ಎನ್‌ಟಿಆರ್, ಆಂಧ್ರಪ್ರದೇಶ:ಜಿಲ್ಲೆಯ ನಂದಿಗಾಮದಲ್ಲಿ ದುರಂತ ಘಟನೆಯೊಂದು ನಡೆದಿದೆ. ಪತಿಯೊಬ್ಬ ತನ್ನ ಮೊಬೈಲ್ನ ಇನ್ಸ್ಟಾಗ್ರಾಮ್ನಲ್ಲಿ ಮೊದಲ ಪತ್ನಿಯ ರೀಲ್ಸ್ ನೋಡುತ್ತಿದ್ದ. ಇದರಿಂದ ಕೋಪಗೊಂಡ ಎರಡನೇ ಪತ್ನಿ ತನ್ನ ಪತಿಯ ಗುಪ್ತಾಂಗವನ್ನು ಬ್ಲೇಡ್‌ನಿಂದ ಗಾಯಗೊಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಗಾಯಗೊಂಡ ವ್ಯಕ್ತಿಯನ್ನು ಚಂದೇರ್ಲಪಾಡು ತಾಲೂಕಿನ ಮುಪ್ಪಳ್ಳ ಗ್ರಾಮದ ಕೋಟ ಆನಂದ ಬಾಬು ಎಂದು ಗುರುತಿಸಲಾಗಿದೆ. ಐದು ವರ್ಷದ ಹಿಂದೆ ವರಮ್ಮ ಅವರನ್ನು ಎರಡನೇ ಮದುವೆಯಾಗಿದ್ದರು. ನಿನ್ನೆ ರಾತ್ರಿ ಆನಂದ್ ತನ್ನ ಮೊದಲ ಪತ್ನಿಯ ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ನೋಡುತ್ತಿದ್ದನು. ಇದರ ಬಗ್ಗೆ ವರಮ್ಮ ತನ್ನ ಪತಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ, ಇಬ್ಬರ ನಡುವೆ ವಾಗ್ವಾದ ನಡೆದು ಮಾರಾಮಾರಿ ನಡೆದಿದೆ. ಇದರಿಂದ ವರಮ್ಮನ ಬ್ಲೇಡ್‌ನಿಂದ ಪತಿ ಆನಂದಬಾಬು ಮರ್ಮಾಂಗಕ್ಕೆ ಗಾಯಗೊಳಿಸಿದ್ದಾರೆ ಎಂದು ಸಂಬಂಧಿಕರ ಮಾತಾಗಿದೆ.
ತೀವ್ರ ರಕ್ತಸ್ರಾವವಾದ ಕಾರಣ ಸಂತ್ರಸ್ತನನ್ನು ನಂದಿಗಾಮ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂದ ಬಾಬು ಅವರನ್ನು ಉತ್ತಮ ಚಿಕಿತ್ಸೆಗಾಗಿ ವಿಜಯವಾಡ ಆಸ್ಪತ್ರೆಗೆ ಶಿಫಾರಸು ಮಾಡಲಾಗಿತ್ತು. ನಂದಿಗಾಮ ಪೊಲೀಸರು ಸಂತ್ರಸ್ತನ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸೋದರಮಾವನಿಂದ ಅತ್ಯಾಚಾರ:ಗುಂಟೂರು ಜಿಲ್ಲೆಯಲ್ಲಿ ಅಪ್ರಾಪ್ತೆಯ ಮೇಲೆ ಸೋದರ ಮಾವನೇ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಮನೆಯಲ್ಲಿ ಪೋಷಕರು ಇಲ್ಲದ ವೇಳೆ ಬಾಲಕಿಗೆ ಸೋದರಮಾವ ಮತ್ತು ಆತನ ಸ್ನೇಹಿತ ಸೇರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಪೋಷಕರು ಬಂದಾಗ, ಬಾಲಕಿ ಅತ್ಯಾಚಾರದ ಬಗ್ಗೆ ಮಾಹಿತಿ ತಿಳಿಸಿದ್ದಾಳೆ. ಬಳಿಕ ಬಾಲಕಿ ಪೋಷಕರು ಸೋದರಮಾವ ಮತ್ತು ಆತನ ಸ್ನೇಹಿತರನ್ನು ಪ್ರಶ್ನಿಸಿದರು. ಈ ವೇಳೆ, ಪೊಲೀಸರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ.
ಎರಡು ದಿನಗಳ ನಂತರ, ಪೋಷಕರು ಕೆಲಸಕ್ಕೆ ಹೋದ ನಂತರ ಮಧ್ಯಾಹ್ನ ಹುಡುಗಿಯ ಮೇಲೆ ಮತ್ತೆ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದ ಬಾಲಕಿಯ ಪೋಷಕರು ಮಂಗಳಗಿರಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಗುಂಟೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ತನಿಖೆ ಮುಂದುವರಿದಿದೆ.
ಅಪಘಾತದಲ್ಲಿ ತಂದೆ ಮಗ ಸಾವು: ರಸ್ತೆ ಅಪಘಾತದಲ್ಲಿ ತಂದೆ-ಮಗ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯ ನರಸಿಂಗಿ ತಾಲೂಕಿನ ವಲ್ಲೂರಿನಲ್ಲಿ ನಡೆದಿದೆ. ನರಸಿಂಗಿ ನಿವಾಸಿ ತೌರ್ಯ ನಾಯ್ಕ್ (50) ತನ್ನ ಕಿರಿಯ ಮಗ ಅಂಕಿತ್ (10) ಜತೆ ಕಾರಿನಲ್ಲಿ ಚೇಗುಂಟಕ್ಕೆ ಹೊರಟಿದ್ದರು. ವಲ್ಲೂರು ಅರಣ್ಯ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರ್ ಒಡೆದ ಪರಿಣಾಮ ಕಾರು ಡಿವೈಡರ್ ದಾಟಿ ರಾಂಗ್ ರೂಟ್‌ಗೆ ನುಗ್ಗಿದೆ. ಅದೇ ಸಮಯದಲ್ಲಿ ಹೈದರಾಬಾದ್ ಕಡೆಯಿಂದ ಬರುತ್ತಿದ್ದ ಕಂಟೈನರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ತೌರ್ಯ ನಾಯ್ಕ ಈ ಹಿಂದೆ ನರಸಿಂಗಿ ತಾಲೂಕು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ರಾಮಯಂಪೇಟೆ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಓದಿ:ಮಣಿಪುರ ಬಳಿಕ ಪಶ್ಚಿಮಬಂಗಾಳದಲ್ಲಿ ಸಾರ್ವಜನಿಕವಾಗಿ ಮಹಿಳೆಯರ ವಿವಸ್ತ್ರಗೊಳಿಸಿ ಅಮಾನುಷ ಹಲ್ಲೆ