ಸತಾರಾ(ಮಹಾರಾಷ್ಟ್ರ):ಆಕೆ ಪತಿಯನ್ನು ಕಳೆದುಕೊಂಡಿರುವ ಮಹಿಳೆ, ಈತ ವಿವಾಹಿತ. ಆದ್ರೆ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಇಷ್ಟು ದಿನ ಇವರಿಬ್ಬರ ಮಧ್ಯೆದ ಸಂಬಂಧ ಮುಂದುವರಿದಿತ್ತು. ಆದ್ರೆ ಈಗ ವಿಧವೆ ಮತ್ತು ವಿವಾಹಿತ ಪುರುಷ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಸತಾರಾದಲ್ಲಿ ನಡೆದಿದೆ. ಊರ ಹೊರಗಿನ ಮರಕ್ಕೆ ನೇಣು ಬಿಗಿದುಕೊಂಡು ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನ ಶೋಭಾ ಪವಾರ್(36) ಮತ್ತು ಪ್ರಕಾಶ್ ನಿಕಂ(49) ಎಂದು ಗುರುತಿಸಲಾಗಿದೆ.
ಮೃತರನ್ನ ಪಟಾನ್ ಗ್ರಾಮದ ನಿವಾಸಿಗಳೆಂದು ಗುರುತಿಸಲಾಗಿದ್ದು, ಇಬ್ಬರು ವಿವಾಹಿತರು. ಕಳೆದ ಕೆಲ ವರ್ಷಗಳ ಹಿಂದೆ ಶೋಭಾಳ ಪತಿ ಸಾವನ್ನಪ್ಪಿದ್ದು, ಇದಾದ ಬಳಿಕ ಕೆಲಸದ ನಿಮಿತ್ತ ಮುಂಬೈಗೆ ಹೋಗಿ ಉಳಿದುಕೊಂಡಿದ್ದಳು. ಮಾರ್ಚ್ 20ರಂದು ಊರಿಗೆ ವಾಪಸ್ ಆಗಿರುವ ಶೋಭಾ ಮಾರ್ಚ್ 22ರಂದು ಪಟಾನ್ಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದಳು. ವಾಪಸ್ ಬಾರದ ಕಾರಣ ಕುಟುಂಬಸ್ಥರು ಹುಡುಕಾಟದಲ್ಲಿ ತೊಡಗಿದ್ದರು. ಇದರ ಬೆನ್ನಲ್ಲೇ ಆಕೆ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದು ಬಂದಿದೆ.