ಹಿಸಾರ್ (ಹರಿಯಾಣ): ಊಟ ರುಚಿಕರವಾಗಿಲ್ಲ ಎಂದು ಆರಂಭವಾದ ಪತಿ - ಪತ್ನಿ ನಡುವಿನ ಗಲಾಟೆಯಲ್ಲಿ ಪತಿ ಆಸ್ಪತ್ರೆ ಪಾಲಾಗಿದ್ದಾನೆ. ಇಬ್ಬರ ನಡುವಿನ ಗಲಾಟೆ ತಾರಕಕ್ಕೇರಿ ಪತ್ನಿ ರಾಡ್ನಿಂದ ಹಲ್ಲೆ ನಡೆಸಿದ್ದು, ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಿಸಾರ್ನ ಬರ್ವಾಲಾದಲ್ಲಿ ನಡೆದಿದೆ.
ಊಟ ಮಾಡುವಾಗ ಊಟದಲ್ಲಿ ಉಪ್ಪಿಲ್ಲ ಎಂದು ಪತಿ ದಿನೇಶ್ ಗಲಾಟೆ ತೆಗೆದಿದ್ದಾನೆ. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇಬ್ಬರ ನಡುವೆ ಗಲಾಟೆ ಜೋರಾದಾಗ ಪಕ್ಕದಲ್ಲೇ ಇದ್ದ ರಾಡ್ನಿಂದ ಪತ್ನಿ ಬಿಂದಿಯಾ ಪತಿ ದಿನೇಶ್ ತಲೆಗೆ ಹೊಡೆದಿದ್ದಾಳೆ.
ರಾಡ್ನಿಂದ ಬಲವಾಗಿ ಪೆಟ್ಟು ಬಿದ್ದ ಹಿನ್ನೆಲೆ ಗಾಯಗೊಂಡ ದಿನೇಶ್ಗೆ ರಕ್ತಸ್ರಾವವಾಗಿದೆ. ತಕ್ಷಣ ಆತನನ್ನು ಅಕ್ಕಪಕ್ಕದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಪತ್ನಿ ಬಿಂದಿಯಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
2011ರಲ್ಲಿ ಇಬ್ಬರಿಗೂ ವಿವಾಹವಾಗಿದ್ದು, ಇಬ್ಬರ ನಡುವೆ ಹಲವು ಬಾರಿ ಗಲಾಟೆ ನಡೆದಿದೆ ಎಂದು ಅಕ್ಕಪಕ್ಕದವರು ಮಾಹಿತಿ ನೀಡಿದ್ದಾರೆ. ಆದರೆ, ನಿನ್ನೆ ರಾತ್ರಿ ಗಲಾಟೆ ವಿಕೋಪಕ್ಕೆ ತಿರುಗಿ ಪತಿ ಮೇಲೆ ಹಲ್ಲೆ ನಡೆಸಿದ್ದಾಳೆ.
ಓದಿ:ಮಹಿಳೆಯರೊಂದಿಗೆ ಅಸಭ್ಯ ವರ್ತನೆ: ‘ಪೋಲಿ’ ಪೊಲೀಸಪ್ಪನಿಗೆ ಹಿಗ್ಗಾಮುಗ್ಗ ಜಾಡಿಸಿದ ಜನತೆ: Video