ಹೈದರಾಬಾದ್:ಕೊರೊನಾ ವೈರಸ್ ಎರಡನೇ ಅಲೆ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಪ್ರತಿ 24 ಗಂಟೆಗಳಿಗೊಮ್ಮೆ ಬಿಡುಗಡೆಯಾಗುವ ಹೊಸ ಪ್ರಕರಣಗಳು ಮತ್ತು ಸಾವಿನ ಅಂಕಿ - ಅಂಶಗಳು ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿವೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 2,17,353 ಪ್ರಕರಣಗಳು ವರದಿಯಾಗಿದ್ದರೆ, ಈ ಅವಧಿಯಲ್ಲಿ ವೈರಸ್ನಿಂದ ಸುಮಾರು 1,185 ಜನರು ಮೃತರಾಗಿದ್ದಾರೆ. ನಮಗೆಲ್ಲ ಗೊತ್ತಿರುವಂತೆ ಕೊರೊನಾ ಸಾಂಕ್ರಾಮಿಕದಿಂದ ಸಾವಿನ ಸಂಖ್ಯೆ ನಿತ್ಯವೂ ಹೆಚ್ಚುತ್ತಲೇ ಇದೆ. ಆದರೆ ಈ ಸಾವಿನ ಅಂಕಿ-ಅಂಶ ಪ್ರಶ್ನಾರ್ಹವಾಗಿದೆ!.
ದೇಶದಲ್ಲಿ ಕೊರೊನಾ ಸಾವಿನ ಅಂಕಿ - ಅಂಶಗಳ ಬಗ್ಗೆ ನಡೆಯುತ್ತಿರುವ ಚರ್ಚೆಯ ಮಧ್ಯೆ ಈಟಿವಿ ಭಾರತ್ ಗ್ರೌಂಡ್ ರಿಪೋರ್ಟ್ ಸಹಾಯದಿಂದ ಮೂರು ದೊಡ್ಡ ಪ್ರಶ್ನೆಗಳನ್ನು ಎತ್ತಿದೆ. ಇವುಗಳು ಎಂಥವರಲ್ಲಿಯೂ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಅದಕ್ಕೂ ಮೊದಲು ದೇಶದ ಮೂರು ರಾಜ್ಯಗಳಲ್ಲಿನ ಅಧಿಕೃತ ಸಾವಿನ ಸಂಖ್ಯೆ ಮತ್ತು ಸ್ಮಶಾನದ ಮೈದಾನದಲ್ಲಿನ ಶವಸಂಸ್ಕಾರದ ಅಂಕಿ -ಅಂಶಗಳ ನಡುವಿನ ವ್ಯತ್ಯಾಸವನ್ನು ನಾವು ಮೊದಲು ನಿಮಗೆ ತೋರಿಸುತ್ತೇವೆ. ಅನಂತರ ಕೊರೊನಾದಿಂದ ಉಂಟಾಗಿದೆ ಎನ್ನಲಾದ ಸಾವಿನ ಪ್ರಕರಣದ ದಾಖಲೆ ಪ್ರಶ್ನಾರ್ಹವಾಗಿರುತ್ತದೆ.
ಮಧ್ಯಪ್ರದೇಶ
ಕಳೆದ 24 ಗಂಟೆಗಳಲ್ಲಿ ಮಧ್ಯಪ್ರದೇಶದಲ್ಲಿ ಸುಮಾರು 10,166 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 53 ಜನರು ಮೃತಪಟ್ಟಿದ್ದಾರೆ. ಅಧಿಕೃತ ಮಾಹಿತಿಯ ಪ್ರಕಾರ, ಮಧ್ಯಪ್ರದೇಶದಲ್ಲಿ ಏಪ್ರಿಲ್ 12 ರ ಅಂಕಿ - ಅಂಶಗಳನ್ನು ನೋಡಿದರೆ, ಆ ದಿನ ಇಡೀ ರಾಜ್ಯದಲ್ಲಿ ವೈರಸ್ನಿಂದ 47 ಜನರು ಮೃತರಾಗಿದ್ದಾರೆ. ಆದರೆ, 58 ಮೃತ ದೇಹಗಳ ಅಂತ್ಯಕ್ರಿಯೆಯನ್ನು ಆ ದಿನ ಭೋಪಾಲ್‌ನ ಶವಾಗಾರದಲ್ಲಿ ನಡೆಸಲಾಯಿತು. ಅದೇ ರೀತಿ 37 ಕ್ಕೂ ಹೆಚ್ಚು ಮೃತ ದೇಹಗಳನ್ನು ಚಿಂದ್ವಾರದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಈ ರೀತಿಯಾಗಿ, ಭೋಪಾಲ್ ಮತ್ತು ಚಿಂದ್ವಾರದಲ್ಲಿ ಮಾತ್ರ 74 ಶವಗಳನ್ನು ದಹನ ಮಾಡಲಾಗಿದ್ದು, ಆ ದಿನ ರಾಜ್ಯದಲ್ಲಿ ಕೊರೊನಾದಿಂದ ಮೃತರಾದ ಅಧಿಕೃತ ಸಂಖ್ಯೆಗಿಂತ ಹೆಚ್ಚು ಜನರ ಸಂಸ್ಕಾರ ಮಾಡಲಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ, ನಾವು ಎರಡು ಸ್ಥಳಗಳ ಶವಸಂಸ್ಕಾರದ ಮೈದಾನದಿಂದ ಅಂತ್ಯಕ್ರಿಯೆಯ ಅಂಕಿ-ಅಂಶಗಳನ್ನು ಮಾತ್ರ ನೀಡಿದ್ದೇವೆ.!
ದೆಹಲಿ
ರಾಜಧಾನಿ ದೆಹಲಿಯಲ್ಲಿ ಕೊರೊನಾ ಏರುಗತಿಯಲ್ಲಿ ಸಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಸುಮಾರು 16,699 ಹೊಸ ಪ್ರಕರಣಗಳು ವರದಿಯಾಗಿದ್ದರೆ, 112 ಜನರು ಮೃತಪಟ್ಟಿದ್ದಾರೆ. ಒಟ್ಟು 54,309 ಸಕ್ರೀಯ ಪ್ರಕರಣಗಳಿವೆ. ಆದರೆ, ದೆಹಲಿಯಲ್ಲಿ ಕೋವಿಡ್ -19 ರಿಂದ ಮೃತಪಟ್ಟವರ ಕುರಿತ ಸರ್ಕಾರದ ಅಂಕಿ - ಅಂಶಗಳು ಮತ್ತು ಶವಾಗಾರದಲ್ಲಿ ಮೃತ ದೇಹಗಳ ಅಂತ್ಯಕ್ರಿಯೆಯ ಅಂಕಿ ಅಂಶಗಳು ಸಹ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ. ದೆಹಲಿಯಲ್ಲಿ ಏಪ್ರಿಲ್ 12 ರ ಅಂಕಿ - ಅಂಶಗಳನ್ನು ನೋಡಿದರೆ, ಮುನ್ಸಿಪಲ್ ಕಾರ್ಪೋರೇಶನ್ ಅಧೀನದಲ್ಲಿರುವ ಶವಸಂಸ್ಕಾರದ ಘಾಟ್‌ಗಳಲ್ಲಿ 43 ಶವಗಳನ್ನು ದಹನ ಮಾಡಲಾಗಿದ್ದು, ನವದೆಹಲಿ ಮಹಾನಗರ ಪಾಲಿಕೆಯ ಅಧಿಪತ್ಯದ ಘಟ್ಟಗಳಲ್ಲಿ 40 ಶವಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ. ಈ ರೀತಿಯಾಗಿ ಒಟ್ಟು 83 ಮೃತ ದೇಹಗಳನ್ನು ಕೇವಲ ಎರಡು ಪುರಸಭೆಗಳ ಅಡಿಯಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಆದರೆ, ಏಪ್ರಿಲ್ 12 ರಂದು ಸರ್ಕಾರದ ಅಂಕಿಅಂಶಗಳ ಪ್ರಕಾರ 72 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ.
ಛತ್ತೀಸ್ಗಢ
ಛತ್ತೀಸ್ಗಢ ರಾಜ್ಯದಲ್ಲೂ ಕಳೆದ 24 ಗಂಟೆಗಳಲ್ಲಿ 15,256 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. 24 ಗಂಟೆಗಳಲ್ಲಿ ವೈರಸ್ನಿಂದ ಒಟ್ಟು 105 ಜನರು ಮೃತರಾಗಿದ್ದಾರೆ. ದೆಹಲಿ ಮತ್ತು ಮಧ್ಯಪ್ರದೇಶದಂತೆಯೇ, ಇಲ್ಲಿಯೂ ಸಹ ಕೋವಿಡ್ -19 ರ ಅಧಿಕೃತ ಸಾವಿನ ಸಂಖ್ಯೆ ಪ್ರಶ್ನಾರ್ಹವಾಗಿದೆ.
ಛತ್ತೀಸ್ಗಢದ ದುರ್ಗ್ ನಗರದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ವೇಗವು ಸಾಕಷ್ಟು ಭಯಾನಕವಾಗಿದೆ. ರಾಜ್ಯ ಸರ್ಕಾರವು ದುರ್ಗ್ ನಗರದಲ್ಲಿಯೇ ನಿರ್ಬಂಧಗಳನ್ನು ಹೇರಲು ಪ್ರಾರಂಭಿಸಿದೆ. ಏಪ್ರಿಲ್ 13 ರ ಅಂಕಿಅಂಶಗಳನ್ನು ನೋಡಿದರೆ, ಒಟ್ಟು 61 ಶವಗಳನ್ನು ದುರ್ಗ್‌ನ ಶವಸಂಸ್ಕಾರ ಮೈದಾನದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಸರ್ಕಾರದ ಅಂಕಿ - ಅಂಶಗಳ ಪ್ರಕಾರ, ಏಪ್ರಿಲ್ 13 ರಂದು ರಾಜ್ಯದಲ್ಲಿ ಒಟ್ಟು 73 ಜನರು ಮೃತರಾಗಿದ್ದಾರೆ.