ಕರ್ನೂಲ್ (ಆಂಧ್ರಪ್ರದೇಶ):ತನ್ನ ಪ್ರೀತಿಯನ್ನು ಶಾಶ್ವತವಾಗಿರಿಸಲು ಬಯಸಿದ ಮಹಿಳೆಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತಿಯ ಪ್ರತಿಮೆಯನ್ನು ಕೆತ್ತಿಸಿ, ಆತನ ಹೆಸರಿನಲ್ಲಿ ದೇವಾಲಯವನ್ನೇ ನಿರ್ಮಿಸಿ ನಿತ್ಯ ಪೂಜಿಸುತ್ತಿದ್ದಾರೆ.
ಹೌದು.., ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಂದ್ಯಾಳ ನಿವಾಸಿ ಪದ್ಮಾ (43), 2017 ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತನ್ನ ಪತಿ ಅಂಕಿ ರೆಡ್ಡಿಯನ್ನು ಕಳೆದುಕೊಂಡಿದ್ದರು. ಈ ಘಟನೆಯಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ಆಕೆ, ಗಂಡನ ನೆನಪಿಗೆ ಏನಾದರೂ ಮಾಡಲು ಯೋಚಿಸಿದ್ದಾರೆ. ಇದೀಗ ಪತಿಯ ಅಂತ್ಯಕ್ರಿಯೆ ನಡೆಸಿದ್ದ ಸ್ಥಳದಲ್ಲಿ ಮಕ್ಕಳ ಸಹಾಯದಿಂದ ಅಮೃತಶಿಲೆಯಿಂದ ದೇಗುಲ ಕಟ್ಟಿಸಿದ್ದಾರೆ.