ಕರ್ನಾಟಕ

karnataka

ETV Bharat / bharat

ಹೆಂಡತಿ ನಿಂದನೆ: ಆಡಿಯೋ ವೈರಲ್​ ಬೆನ್ನಲ್ಲೇ ಗಂಡ ಆತ್ಮಹತ್ಯೆ - ಹೆಂಡತಿ ಆಡಿಯೋ ವೈರಲ್​

ಸಂತ್ರಸ್ತ ಮಹಿಳೆ ನೀಡಿದ ದೂರಿನ ಪ್ರಕಾರ ಐವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಮಾನಭಂಗ ಹಾಗೂ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಹೆಂಡತಿ ನಿಂದನೆ: ಆಡಿಯೋ ವೈರಲ್​ ಬೆನ್ನಲ್ಲೇ ಗಂಡ ಆತ್ನಹತ್ಯೆ
wife-abuse-audio-goes-viral-husband-commit-suicide

By

Published : Nov 21, 2022, 4:50 PM IST

ಜಲ್ನಾ (ಮಹಾರಾಷ್ಟ್ರ): ಹೆಂಡತಿ ಆಡಿಯೋ ವೈರಲ್​ ಆದ ಬೆನ್ನಲ್ಲೇ ಅವಮಾನಿತನಾದ ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಂತ್ರಸ್ತ ಮಹಿಳೆ ಪರ್ದ್​​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಂತ್ರಸ್ತ ಮಹಿಳೆ ನೀಡಿದ ದೂರಿನ ಪ್ರಕಾರ ಐವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಮಾನಭಂಗ ಹಾಗೂ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಸಂತ್ರಸ್ತೆ ದೂರಿನ ಅನ್ವಯ, ಗಜನಾನ್​ ಆಶೋಕ್​ ದೇಶ್​ಮುಖ್​, ರವಿ ದತ್ತಾತ್ರೇಯ ಸಪ್ಕಲ್​, ಗಜನಾನ ದೀಲಿಪ್​ ಶಿರಸತ್​, ಮತ್ತು ಮತ್ತಿಬ್ಬರು ಮಹಿಳೆರು ರವಿ ದತ್ತಾತ್ರೇಯ ಸಪ್ಕಲ್​ ಫೋನ್​ನಲ್ಲಿ ಸಂತ್ರಸ್ತೆಗೆ ಒತ್ತಾಯಪೂರ್ವಕವಾಗಿ ನಿಂದನೆ ಮಾಡುವಂತೆ ಮಾಡಿದ್ದಾರೆ. ಮಾದಕ ದ್ರವ್ಯ ನೀಡಿ, ಆಕೆಯೊಂದಿಗೆ ಒತ್ತಾಯಪೂರ್ವಕವಾಗಿ ಕೆಟ್ಟ ವರ್ತನೆ ಮಾಡುವಂತೆ ಪ್ರಚೋದಿಸಿದ್ದಾರೆ.

ಇದಾದ ಬಳಿಕ ಸಂತ್ರಸ್ತ ಮಹಿಳೆ ಮತ್ತು ಶಂಕಾಸ್ಪದ ವ್ಯಕ್ತಿ ನಡುವೆ ನಡೆದ ಮಾತುಕತೆ ಆಡಿಯೋವನ್ನು ಸಂತ್ರಸ್ತೆ ಮಹಿಳೆ ಗಂಡನಿಗೆ ಕಳುಹಿಸಲಾಗಿದೆ. ಈ ಆಡಿಯೋ ಕೇಳಿದ ಬಳಿಕ ಅವಮಾನಿತನಾದ ಸಂತ್ರಸ್ತೆ ಗಂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಪ್ರಕರಣದ ಬಳಿಕ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಗಜನಾನ್​ ಆಶೋಕ್​ ದೇಶ್​ಮುಖ್​, ರವಿ ದತ್ತಾತ್ರೇಯ ಸಪ್ಕಲ್​, ಗಜನಾನ ದೀಲಿಪ್​ ಶಿರಸತ್​, ಮತ್ತು ಮತ್ತಿಬ್ಬರು ಮಹಿಳೆಯರು, ರವಿ ದತ್ತಾತ್ರೇಯ ಸಪ್ಕಲ್ ಸೇರಿದಂತೆ ಇಬ್ಬರು ಮಹಿಳೆ ಮೇಲೆ ಆತ್ಮಹತ್ಯೆಗೆ ಪ್ರಚೋದನೆ, ಅತ್ಯಾಚಾರ, ಕಿರುಕುಳದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಹೆಂಡತಿಯ ತಲೆಗೆ ಬಾಣಲೆಯಿಂದ ಹೊಡೆದು ಕೊಲೆ: ಠಾಣೆಗೆ ತೆರಳಿ ಶರಣಾದ ಪತಿ

ABOUT THE AUTHOR

...view details