ನವದೆಹಲಿ: ಬೇಹುಗಾರಿಕೆ ವಿಷಯದಲ್ಲಿ ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಫೋನ್ ಹ್ಯಾಕಿಂಗ್ ಪ್ರಯತ್ನದ ಎಚ್ಚರಿಕೆಗಳ ಬಗ್ಗೆ ತಮ್ಮದೇ ಪಕ್ಷಕ್ಕೆ ಸೇರಿದ ನಾಯಕರ ಆರೋಪದಿಂದ ಉದ್ಭವಿಸಿದ ವಿವಾದದ ಕುರಿತು ಮಾಜಿ ಕೇಂದ್ರ ಹಣಕಾಸು ಸಚಿವ ಮತ್ತು ಕಾಂಗ್ರೆಸ್ ಸಂಸದ ಪಿ ಚಿದಂಬರಂ ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, "ನೂರಾರು ವಿರೋಧ ಪಕ್ಷಗಳ ನಾಯಕರು ಆಪಲ್‌ನಿಂದ ತಮ್ಮ ಫೋನ್ಗಳನ್ನು ಹ್ಯಾಕ್ ಮಾಡಲು ಪ್ರಯತ್ನ ನಡೆದಿದೆ ಎಂಬ ಎಚ್ಚರಿಕೆ ಸಂದೇಶವನ್ನು ಪಡೆದಿದ್ದಾರೆ ಎಂಬುದನ್ನು ನಿರಾಕರಿಸಲಾಗದು. ವಿರೋಧ ಪಕ್ಷದ ನಾಯಕರ ಫೋನ್ಗಳನ್ನು ಹ್ಯಾಕ್ ಮಾಡಲು ಯಾರು ಆಸಕ್ತಿ ವಹಿಸುತ್ತಾರೆ?. ಪೆಗಾಸಸ್ ರಹಸ್ಯ ಬೇಹುಗಾರಿಕೆ ನಂತರ ಸರ್ಕಾರಿ ಸಂಸ್ಥೆಗಳ ಮೇಲೆ ಅನುಮಾನ ಮೂಡುತ್ತಿದೆ" ಎಂದು ಆರೋಪಿಸಿದ್ದಾರೆ.
ತಮ್ಮ ಫೋನ್ಗಳು ಮತ್ತು ಇಮೇಲ್ಗಳಲ್ಲಿ ಆಪಲ್‌ನಿಂದ ಸಂದೇಶಗಳನ್ನು ಸ್ವೀಕರಿಸಿದ್ದೇವೆ ಎಂದು ಬಿಜೆಪಿ ಸರ್ಕಾರದ ಡೇಟಾ ಉಲ್ಲಂಘನೆ ಪ್ರಯತ್ನವನ್ನು ಹಲವಾರು ವಿರೋಧ ಪಕ್ಷದ ನಾಯಕರು ಬಹಿರಂಗಪಡಿಸಿದ ನಂತರ ಈ ವಿವಾದ ಉದ್ಭವಿಸಿದೆ. ತಮ್ಮ ಹೇಳಿಕೆಗಳನ್ನು ದೃಢೀಕರಿಸಲು, ವಿರೋಧ ಪಕ್ಷಗಳ ನಾಯಕರು ಆಪಲ್‌ನಿಂದ ಸ್ವೀಕರಿಸಿದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿದ್ದಾರೆ. "ಸರ್ಕಾರಿ ಪ್ರಾಯೋಜಿತ ದಾಳಿಕೋರರು ಐಫೋನ್ಗಳನ್ನು ಗುರಿಯಾಗಿಸಿಕೊಂಡಿರಬಹುದು" ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ.