ಕಳೆದ 2 ದಶಕಗಳಲ್ಲಿ ರೋಗಗಳು ಮತ್ತು ಗಾಯಗಳು ಮರಣ ಹಾಗೂ ಅಸ್ವಸ್ಥತೆಗೆ ಕಾರಣವಾಗಿವೆ. ಯುಎನ್ ಸುಸ್ಥಿರ ಅಭಿವೃದ್ಧಿ ಗುರಿಗಳ ಕಾರ್ಯಸೂಚಿಯಲ್ಲಿ ತಿಳಿಸಿರುವಂತೆ, ವಿಶ್ವದಾದ್ಯಂತ ಇರುವ ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್, ಮಧುಮೇಹ ಮತ್ತು ದೀರ್ಘಕಾಲದ ಉಸಿರಾಟದ ತೊಂದರೆಗಳನ್ನು ತಡೆಗಟ್ಟಲು ಚಿಕಿತ್ಸೆ ಅತ್ಯಂತ ಅವಶ್ಯಕವಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ.
ಹೃದಯ ಸಂಬಂಧಿ ಕಾಯಿಲೆಯು ಮೊದಲನೇಯ ಸ್ಥಾನದಲ್ಲಿದ್ದು, ಮಧುಮೇಹ ಮತ್ತು ಬುದ್ಧಿಮಾಂದ್ಯತೆ ಮೊದಲ 10 ಸ್ಥಾನಗಳಲ್ಲಿವೆ. ಕಳೆದ 20 ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಹೃದಯಾಘಾತ ಹೆಚ್ಚು ಸಾವಿಗೆ ಪ್ರಮುಖ ಕಾರಣವಾಗಿದೆ. ಇದು ಹಿಂದೆಂದಿಗಿಂತಲೂ ಹೆಚ್ಚು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಹೃದ್ರೋಗದಿಂದ ಸಾವನ್ನಪ್ಪುವವರ ಸಂಖ್ಯೆ 2000ದಲ್ಲಿ 2 ಮಿಲಿಯನ್‌ಗಿಂತಲೂ ಹೆಚ್ಚಾಗಿದೆ. ಇದು 2019 ರಲ್ಲಿ ಸುಮಾರು 9 ಮಿಲಿಯನ್‌ಗೆ ಏರಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪುವವರ ಸಂಖ್ಯೆ ಶೇ.16ರಷ್ಟಿದೆ. 2 ಮಿಲಿಯನ್ ಹೆಚ್ಚುವರಿ ಸಾವುಗಳಲ್ಲಿ ಅರ್ಧಕ್ಕಿಂತ ಹೆಚ್ಚಿನವು ವಿಶ್ವ ಆರೋಗ್ಯ ಸಂಸ್ಥೆಯ ವೆಸ್ಟರ್ನ್ ಪೆಸಿಫಿಕ್ ಪ್ರದೇಶದಲ್ಲಿ ಸಂಭವಿಸಿವೆ. ಇದಕ್ಕೆ ವ್ಯತಿರಿಕ್ತವಾಗಿ, ಯುರೋಪಿಯನ್ ಪ್ರದೇಶವು ಹೃದ್ರೋಗದಲ್ಲಿ ಕುಸಿತವನ್ನು ಕಂಡಿದೆ. ಸಾವುಗಳಲ್ಲಿ ಶೇ.15 ರಷ್ಟು ಇಳಿಕೆಯನ್ನು ಕಂಡಿದೆ.
ಅಲ್ಜೈಮರ್ ಕಾಯಿಲೆ ಮತ್ತು ಇತರ ರೀತಿಯ ಬುದ್ಧಿಮಾಂದ್ಯತೆಯು ಈಗ ವಿಶ್ವದಾದ್ಯಂತ ಸಾವಿಗೆ ಕಾರಣವಾಗುವ ಅಗ್ರ 10 ಕಾರಣಗಳಲ್ಲಿ ಒಂದಾಗಿದೆ. ಇದು 2019 ರಲ್ಲಿ ಅಮೆರಿಕ ಮತ್ತು ಯುರೋಪ್ ಎರಡರಲ್ಲೂ 3ನೇ ಸ್ಥಾನದಲ್ಲಿದೆ. ಇದು ಮಹಿಳೆಯರ ಮೇಲೆ ಪರಿಣಾಮ ಬೀರುತ್ತಿದೆ. ಜಾಗತಿಕವಾಗಿ ಆಲ್ಜೈಮರ್ ಮತ್ತು ಇತರ ರೀತಿಯ ಬುದ್ಧಿಮಾಂದ್ಯತೆಯಿಂದ ಸಾಯುತ್ತಿರುವವರಲ್ಲಿ ಶೇ.65ರಷ್ಟು ಮಹಿಳೆಯರೇ ಇದ್ದಾರೆ.
2000 ಮತ್ತು 2019 ರ ನಡುವೆ ಜಾಗತಿಕವಾಗಿ ಮಧುಮೇಹದಿಂದ ಶೇ.70ರಷ್ಟು ಸಾವು ಸಂಭವಿಸಿದೆ. ಇದರಿಂದ ಸಾಯುವವರಲ್ಲಿ ಶೇ. 80ರಷ್ಟು ಪುರುಷರೇ ಇದ್ದಾರೆ. ಪೂರ್ವ ಮೆಡಿಟರೇನಿಯನ್‌ನಲ್ಲಿ, ಮಧುಮೇಹದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದ್ವಿಗುಣಗೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳುತ್ತದೆ.