ಕರ್ನಾಟಕ

karnataka

ETV Bharat / bharat

ಕ್ಷುದ್ರಗ್ರಹಕ್ಕೆ ನಾಸಾ ನೌಕೆ ಅಪ್ಪಳಿಸಿದ್ದು ಏಕೆ? ಏನಿದು ಮಿಷನ್ DART? - ಡಾರ್ಟ್​ ಮಿಷನ್ ನೌಕೆ

ಡಾರ್ಟ್​ ಮಿಷನ್ ನೌಕೆಯು ಪ್ರತಿಗಂಟೆಗೆ ಸುಮಾರು 22530 ಕಿಲೋಮೀಟರ್ ವೇಗದಲ್ಲಿ ಡೈಮಾರ್​ಫೋಸ್​ಗೆ ಡಿಕ್ಕಿ ಹೊಡೆದಿದೆ. ಈ ಕಾರ್ಯಾಚರಣೆಯ ಮುನ್ನ ಡೈಮಾರ್​ಫೋಸ್​ ಮತ್ತು ಕ್ಷುದ್ರಗ್ರಹ ಡಿಡಿಮೋಸ್​​ನ ಹವಾಮಾನ, ಮಣ್ಣು, ಕಲ್ಲು ಮತ್ತು ಅವುಗಳ ರಚನೆಯ ಬಗ್ಗೆ ಡಾರ್ಟ್ ಸಂಪೂರ್ಣ ಅಧ್ಯಯನ ಮಾಡಿತ್ತು. ಈ ಯೋಜನೆಯಲ್ಲಿ ಕೈನೆಟಿಕ್ ಇಂಪ್ಯಾಕ್ಟರ್ ಟೆಕ್ನಿಕ್ ಅನ್ನು ಉಪಯೋಗಿಸಲಾಗಿತ್ತು. ಡಿಡಿಮೋಸ್​ನ ಒಟ್ಟು ವ್ಯಾಸ 2600 ಅಡಿ ಇದೆ.

ಕ್ಷುದ್ರಗ್ರಹಕ್ಕೆ ನಾಸಾ ನೌಕೆ ಅಪ್ಪಳಿಸಿದ್ದು ಏಕೆ? ಏನಿದು ಮಿಷನ್ DART?
why-did-the-nasa-spacecraft-crash-into-an-asteroid-what-is-mission-dart

By

Published : Sep 27, 2022, 5:18 PM IST

ಹ್ಯೂಸ್ಟನ್: ನಾಸಾ ಪ್ರಥಮ ಬಾರಿಗೆ ಪ್ಲಾನೆಟರಿ ಡಿಫೆನ್ಸ್​ ಸಿಸ್ಟಮ್ ಅಂದರೆ ಡಾರ್ಟ್​ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಭವಿಷ್ಯದಲ್ಲಿ ಭೂಮಿಗೆ ಯಾವುದಾದರೂ ಕ್ಷುದ್ರಗ್ರಹ ಅಥವಾ ಧೂಮಕೇತು ಅಪ್ಪಳಿಸುವ ಸಂಭವ ಉಂಟಾದರೆ ಈ ತಂತ್ರಜ್ಞಾನದಿಂದ ಭೂಮಿಯನ್ನು ಕಾಪಾಡಬಹುದು.

ಭವಿಷ್ಯದಲ್ಲಿ ಭೂಮಿಗೆ ಕ್ಷುದ್ರಗ್ರಹಗಳಿಂದ ಅಪಾಯ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇದರ ನಂತರ ಹವಾಮಾನ ಬದಲಾವಣೆ ಅಥವಾ ಗ್ಲೋಬಲ್ ವಾರ್ಮಿಂಗ್ ನಿಂದ ಹೆಚ್ಚು ಅಪಾಯವಿದೆ.

ಡಿಡಿಮೋಸ್ ಕ್ಷುದ್ರಗ್ರಹದ ಉಪಗ್ರಹ ಡೈಮಾರ್​ಫೋಸ್​ಗೆ ಡಾರ್ಟ್​ ಮಿಷನ್ ಅಪ್ಪಳಿಸಿದೆ. ಈಗ ಡೈಮಾರ್​ಫೋಸ್​ ತನ್ನ ದಿಕ್ಕು ಮತ್ತು ಕಕ್ಷೆಯನ್ನು ಬದಲಿಸಿದರೆ, ಭವಿಷ್ಯದಲ್ಲಿ ಬಾಹ್ಯಾಕಾಶದಿಂದ ಭೂಮಿಗೆ ಯಾವುದೇ ಅಪಾಯವಿರುವುದಿಲ್ಲ.

ಡಾರ್ಟ್​ ಮಿಷನ್ ನೌಕೆಯು ಪ್ರತಿಗಂಟೆಗೆ ಸುಮಾರು 22,530 ಕಿಲೋಮೀಟರ್ ವೇಗದಲ್ಲಿ ಡೈಮಾರ್​ಫೋಸ್​ಗೆ ಡಿಕ್ಕಿ ಹೊಡೆದಿದೆ. ಈ ಕಾರ್ಯಾಚರಣೆಯ ಮುನ್ನ ಡೈಮಾರ್​ಫೋಸ್​ ಮತ್ತು ಕ್ಷುದ್ರಗ್ರಹ ಡಿಡಿಮೋಸ್​​ನ ಹವಾಮಾನ, ಮಣ್ಣು, ಕಲ್ಲು ಮತ್ತು ಅವುಗಳ ರಚನೆಯ ಬಗ್ಗೆ ಡಾರ್ಟ್ ಸಂಪೂರ್ಣ ಅಧ್ಯಯನ ಮಾಡಿತ್ತು. ಈ ಯೋಜನೆಯಲ್ಲಿ ಕೈನೆಟಿಕ್ ಇಂಪ್ಯಾಕ್ಟರ್ ಟೆಕ್ನಿಕ್ ಅನ್ನು ಉಪಯೋಗಿಸಲಾಗಿತ್ತು. ಡಿಡಿಮೋಸ್​ನ ಒಟ್ಟು ವ್ಯಾಸ 2600 ಅಡಿ ಇದೆ.

ಡೈಮಾರ್​ಫೋಸ್​ ಅದರ ಸುತ್ತ ಸುತ್ತುತ್ತದೆ. ಇದರ ವ್ಯಾಸ 525 ಅಡಿ ಇದೆ. ಘರ್ಷಣೆಯ ನಂತರ, ಎರಡೂ ಕಲ್ಲುಗಳ ದಿಕ್ಕು ಮತ್ತು ವೇಗದಲ್ಲಿನ ಬದಲಾವಣೆಗಳನ್ನು ಅಧ್ಯಯನ ಮಾಡಲಾಗುತ್ತದೆ. ನಾಸಾ ಭೂಮಿಯ ಸುತ್ತಲೂ 8000 ಕ್ಕೂ ಹೆಚ್ಚು ಭೂಮಿಗೆ ಸಮೀಪವಿರುವ ವಸ್ತುಗಳನ್ನು ದಾಖಲಿಸಿದೆ. ಅಂದರೆ, ಭೂಮಿಗೆ ಅಪಾಯವನ್ನುಂಟುಮಾಡುವ ಅಂತಹ ಕಲ್ಲುಗಳು. ಇವುಗಳಲ್ಲಿ ಕೆಲವು ವ್ಯಾಸದಲ್ಲಿ 460 ಅಡಿಗಳಿಗಿಂತ ದೊಡ್ಡದಾಗಿವೆ. ಇವುಗಳಲ್ಲಿ ಯಾವುದಾದರೂ ಒಂದು ಕಲ್ಲು ಭೂಮಿಯ ಮೇಲೆ ಬಿದ್ದರೆ, ಅದು ಅಮೆರಿಕದಷ್ಟು ಪ್ರದೇಶವನ್ನು ಹಾಳುಮಾಡುತ್ತದೆ. 2011 ರಲ್ಲಿ ಜಪಾನ್‌ಗೆ ಅಪ್ಪಳಿಸಿದ ಸುನಾಮಿಗಿಂತ ಇದು ಹೆಚ್ಚು ಅಪಾಯಕಾರಿಯಾಗಿರುತ್ತದೆ. ಹೀಗಾಗಿಯೇ ನಾಸಾ ಇಂತಹದ್ದೊಂದು ಅಧ್ಯಯನ ಕೈಗೊಂಡಿದೆ.

ಇದನ್ನೂ ಓದಿ: ಚಂದ್ರನನ್ನೇ ವಶಪಡಿಸಿಕೊಳ್ಳಲು ಡ್ರ್ಯಾಗನ್ ಪ್ಲಾನ್.. ಫಲಿಸುವುದೇ ಚೀನಾ ತಂತ್ರ?

ABOUT THE AUTHOR

...view details