ಕರ್ನಾಟಕ

karnataka

By

Published : Jan 18, 2023, 10:34 PM IST

ETV Bharat / bharat

ULIPs ಯಾಕೆ ಹೈಬ್ರಿಡ್​ ಯೋಜನೆ ಎಂದು ಕರೆಯಲಾಗುತ್ತೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಯುಲಿಪ್ಸ್​ ಪಾಲಿಸಿಗಳು ಹಣಾಕಾಸಿನ ರಕ್ಷಣೆ ಪಡೆಯಲು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಮತ್ತು ತೆರೆಗೆ ಉಳಿತಾಯಕ್ಕೆ ಅವಕಾಶಗಳನ್ನು ಒದಗಿಸುತ್ತವೆ. ಈ ಪಾಲಿಸಿಗಳನ್ನು ತೆಗೆದುಕೊಳ್ಳುವ ಮುನ್ನ ಒಮ್ಮೆ ಈ ಮಾಹಿತಿಯನ್ನು ಗಮನಿಸಿ.

-ulips-called-hybrid-schemes
ಯುಲಿಪ್ಸ್​ ಪಾಲಿಸಿ

ಹೈದರಾಬಾದ್​:ವಿಮಾ ಪಾಲಿಸಿಗಳು ಇತ್ತೀಚಿನ ದಿನಗಳಲ್ಲಿ ಜನರಿಗೆ ತುಂಬಾ ಸಹಾಯಕವಾಗಿವೆ. ಅಲ್ಲದೇ ಯಾವುದೇ ಸಮಯದಲ್ಲಿ ಹಣಕಾಸಿನ ದುಃಸ್ಥಿತಿ ಎದುರಾದಾಗ ವಿಮಾ ಪಾಲಿಸಿಗಳು ಕೈ ಹಿಡಿಯುತ್ತವೆ. ಆರೋಗ್ಯ ಸಮಸ್ಯೆ ಸೇರಿದಂತೆ ಯಾವುದೇ ಘಟನೆಗಳು ಸಂಭವಿಸಿದಾಗ ಪಾಲಿಸಿಗಳು ಹಣಕಾಸಿನ ಸಮಸ್ಯೆಗೆ ನೆರವಾಗುತ್ತವೆ. ಕೆಲವು ವಿಮಾ ಪಾಲಿಸಿಗಳು ಅನಿರೀಕ್ಷಿತ ಘಟನೆಗಳು ಎದುರಾದಾಗ ಹಣಕಾಸಿನ ರಕ್ಷಣೆ ಒದಗಿಸುವುದರ ಜೊತೆಗೆ ಸುರಕ್ಷತೆಯನ್ನು ನೀಡುತ್ತವೆ.

ಅದರಲ್ಲಿ ಯುಲಿಪ್ಸ್ (ಯೂನಿಟ್​ ಲಿಂಕ್ಡ್​ ಇನ್ಸೂರೆನ್ಸ್​ ಪಾಲಿಸಿಗಳು ​) ಕೂಡ ಒಂದು. ಈ ಯುಲಿಪ್ಸ್​ ಪಾಲಿಸಿ ನಿಮ್ಮ ಸಂಪತ್ತನ್ನು ವೃದ್ಧಿಸುವುದರ ಜೊತೆಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಅವಕಾಶವನ್ನು ಒದಗಿಸುತ್ತದೆ. ಅನೇಕರು ಆದಾಯ ತೆರಿಗೆ ವಿನಾಯಿತಿ ಪಡೆಯಲು ಈ ಯುಲಿಪ್ಸ್​ ಪಾಲಿಸಿಗಳನ್ನು ಆಯ್ದುಕೊಳ್ಳುತ್ತಾರೆ. ಈ ಪಾಲಿಸಿಯನ್ನು ಆಯ್ದುಕೊಳ್ಳುವ ಮುನ್ನ ಒಂದಿಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಆ ಮುನ್ನೆಚ್ಚರಿಕೆ ಕ್ರಮಗಳು ಯಾವುದು ಎಂಬುದನ್ನು ತಿಳಿದುಕೊಳ್ಳೊಣ.

ಹೈಬ್ರಿಡ್​ ಯೋಜನೆ: ಈ ಯುಲಿಪ್ಸ್​ ವಿಮೆ, ಹೂಡಿಕೆ ಮತ್ತು ತೆರಿಗೆ ಉಳಿತಾಯದಂತಹ ಪ್ರಯೋಜನೆಗಳನ್ನು ಒಳಗೊಂಡ ಯೋಜನೆಯಾಗಿದೆ. ಇದರಲ್ಲಿ ವಿಮಾದಾರರು ಪಾವತಿಸಿದ ಪ್ರೀಮಿಯಂಗಳನ್ನು ವಿವಿಧ ಭಾಗಗಳಾಗಿ ವಿಂಗಡಿಸಲಾಗುತ್ತದೆ. ಇದರಲ್ಲಿ ಕೆಲವು ಭಾಗದ ಮೊತ್ತವನ್ನು ವಿಮಾ ರಕ್ಷಣೆಗೆ ಹೂಡಿಕೆ ಮಾಡಿದರೆ, ಉಳಿದ ಭಾಗದ ಮೊತ್ತವನ್ನು ವಿಮಾದಾರರ ಆಯ್ಕೆಯ ನಿಧಿಗಳಿಗೆ ವರ್ಗಾಯಿಸಲ್ಪಡುತ್ತದೆ. ವಿಮಾದಾರರು ಪಾವತಿಸಿದ ಪ್ರೀಮಿಯಂಗೆ ಸೆಕ್ಷನ್​ 80ಸಿ ಮಿತಿ (ರೂ.1,50,000)ವರೆಗೆ ತೆರಿಗೆ ವಿನಾಯಿತಿ ಇರಲಿದೆ.

ತೆರಿಗೆ ಉಳಿತಾಯಕ್ಕಾಗಿ ಯುಲಿಪ್ಸ್​ಗಳ ಆಯ್ಕೆ ಸೂಕ್ತವಲ್ಲ: ಹಣಕಾಸು ವರ್ಷದಲ್ಲಿ 2.5 ಲಕ್ಷ ರೂಗಳಿಗಿಂತ ಕಡಿಮೆ ವಾರ್ಷಿಕ ಪ್ರೀಮಿಯಂ ಹೊಂದಿರುವ ಯುಲಿಪ್ಸ್​ಗಳ ಮುಕ್ತಾಯದ ಮೊತ್ತವು 80 ಸಿಸಿಡಿ ಅಡಿಯಲ್ಲಿ ತೆರಿಗೆಯಿಂದ ವಿನಾಯಿತಿ ಪಡೆದಿರುತ್ತದೆ. ತೆರಿಗೆ ಉಳಿತಾಯಕ್ಕಾಗಿ ಯುಲಿಪ್ಸ್​ಗಳನ್ನು ಆರಿಸಿಕೊಳ್ಳುವುದು ಸೂಕ್ತವಲ್ಲ. ಈ ಯುಲಿಪ್​ ಪಾಲಿಸಿಯಲ್ಲಿ, ವಿಮಾ ಪಾಲಿಸಿದಾರರಿಗೆ ಅನೀರಿಕ್ಷತವಾಗಿ ಏನಾದರೂ ಆದಲ್ಲಿ ನಾಮಿನಿಯು ಪಾಲಿಸಿಯ ಪರಿಹಾರವನ್ನು ಪಡೆಯಲಿದ್ದಾರೆ. ಆದ ಕಾರಣ ವಿಮಾ ಪಾಲಿಸಿಯಿಂದ ಕುಟುಂಬದ ಮುಖ್ಯಸ್ಥರು ರಕ್ಷಣೆ ಪಡೆಯುವಂತಾಗಬೇಕು. ಇನ್ನು ಪಾಲಿಸಿಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ತಮ್ಮ ನಂತರ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗದಂತೆ ಅಗತ್ಯವಿರುವ ಮೊತ್ತದ ಪಾಲಿಸಿ ತೆಗೆದುಕೊಳ್ಳುವುದು ಸೂಕ್ತ.

ಪಾಲಿಸಿಯ ಮೊತ್ತವನ್ನು ಒಮ್ಮೆ ಗಮನಿಸುವುದು ಸೂಕ್ತ: ಯುಲಿಪ್​ ಪಾಲಿಸಿ ತೆಗದುಕೊಳ್ಳುವಾಗ ಪಾಲಿಸಿಯ ಮೊತ್ತವನ್ನು ಒಮ್ಮೆ ಗಮನಿಸುವುದು ಸೂಕ್ತ. ಇನ್ನು ಪಾಲಿಸಿಯ ಅವಧಿ ಮುಕ್ತಾಯದ ನಂತರ ಶುಲ್ಕ ಮರು ಪಾವತಿಯಾಗುವಂತಹ ಪಾಲಿಸಿಯನ್ನು ಆಯ್ದುಕೊಳ್ಳಿ. ಯುಲಿಪ್‌ಗಳ ಅಡಿಯಲ್ಲಿ ವಿವಿಧ ರೀತಿಯ ಶುಲ್ಕಗಳನ್ನು ಸಂಗ್ರಹಿಸಲಾಗುತ್ತದೆ. ಈ ಶುಲ್ಕಗಳು ಪಾಲಿಸಿ ನಿರ್ವಹಣೆ ಪ್ರೀಮಿಯಂ ಹಂಚಿಕೆ, ನಿಧಿ ನಿರ್ವಹಣೆ, ಟಾಪ್-ಅಪ್, ಮರಣ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ವಿಮಾದಾರರ ಅವಲಂಬಿಸಿ ಪಾಲಿಸಿಗಳು ಬದಲಾಗುತ್ತವೆ. ಎಷ್ಟು ಪ್ರೀಮಿಯಂ ಪಾವತಿಸಲಾಗಿದೆ ಎನ್ನುವ ಆಧಾರದ ಮೇಲೆ ನಮ್ಮ ಲಾಭವು ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸಬೇಕು.

ನಿಧಿಗಳ ಕಾರ್ಯಕ್ಷಮತೆ ಬಗ್ಗೆ ಎಚ್ಚರಿಕೆಯಿಂದ ಪರಿಶೀಲಿಸಿ: ಈಗಿನ ಯುಲಿಪ್‌ಗಳು ಸಾಮಾನ್ಯವಾಗಿ ಕಡಿಮೆ ಶುಲ್ಕವನ್ನು ಹೊಂದಿರುತ್ತವೆ. ಯುಲಿಪ್‌ಗಳು ದೀರ್ಘಾವಧಿಯ ಯೋಜನೆಗಳಾಗಿರುವುದರಿಂದ, ಅವುಗಳನ್ನು ತೆಗೆದುಕೊಳ್ಳುವ ಮೊದಲು ಕಂಪನಿಯ ವಿಶ್ವಾಸಾರ್ಹತೆ ಮತ್ತು ಕ್ಲೈಮ್ ಪಾವತಿ ಬಗ್ಗೆ ಆಳವಾಗಿ ಪರಿಶೀಲಿಸಬೇಕು. ಯುಲಿಪ್‌ಗಳಲ್ಲಿ ಹೂಡಿಕೆ ಯೋಜನೆಗಳನ್ನು ಆಯ್ಕೆಮಾಡುವ ಮೊದಲು ಪಾಲಿಸಿದಾರರು ತಮ್ಮ ಸಾಮರ್ಥ್ಯವನ್ನು ಪರಿಗಣಿಸಬೇಕು. ನಷ್ಟದ ಭಯ ಹೊಂದಿರುವವರು ಸಾಲದ ಯೋಜನೆ ಆಯ್ಕೆ ಮಾಡುವುದು ಸೂಕ್ತ. ಉತ್ತಮ ಆದಾಯವನ್ನು ಬಯಸುವವರು ಈಕ್ವಿಟಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಹೈಬ್ರಿಡ್ ಫಂಡ್‌ಗಳನ್ನು ಈಕ್ವಿಟಿಗಳು ಮತ್ತು ಸಾಲ ನಿಧಿಗಳ ಒಟ್ಟುಗೂಡಿಸಿ ಆಯ್ಕೆ ಮಾಡಬಹುದಾಗಿದೆ. ನಿಧಿಗಳ ಕಾರ್ಯಕ್ಷಮತೆ ಬಗ್ಗೆ ಎಚ್ಚರಿಕೆಯಿಂದ ಪರಿಶೀಲಿಸಬೇಕು.

ಇದನ್ನೂ ಓದಿ:11 ಸಾವಿರ ಉದ್ಯೋಗಿಗಳ ವಜಾಗೊಳಿಸಲು ಮುಂದಾದ ಟೆಕ್​ ದೈತ್ಯ ಮೈಕ್ರೋಸಾಫ್ಟ್​​

ABOUT THE AUTHOR

...view details