ತ್ರಿಪುರ: ಹೋಳಿ ಹಬ್ಬದಂದು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಅಮಾನವೀಯವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಧವೆ ಮೇಲೆ ಅತ್ಯಾಚಾರ, ಕೊಲೆ: ಆತ್ನಹತ್ಯೆಗೆ ಯತ್ನಿಸಿದ ಆರೋಪಿ ಅರೆಸ್ಟ್ - ಆತ್ನಹತ್ಯೆಗೆ ಯತ್ನಿಸಿದ ಆರೋಪಿ ಅರೆಸ್ಟ್
ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ತಾನು ಪೊಲೀಸ್ ಬಲೆಗೆ ಬೀಳಲಿದ್ದೇನೆ ಎಂದು ತಿಳಿದ ತಕ್ಷಣ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಆರೋಪಿ ಅರೆಸ್ಟ್
ದುಲಾಲ್ ದಾಸ್ ಬಂಧಿತ ಆರೋಪಿ. ಈತನನ್ನು ಪೊಲೀಸರು ಬಂಧಿಸುವ ಮನ್ನವೇ ಆರೋಪಿ ವಿಷ ಸೇವಿಸಿದ್ದು, ಆತನನ್ನು ಗೋಮತಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೆಪಾಹಿಜಲಾ ಜಿಲ್ಲೆಯಲ್ಲಿ ಐವತ್ತು ವರ್ಷದ ವಿಧವೆ ಕಾನಿಕಾ ದಾಸ್ ಮೇಲೆ ಆರೋಪಿ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದನು. ಘಟನೆಯ ನಂತರ ದಾಸ್ ಪರಾರಿಯಾಗಿದ್ದನು. ನಂತರ ಸ್ಥಳೀಯರು ಸಹಾಯದಿಂದ ಪೊಲೀಸರು ಆರೋಪಿ ಪತ್ತೆ ಹಚ್ಚಿದ್ದು, ತಾನು ಪೊಲೀಸ್ ಬಲೆಗೆ ಬೀಳಲಿದ್ದೇನೆ ಎಂದು ತಿಳಿದ ತಕ್ಷಣ ಆರೋಪಿ ವಿಷ ಸೇವಿಸಿದ್ದಾನೆ ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.