ಜೈಪುರ್ :ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರ ಬೆಂಬಲಿಗರು ಸಚಿನ್ರನ್ನು ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಬೇಡಿಕೆಯಿಟ್ಟಿದ್ದಾರೆ.
#ಕಾಂಗ್ರೆಸ್ ಆ ರಹೀ ಹೇ/#ಕಾಂಗ್ರೆಸ್ ಬರುತ್ತಿದೆ (ಸಚಿನ್ ಪೈಲಟ್‌ಗಾಗಿ ನಡೆಯುತ್ತಿರುವ ಅಭಿಯಾನ) ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಇದೀಗ ಸಚಿನ್ ಪೈಲಟ್ ಬೆಂಬಲಿಗರು ಈ ಬೇಡಿಕೆಯಿಟ್ಟಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಯ ಹೊತ್ತಿಗೆ, 40,000ಕ್ಕೂ ಹೆಚ್ಚು ಜನರು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್‌ಗಾಗಿ ನಡೆಯುತ್ತಿರುವ ಈ ಅಭಿಯಾನದ ಭಾಗವಾಗಿದ್ದಾರೆ.
ಈ ಸಚಿನ್ ಪೈಲಟ್ ಪರ ಅಭಿಯಾನ ಸಕ್ರಿಯಗೊಂಡ ನಂತರ, ಬಹುಜನ ಸಮಾಜ ಪಕ್ಷದಿಂದ ಕಾಂಗ್ರೆಸ್ಗೆ ಸೇರಿಕೊಂಡ ಶಾಸಕರೊಂದಿಗೆ ಜೈಪುರದಲ್ಲಿ ಸ್ವತಂತ್ರ ಶಾಸಕರು ಇಂದು ಸಭೆ ಕರೆದಿದ್ದಾರೆ. ರಾಜಕೀಯ ವಲಯಗಳಲ್ಲಿ ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯಿಸಲು ಪೈಲಟ್ ಪರ ಅಭಿಯಾನ ಸಾಮಾಜಿಕ ಮಾಧ್ಯಮವನ್ನು ತನ್ನ ಅಸ್ತ್ರವನ್ನಾಗಿ ಮಾಡಿಕೊಂಡಿದೆ.
ಇನ್ನು, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಂಖ್ಯೆಯನ್ನು ಬಲಪಡಿಸುವ ಸಲುವಾಗಿ ರಾಜಸ್ಥಾನದಲ್ಲಿ ಸ್ವತಂತ್ರರು ಮತ್ತು ಇತರೆ ಶಾಸಕರೊಂದಿಗೆ ಸರ್ಕಾರವನ್ನು ನಡೆಸುತ್ತಿದ್ದಾರೆ. ಈ ಮಧ್ಯೆ #ಕಾಂಗ್ರೆಸ್ ಆ ರಹೀ ಹೇ / #ಕಾಂಗ್ರೆಸ್ ಬರುತ್ತಿದೆ ಅಭಿಯಾನ ಭಾರೀ ಸುದ್ದಿ ಮಾಡುತ್ತಿದೆ.