ನಾಂದೇಡ್ (ಮಹಾರಾಷ್ಟ್ರ): ಕೊರೊನಾ ಸೋಂಕಿನಿಂದಾಗಿ ಪತಿ ಸಾವನ್ನಪ್ಪಿದ ಹಿನ್ನೆಲೆ ಪತ್ನಿ ತನ್ನ 3 ವರ್ಷದ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಂದೇಡ್ನಲ್ಲಿ ಸಂಭವಿಸಿದೆ. ಪತಿ ಸಾವನ್ನಪ್ಪಿದ ಮರುದಿನವೇ ಆಕೆ ತನ್ನ ಮಗನೊಂದಿಗೆ ಕೊಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೊರೊನಾ ಸೋಂಕಿನಿಂದ ಪತಿ ಸಾವು: 3 ವರ್ಷದ ಮಗನೊಂದಿಗೆ ಪತ್ನಿ ಆತ್ಮಹತ್ಯೆ! - ಮಗನೊಂದಿಗೆ ತಾಯಿ ಆತ್ಮಹತ್ಯೆ
ಪತಿ ಕೋವಿಡ್ಗೆ ತುತ್ತಾಗಿ ಮೃತಪಟ್ಟಿದ್ದು, ಇದಾದ ಬಳಿಕ ಹತಾಶೆ ಮತ್ತು ಅಸಹಾಯಕತೆಯಿಂದ ಪತ್ನಿ ಮಗುವಿನೊಂದಿಗೆ ಕೊಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
![ಕೊರೊನಾ ಸೋಂಕಿನಿಂದ ಪತಿ ಸಾವು: 3 ವರ್ಷದ ಮಗನೊಂದಿಗೆ ಪತ್ನಿ ಆತ್ಮಹತ್ಯೆ! wife-commits-suicide-with-three-year-old-child-after-corona-positive-husbands-death](https://etvbharatimages.akamaized.net/etvbharat/prod-images/768-512-11416652-thumbnail-3x2-med.jpg)
wife-commits-suicide-with-three-year-old-child-after-corona-positive-husbands-death
ಅವರು ಜೀವನೋಪಾಯಕ್ಕಾಗಿ ಚಾಪೆಗಳನ್ನು ಮಾರುತ್ತಿದ್ದರು ಮತ್ತು ಜೊತೆಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ದಿನದೂಗಿಸಲು ಹೆಣಗಾಡುತ್ತಿದ್ದ ಸಂದರ್ಭದಲ್ಲಿ ಪತಿ ಕೋವಿಡ್ಗೆ ತುತ್ತಾಗಿದ್ದು, ಆತನನ್ನು ಲೋಹಾದ ಕೋವಿಡ್ ಕೇಂದ್ರಕ್ಕೆ ದಾಖಲಿಸಲಾಗಿತ್ತು.
ಆದರೆ ಮೂರು ದಿನಗಳ ನಂತರ ಆತ ಮೃತಪಟ್ಟಿದ್ದು, ಇದಾದ ಬಳಿಕ ಹತಾಶೆ ಮತ್ತು ಅಸಹಾಯಕತೆಯಿಂದ ಪತ್ನಿ ಮಗುವಿನೊಂದಿಗೆ ಕೊಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೀಗ ಈ ದಂಪತಿಯ ಇನ್ನೊಬ್ಬ ಮಗ ಹಾಗೂ ಮಗಳು ಅನಾಥರಾಗಿದ್ದಾರೆ. ಲೋಹಾ ಪೊಲೀಸರು ಆಕಸ್ಮಿಕ ಸಾವಿನ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Last Updated : Apr 15, 2021, 8:22 PM IST