎಂದು ಪಟ್ಟು ಹಿಡಿದಿದ್ದರಂತೆ. ಆಗ ಇಬ್ಬರ ನಡುವೆ ಸಾಕಷ್ಟು ಜಟಾಪಟಿ ನಡೆದಿದೆ. ಅಷ್ಟರಲ್ಲಿ ಕೋಪಗೊಂಡ ಸಲ್ಮಾ ತನ್ನ ಹಲ್ಲಿನಿಂದ ಗಂಡನ ನಾಲಿಗೆಯನ್ನು ಕತ್ತರಿಸಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಮುನ್ನಾ ಗಾಯಗೊಂಡು ಅಲ್ಲೇ ಬಿದ್ದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಪೆರೋಲ್ ಮೇಲೆ ಹೊರಗಡೆ ಬಂದಿದ್ದ ವ್ಯಕ್ತಿ ನಾಪತ್ತೆ: ಪತ್ತೆ ಹಚ್ಚಿದವರಿಗೆ ಒಂದು ಲಕ್ಷ ರೂ ಬಹುಮಾನ
ಪೊಲೀಸ್ ಅಧಿಕಾರಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಿಷ್ಟು: 'ಪತಿ-ಪತ್ನಿಯ ನಡುವೆ ಹಲವು ವರ್ಷಗಳಿಂದ ಜಗಳ ನಡೆಯುತ್ತಿತ್ತು. ಈ ವೇಳೆ ಪತ್ನಿ ಪತಿಯಿಂದ ಬೇರ್ಪಟ್ಟು ಮಕ್ಕಳೊಂದಿಗೆ ಪೋಷಕರ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ಬೆಳಗ್ಗೆ ಪತಿ ಮಕ್ಕಳನ್ನು ಭೇಟಿಯಾಗಲು ಪತ್ನಿಯ ತಾಯಿಯ ಮನೆಗೆ ತೆರಳಿದ್ದ ವೇಳೆ ಜಗಳವಾಡಿದ ಪತ್ನಿ ಗಂಡನ ನಾಲಿಗೆಯನ್ನು ಹಲ್ಲಿನಿಂದ ಕಚ್ಚಿ ಗಾಯಗೊಳಿಸಿದ್ದರಿಂದ ಇಡೀ ನಾಲಿಗೆ ಹೊರ ಬಿದ್ದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಪತ್ನಿಯ ವಿರುದ್ದ ಪ್ರಕರಣ ದಾಖಲಾಗಿದೆ. ಅವರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು' ಪಶ್ಚಿಮ ಎಡಿಸಿಪಿ ಚಿರಂಜೀವ್ ನಾಥ್ ಸಿಂಘಾ ತಿಳಿಸಿದ್ದಾರೆ.
ಇದನ್ನೂ ಓದಿ :ಆನ್‌ಲೈನ್ ಶಾಪಿಂಗ್ ವಂಚನೆ:ಆರ್ಡರ್ ಮಾಡಿದ ಮೊಬೈಲ್ ಫೋನ್ ಬದಲಾಗಿ ಬಂತು ಡಮ್ಮಿ ಫೋನ್, ಲೈಫ್ ಬಾಯ್ ಸೋಪ್!