ಕರ್ನಾಟಕ

karnataka

ETV Bharat / bharat

ಮೌಢ್ಯಕ್ಕೆ ಕೊಕ್ಕೆ.. ವಿಧವೆ ಕುಂಕುಮ, ಬಳೆ, ಮಾಂಗಲ್ಯ ತೆಗೆಯಬೇಕಿಲ್ಲ.. ಮಹಾ ಗ್ರಾಪಂ ಕ್ರಾಂತಿಕಾರಿ ನಿರ್ಣಯ.. - Widow Practice Prohibition in Maharashtra's heravada village

ಗಂಡನ ಮರಣದ ನಂತರ ಪತ್ನಿಯಾದವಳ ಹಣೆಯ ಕುಂಕುಮ ಒರೆಸುವುದು, ಕೊರಳಲ್ಲಿ ಮಂಗಳಸೂತ್ರ ಕೀಳುವ, ಕೈ ಬಳೆಗಳನ್ನು ಒಡೆಯುವ, ಕಾಲ್ಗೆಜ್ಜೆ, ಉಂಗುರ ತೆಗೆದು ಹಾಕುವುದನ್ನು ಮಾಡುವಂತಿಲ್ಲ. ಬಿಳಿ ಸೀರೆಯನ್ನು ಧರಿಸುವಂತೆ ಒತ್ತಾಯ ಮಾಡುವಂತಿಲ್ಲ. ಆಕೆಯ ಇಚ್ಛಾನುಸಾರ ಬದುಕಲು ಬಿಡಬೇಕು..

widow-practice-prohibition
ಕ್ರಾಂತಿಕಾರಿ ನಿರ್ಣಯ ತೆಗೆದುಕೊಂಡ ಮಹಾರಾಷ್ಟ್ರದ ಗ್ರಾಪಂ

By

Published : May 9, 2022, 5:25 PM IST

ಕೊಲ್ಹಾಪುರ :ವಿಧವೆಯರ ಘನತೆ ಕಾಪಾಡಲು ವಿಧವಾ ಪದ್ಧತಿ ನಿಲ್ಲಿಸುವ ನಿರ್ಧಾರ ಮಾಡುವ ಮೂಲಕ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ಹೆರವಾಡ ಗ್ರಾಪಂ ಈಗ ದೇಶಕ್ಕೆ ಮಾದರಿಯಾಗಿದೆ.

ಕ್ರಾಂತಿಕಾರಿ ನಿರ್ಣಯ ತೆಗೆದುಕೊಂಡ ಮಹಾರಾಷ್ಟ್ರದ ಗ್ರಾಪಂ

ಹೆರವಾಡ ಗ್ರಾಮ ಪಂಚಾಯತ್‌, ವಿಧವೆ ತಾನು ಗೌರವಯುತ ಮತ್ತು ಘನತೆಯಿಂದ ಬಾಳಬೇಕು ಎಂದು 'ವಿಧವಾ ಪದ್ಧತಿ' ಅನುಸರಿಸುವುದನ್ನು ನಿಷೇಧಿಸಲು ಗ್ರಾಮ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಿದೆ. ಈ ನಿರ್ಣಯವನ್ನು ಮಂಡಿಸಿದ್ದು ಮತ್ತು ಅಂಗೀಕರಿಸಿದ್ದು ಕೂಡ ಮಹಿಳೆಯರೇ ಎಂಬುದು ಗಮನಾರ್ಹ ಸಂಗತಿ. ಮೇ 5ರಂದು ಬಹುಮತದಿಂದ ಈ ನಿರ್ಣಯವನ್ನು ಪಾಸು ಮಾಡಲಾಗಿದೆ.

ನಿರ್ಣಯದಲ್ಲಿ ಏನಿದೆ?:ಗಂಡನ ಮರಣದ ನಂತರ ಪತ್ನಿಯಾದವಳ ಹಣೆಯ ಕುಂಕುಮ ಒರೆಸುವುದು, ಕೊರಳಲ್ಲಿ ಮಂಗಳಸೂತ್ರ ಕೀಳುವ, ಕೈ ಬಳೆಗಳನ್ನು ಒಡೆಯುವ, ಕಾಲ್ಗೆಜ್ಜೆ, ಉಂಗುರ ತೆಗೆದು ಹಾಕುವುದನ್ನು ಮಾಡುವಂತಿಲ್ಲ. ಬಿಳಿ ಸೀರೆ ಧರಿಸುವಂತೆ ಒತ್ತಾಯ ಮಾಡುವಂತಿಲ್ಲ. ಆಕೆಯ ಇಚ್ಛಾನುಸಾರ ಬದುಕಲು ಬಿಡಬೇಕು.

ಈ ಮೇಲಿನ ಕಟ್ಟಳೆಗಳು ಮಹಿಳೆಯರ ಹಕ್ಕುಗಳನ್ನು ದಮನ ಮಾಡುತ್ತವೆ. ಆದ್ದರಿಂದ ವಿಧವೆಯರು ಗೌರವಯುತವಾಗಿ ಬದುಕಲು ಅನುವಾಗುವಂತೆ ವಿಧವಾ ಪದ್ಧತಿಯನ್ನು ರದ್ದುಪಡಿಸಲು ನಿರ್ಣಯವನ್ನು ಅಂಗೀಕರಿಸಲಾಯಿತು. ಅಲ್ಲದೇ, ಗ್ರಾಮದಲ್ಲಿ ಜಾಗೃತಿ ಮೂಡಿಸುವಂತೆ ಸಾರಲಾಗಿದೆ. ಈ ಬಗ್ಗೆ ಶಾಸನ ರಚಿಸಿ ಕಾನೂನು ಜಾರಿಗೆ ತರಬೇಕು ಎಂದು 3-4 ತಿಂಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಲಾಗಿತ್ತು. ಇದಕ್ಕೆ ಹಲವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು.

ಗ್ರಾಮಸಭೆ ಅಂಗೀಕರಿಸಿದ ಈ ನಿರ್ಣಯದ ಬಗ್ಗೆ ಊರ ಮುಖಂಡರಿಗೆ ಮಾಹಿತಿ ನೀಡಲಾಗಿದೆ. ರಾಜ್ಯ ಸೇರಿ ದೇಶಾದ್ಯಂತ ಹಲವು ಗ್ರಾಪಂಗಳು ಈ ರೀತಿಯ ಕ್ರಮಕೈಗೊಳ್ಳಬೇಕು. ವಿಧವೆಯರನ್ನು ಗೌರವಯುತವಾಗಿ ಕಾಣುವಂತೆ ಎಲ್ಲ ಸಾಮಾಜಿಕ ಸಂಘಟನೆಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ವಿಧಾನಸಭೆಯಲ್ಲೂ ಈ ಬಗ್ಗೆ ಕಾನೂನು ರೂಪಿಸಬೇಕು ಎಂದು ಗ್ರಾಮದ ಸರಪಂಚ್​ ಆದ ಸುರಗೊಂಡ ಪಾಟೀಲ್​ ಹೇಳಿದ್ದಾರೆ.

ಓದಿ:ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ರಾಜೀನಾಮೆ

ABOUT THE AUTHOR

...view details