ದುಮ್ಕಾ, ಜಾರ್ಖಂಡ್: ಹೇಳದೇ ಕೇಳದೇ ತವರಿಗೆ ಹೋಗಿದ್ದಲ್ಲದೇ, ಗಂಡನ ಮನೆಗೆ ಬರಲು ಒಪ್ಪಲಿಲ್ಲ ಎಂಬ ಕಾರಣಕ್ಕಾಗಿ ಕೋಪಗೊಂಡ ಪತಿ ಮಹಾಶಯ ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟ ದಾರುಣ ಘಟನೆ ಜಾರ್ಖಂಡ್ನಲ್ಲಿ ಬುಧವಾರ ನಡೆದಿದೆ. ಮಹಿಳೆ ಗಂಭೀರ ಗಾಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಪಿಷ್ಠ ಪತಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಕಿತ್ತಾಡಿಕೊಂಡ ದಂಪತಿ ಜಾರ್ಖಂಡ್ನ ದುಮ್ಕಾದ ನಿವಾಸಿಯಾಗಿದ್ದಾರೆ. ಪತಿ ಯಾವುದೋ ಕಾರಣಕ್ಕಾಗಿ ಬೇರೆ ಊರಿಗೆ ತೆರಳಿದಾಗ ಪತ್ನಿ ಅಜ್ಜಿಯ ಮನೆಗೆ ಹೋಗಿದ್ದಾರೆ. ಬಳಿಕ ರಾತ್ರಿ ವೇಳೆ ಮನೆಗೆ ವಾಪಸ್ ಆದ ಪತಿರಾಯ, ಪತ್ನಿ ಇಲ್ಲದಿರುವುದು ಕೋಪ ತರಿಸಿದೆ. ಬಳಿಕ ಆಕೆ ಅಜ್ಜಿಯ ಮನೆಗೆ ಹೋಗಿರಬಹುದು ಎಂದು ಭಾವಿಸಿ ಅಲ್ಲಿಗೆ ಬಂದಿದ್ದಾನೆ.
ಪತ್ನಿಯನ್ನು ಅಜ್ಜಿಯ ಮನೆಯಲ್ಲಿ ಕಂಡ ಪತಿಗೆ ವಿಪರೀತ ಕೋಪ ಬಂದಿದೆ. ತನಗೆ ಹೇಳದೇ ಇಲ್ಲಿಗೆ ಯಾಕೆ ಬಂದೆ ಎಂದು ಗದರಿದ್ದಾರೆ. ಬಳಿಕ ಮನೆಗೆ ಬರಲು ಕರೆದಿದ್ದಾರೆ. ಆದರೆ, ಪತ್ನಿ ನಾಳೆ ಬರುವೆ ಎಂದು ಹೇಳಿದ್ದಾರೆ. ಇದರಿಂದ ಕ್ರೋಧಗೊಂಡ ಪತಿ, ಬಾರದಿದ್ದರೆ ಪೆಟ್ರೋಲ್ ಹಾಕಿ ಸುಡುವೆ ಎಂದು ಬೆದರಿಸಿದ್ದಾನೆ.