ನವದೆಹಲಿ: ಹರಿದ ಜೀನ್ಸ್ ಧರಿಸಿದ ಮಹಿಳೆಯರ ಬಗ್ಗೆ ಹೇಳಿಕೆ ನೀಡಿ ತೀವ್ರ ವಿವಾದ ಸೃಷ್ಟಿಸಿದ್ದ ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ನೈನಿತಾಲ್‌ನ ರಾಮ್ ನಗರದಲ್ಲಿ ತಮ್ಮ ಇತ್ತೀಚಿನ ಭಾಷಣದಲ್ಲಿ ರಾವತ್, ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಪೋಷಣೆಗೆ ಹೆಣಗಾಡುತ್ತಿದ್ದ ಬಡ ಕುಟುಂಬಗಳು ಹೆಚ್ಚಿನ ಪಡಿತರ ಬಯಸಿದ್ದರೇ 20 ಮಕ್ಕಳಿಗೆ ಜನ್ಮ ನೀಡಬೇಕಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಾಂಕ್ರಾಮಿಕ ಸಮಯದಲ್ಲಿ ಪ್ರತಿ ಮನೆಗೆ 5 ಕೆ.ಜಿ. ಆಹಾರ ಧಾನ್ಯ ವಿತರಣೆ ಮಾಡಲಾಯಿತು. ಒಂದು ಮನೆಯಲ್ಲಿ 10 ಜನ ಇದ್ದವರು 50 ಕೆ.ಜಿ ಪಡೆದರೆ, 20 ಜನ ಇದ್ದವರಿಗೆ ಒಂದು ಕ್ವಿಂಟಾಲ್ ಸಿಕ್ಕಿತು. ಇಬ್ಬರು ಮಕ್ಕಳು ಹೊಂದಿದವರು 10 ಕೆ.ಜಿ. ಪಡೆದರು. ಜನರು ಮಳಿಗೆಗಳನ್ನು ನಿರ್ಮಿಸಿ, ಖರೀದಿದಾರರನ್ನು ಕಂಡುಕೊಂಡರು ಎಂದು ಹೇಳಿದರು.
ಇದನ್ನೂ ಓದಿ: ನಂದಿಗ್ರಾಮದಲ್ಲಿ ಎರಡು ಮನೆ ಬಾಡಿಗೆ ಪಡೆದ ಮಮತಾ ಬ್ಯಾನರ್ಜಿ
ಇದಕ್ಕೆ ಯಾರು ಹೊಣೆ? ಈಗ ನೀವು ಅದರ ಬಗ್ಗೆ ಅಸೂಯೆ ಹೊಂದಿದ್ದೀರಿ. ನೀವು ಇಬ್ಬರಿಗೆ ಜನ್ಮ ನೀಡಿದ ಸಮಯದಲ್ಲಿ 20 ಮಕ್ಕಳಿಗೆ ಏಕೆ ಜನ್ಮ ನೀಡಲಿಲ್ಲ ಎಂದು ರಾವತ್ ಪ್ರಶ್ನಿಸಿದ್ದಾರೆ.