ಸಂಗಾರೆಡ್ಡಿ:ಹಬ್ಬದ ದಿನದಂದೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪತ್ನಿಯನ್ನು ಕಾಪಾಡಲು ತೆರಳಿದ ಪತಿಯೂ ಬೆಂಕಿಗಾಹುತಿಯಾಗಿರುವ ಘಟನೆ ಪುಲ್ಕಲ್ ತಾಲೂಕಿನ ಲಿಂಗಂಪಲ್ಲಿಯಲ್ಲಿ ನಡೆದಿದೆ.
ಈ ಗ್ರಾಮದ ನಿವಾಸಿ ಎಲ್ಲೇಶ್ ಮತ್ತು ಸುನೀತಾ ದಂಪತಿಗೆ ಮುದ್ದಾದ ಮಗು ಇದೆ. ದಂಪತಿ ಮಧ್ಯೆ ಆಗಾಗ್ಗೆ ಕೌಟುಂಬಿಕ ಕಲಹಗಳು ನಡೆಯುತ್ತಿದ್ದವು. ಆದ್ರೆ ಇಂದು ಇವರ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಪತ್ನಿ ಸುನೀತಾ ಹಿಂದೆ-ಮುಂದೆ ನೋಡದೆ ಮೈ-ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಧಗ ಧಗನೇ ಬೆಂಕಿಯಿಂದ ಉರಿಯುತ್ತಿದ್ದುದನ್ನು ನೋಡಿದ ಎಲ್ಲೇಶ್ ಪತ್ನಿಯನ್ನ ಕಾಪಾಡಲು ಮುಂದಾಗಿದ್ದಾನೆ. ಆದ್ರೆ ಆ ಬೆಂಕಿಯ ಕೆನ್ನಾಲಿಗೆ ಇಬ್ಬರಿಗೂ ಆವರಿಸಿದೆ. ಇದನ್ನು ನೋಡಿದ ಮಗಳು ಗಟ್ಟಿಯಾಗಿ ಕಿರುಚಿಕೊಂಡಿದ್ದಾಳೆ.