ಕರ್ನಾಟಕ

karnataka

ETV Bharat / bharat

ಮೋದಿ ಚೀನಾಕ್ಕೆ ಭಾರತದ ಭೂ ಪ್ರದೇಶ ಬಿಟ್ಟು ಕೊಟ್ಟಿದ್ದಾರೆ; ರಾಹುಲ್​ ಗಾಂಧಿ ಆರೋಪ - ರಾಹುಲ್​ ಗಾಂಧಿ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಭೂ ಪ್ರದೇಶವನ್ನು ಚೀನಾಕ್ಕೆ ಬಿಟ್ಟು ಕೊಟ್ಟಿದ್ದಾರೆಂದು ಆರೋಪಿಸಿರುವ ರಾಹುಲ್​ ಗಾಂಧಿ, ಪ್ರಧಾನಿ ಮೋದಿ ಚೀನಿಯರ ಮುಂದೆ ನಿಲ್ಲಲು ಸಾಧ್ಯವಾಗದ 'ಹೇಡಿ' ಎಂದು ವ್ಯಂಗ್ಯವಾಡಿದ್ದಾರೆ.

Rahul Gandhi
ರಾಹುಲ್​ ಗಾಂಧಿ

By

Published : Feb 12, 2021, 1:58 PM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಭೂ ಪ್ರದೇಶವನ್ನು ಚೀನಾಕ್ಕೆ ಬಿಟ್ಟು ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಕುರಿತು ತೀವ್ರ ವಾಗ್ದಾಳಿ ನಡೆಸಿರುವ ರಾಹುಲ್​ ಗಾಂಧಿ, ಈ ಕುರಿತು ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉತ್ತರಿಸಬೇಕು ಎಂದು ಹೇಳಿದ್ದಾರೆ.

ಭಾರತೀಯ ಸೈನಿಕರು ಈಗ ಫಿಂಗರ್ 3ನಲ್ಲಿ ಬೀಡು ಬಿಡಲಿದ್ದಾರೆ ಎಂದು ತಿಳಿದು ಬಂದಿದೆ. ಫಿಂಗರ್ 4 ನಮ್ಮ ಪ್ರದೇಶವಾಗಿದ್ದು, ಅಲ್ಲಿಯೇ ನಮ್ಮ ಹುದ್ದೆ ಇತ್ತು. ಪ್ರಧಾನ ಮಂತ್ರಿ ಭಾರತೀಯ ಭೂಪ್ರದೇಶವನ್ನು ಚೀನಿಯರಿಗೆ ಏಕೆ ಬಿಟ್ಟುಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದರು.

ಯವತ್ಮಾಲ್​ನಲ್ಲಿ ಕಿಸಾನ್ ಮಹಾಪಂಚಾಯತ್ ನಡೆಸಲಿರುವ ರಾಕೇಶ್ ಟಿಕಾಯತ್

ನಮ್ಮ ಸೈನ್ಯವು ಶ್ರಮವಹಿಸಿ ಕೈಲಾಶ್ ಶ್ರೇಣಿಗಳನ್ನು ವಶಪಡಿಸಿಕೊಂಡ ನಂತರ, ಅವರನ್ನು ಹಿಂದಕ್ಕೆ ಸರಿಸಲು ಏಕೆ ಕೇಳಲಾಗಿದೆ? ಇದಕ್ಕೆ ಪ್ರತಿಯಾಗಿ ಭಾರತಕ್ಕೆ ಏನು ಸಿಕ್ಕಿದೆ? ಈ ಪ್ರದೇಶವು ಹೆಚ್ಚು ಮುಖ್ಯವಾದ ಕಾರ್ಯತಂತ್ರದ ಪ್ರದೇಶ, ಡೆಪ್ಸಾಂಗ್ ಬಯಲು ಪ್ರದೇಶಗಳಿಂದ ಚೀನಿಯರು ಏಕೆ ಹಿಂದೆ ಸರಿಯಲಿಲ್ಲ? ಗೋಗ್ರಾ ಮತ್ತು ಹಾಟ್ ಸ್ಪ್ರಿಂಗ್ಸ್‌ನಿಂದ ಏಕೆ ಹಿಂದೆ ಸರಿಯಲಿಲ್ಲ? ನರೇಂದ್ರ ಮೋದಿ ಅವರು ಚೀನಾಕ್ಕೆ ಭಾರತೀಯ ಭೂ ಪ್ರದೇಶವನ್ನು ಬಿಟ್ಟುಕೊಟ್ಟಿದ್ದಾರೆ ಮತ್ತು ಅವರ ಮುಂದೆ ತಲೆ ಬಾಗಿದ್ದಾರೆ ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೆ, ಪ್ರಧಾನಿ ಮೋದಿ ಚೀನಿಯರ ಮುಂದೆ ನಿಲ್ಲಲು ಸಾಧ್ಯವಾಗದ 'ಹೇಡಿ' ಎಂದು ವ್ಯಂಗ್ಯ ಮಾಡಿದ್ದಾರೆ.

ABOUT THE AUTHOR

...view details