ಕರ್ನಾಟಕ

karnataka

ETV Bharat / bharat

ಪ್ರತಿ ಮಸೀದಿಯಲ್ಲಿ ಶಿವಲಿಂಗ ಏಕೆ ಹುಡುಕಬೇಕು?.. ದಿನವೂ ಹೊಸ ವಿವಾದ ಪ್ರಾರಂಭಿಸುವ ಅಗತ್ಯವಿಲ್ಲ.. ಮೋಹನ್ ಭಾಗವತ್ - ಜ್ಞಾನವಾಪಿ ಮಸೀದಿ

ಜ್ಞಾನವಾಪಿ ಮಸೀದಿ ಬಗ್ಗೆ ನಮಗೆ ಶ್ರದ್ಧೆಯಿದೆ. ಆ ವಿಚಾರದಲ್ಲಿ ನಾವು ಏನು ಮಾಡುತ್ತಿದ್ದೇವೆಯೋ ಅದು ಆ ಶ್ರದ್ಧೆಗೆ ಅನುಗುಣವಾಗಿದೆ. ಆದ್ರೆ, ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಏಕೆ ಹುಡುಕಬೇಕು? ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಶ್ನಿಸಿದರು..

ಮೋಹನ್ ಭಾಗವತ್
ಮೋಹನ್ ಭಾಗವತ್

By

Published : Jun 3, 2022, 9:29 AM IST

ನಾಗ್ಪುರ: ಜ್ಞಾನವಾಪಿ ಮಸೀದಿ ಗದ್ದಲದ ನಡುವೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಮಹತ್ವದ ಹೇಳಿಕೆಯೊಂದನ್ನ ನೀಡಿದ್ದಾರೆ.

ಜ್ಞಾನವಾಪಿ ವಿವಾದವು ನಂಬಿಕೆಯ ಕೆಲವು ಸಮಸ್ಯೆಗಳನ್ನು ಒಳಗೊಂಡಿದ್ದು, ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳಬೇಕು. ಆದರೆ, ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕುವ ಮತ್ತು ಪ್ರತಿದಿನ ಹೊಸ ವಿವಾದವನ್ನು ಪ್ರಾರಂಭಿಸುವ ಅಗತ್ಯವಿಲ್ಲ ಎಂದಿದ್ದಾರೆ.

ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರನೇ ವರ್ಷದ ಅಧಿಕಾರಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಜಗಳವನ್ನು ಏಕೆ ಹೆಚ್ಚಿಸಬೇಕು. ನಾವು ಪ್ರತಿದಿನ ಹೊಸ ವಿಷಯವನ್ನು ಹೊರ ತರಬಾರದು.

ಜ್ಞಾನವಾಪಿ ಮಸೀದಿ ಬಗ್ಗೆ ನಮಗೆ ಶ್ರದ್ಧೆಯಿದೆ. ಆ ವಿಚಾರದಲ್ಲಿ ನಾವು ಏನು ಮಾಡುತ್ತಿದ್ದೇವೆಯೋ ಅದು ಆ ಶ್ರದ್ಧೆಗೆ ಅನುಗುಣವಾಗಿದೆ. ಆದ್ರೆ, ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಏಕೆ ಹುಡುಕಬೇಕು? ಎಂದು ಪ್ರಶ್ನಿಸಿದರು.

ನಾವು ಇತಿಹಾಸ ಬದಲಿಸಲು ಆಗುವುದಿಲ್ಲ. ಇಂದಿನ ಹಿಂದೂ ಅಥವಾ ಮುಸ್ಲಿಮರು ಇದಕ್ಕೆ ಹೊಣೆಯಲ್ಲ. ಇಸ್ಲಾಂ ಧರ್ಮವು ಹೊರಗಿನ ದಾಳಿಕೋರರೊಂದಿಗೆ ಬಂತು. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದವರ ಆತ್ಮಸ್ಥೈರ್ಯ ಕುಗ್ಗಿಸಲೆಂದು ಇಲ್ಲಿನ ದೇವಸ್ಥಾನಗಳನ್ನು ಅವರು ಕೆಡವುತ್ತಿದ್ದರು.

ಇಂದಿನ ಮುಸ್ಲಿಮರ ಪೂರ್ವಜರು ಹಿಂದೂಗಳೇ ಆಗಿದ್ದರು. ಆರ್‌ಎಸ್‌ಎಸ್ ಯಾವುದೇ ರೀತಿಯ ಪೂಜೆಯನ್ನು ವಿರೋಧಿಸುವುದಿಲ್ಲ, ಅವೆಲ್ಲವನ್ನೂ ಪವಿತ್ರವೆಂದು ಪರಿಗಣಿಸುತ್ತದೆ ಎಂದು ನಾಗಪುರದಲ್ಲಿ ಅವರು ವಿವರಿಸಿದರು.

ಇದನ್ನೂ ಓದಿ:ಜ್ಞಾನವಾಪಿ ವಿವಾದ: ಮಸೀದಿ ಸಮಿತಿ ಅರ್ಜಿ ವಿಚಾರಣೆ ಜುಲೈ 4ಕ್ಕೆ ಮುಂದೂಡಿಕೆ

ABOUT THE AUTHOR

...view details