ಬಿಜಾಪುರ (ಛತ್ತೀಸ್ಗಡ): ಬಿಜಾಪುರದಲ್ಲಿ ನಕ್ಸಲರ ದಾಳಿಗೆ 22 ಭದ್ರತಾ ಸಿಬ್ಬಂದಿ ಹುತಾತ್ಮರಾದರು. ಇನ್ನು ಈ ದಾಳಿಯ ಮಾಸ್ಟರ್ ಮೈಂಡ್ ಮೋಸ್ಟ್ ವಾಂಟೆಡ್ ನಕ್ಸಲೈಟ್ ಹಿಡ್ಮಾ. ಪೊಲೀಸ್ ಗುಪ್ತಚರ ಇಲಾಖೆ ಮತ್ತು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಹಿರಿಯ ಅಧಿಕಾರಿಗಳ ಪ್ರಕಾರ, ನಕ್ಸಲ್ ರಾಮಣ್ಣನಿಗಿಂತ ಹಿಡ್ಮಾ ಹೆಚ್ಚು ಅಪಾಯಕಾರಿ.
ಹಿಡ್ಮಾನನ್ನು ಸೆರೆಹಿಡಿಯಲು ಮತ್ತು ಅಂತ್ಯಗಾಣಿಸಲು ಭದ್ರತಾ ಸಿಬ್ಬಂದಿ ನಡೆಸುತ್ತಿರುವ ನಿರಂತರ ಪ್ರಯತ್ನಗಳ ಹೊರತಾಗಿಯೂ, ಅವನನ್ನು ಇನ್ನೂ ಸೆರೆಹಿಡಿಯಲು ಸಾಧ್ಯವಾಗಿಲ್ಲ.
ಹಿಡ್ಮಾ ಮೇಲೆ ದಾಳಿ ನಡೆಸಲು ಯೋಜನೆ:
ಟರ್ರೆಮ್ನಲ್ಲಿ ಹಿಡ್ಮಾ ಇರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿ, ಶನಿವಾರದಂದು ಕಾರ್ಯಾಚರಣೆ ನಡೆಸಿದರು. ಆದರೆ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ 22 ಮಂದಿ ಸಾವನ್ನಪ್ಪಿದರು. ನಕ್ಸಲ್ ವಿರೋಧಿ ಕಾರ್ಯಾಚರಣೆಗಳ ಮೇಲ್ವಿಚಾರಣೆಯ ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿಯು ಹಿಡ್ಮಾನನ್ನು ವಿಶೇಷ ವಲಯ ಸಮಿತಿಯ (ಡಿಕೆಎಸ್ಜೆಸಿ) ಮುಖ್ಯಸ್ಥರನ್ನಾಗಿ ನೇಮಿಸಿದೆ. ಛತ್ತೀಸ್ಗಡದ ಸಂಪೂರ್ಣ ಮಾವೋವಾದಿ ಪಟ್ಟಿಯಲ್ಲಿ ಭದ್ರತಾ ಪಡೆಗಳ ವಿರುದ್ಧ ದಾಳಿ ನಡೆಸಲು ಹಿಡ್ಮಾ ಅವರನ್ನು ನಿಯೋಜಿಸಲಾಗಿದೆ.
ನಕ್ಸಲೈಟ್ ಹಿಡ್ಮಾ ಯಾರು?
ಹಿಡ್ಮಾ ಸುಕ್ಮಾ ಜಿಲ್ಲೆಯ ಪೂವರ್ತಿ ಗ್ರಾಮದ ನಿವಾಸಿ. ಈತ ತನ್ನ ಬಳಿ 50 ಲಕ್ಷ ರೂ.ಯಷ್ಟು ಹಣ ಹೊಂದಿದ್ದಾನೆ. ಇನ್ನು ಈತ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ -1 ಬೆಟಾಲಿಯನ್ ಮುಖ್ಯಸ್ಥನೂ ಹೌದು. ನಕ್ಸಲ್ ರಾಮಣ್ಣನ ಮರಣದ ನಂತರ ಈತ ಅಧಿಕಾರ ವಹಿಸಿಕೊಂಡಿದ್ದು, ಜಿರಾಮ್ ನಕ್ಸಲೈಟ್ ದಾಳಿಯ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿದೆ. ಟ್ಯಾಡ್ಮೆಟ್ಲಾ ನಕ್ಸಲೈಟ್ ದಾಳಿಯನ್ನೂ ಹಿಡ್ಮಾ ಮುನ್ನಡೆಸಿದ್ದ. ಬಿಜಾಪುರದ ನಕ್ಸಲೈಟ್ ದಾಳಿಯ ರೂವಾರಿಯೂ ಹೌದು. ಸುಕ್ಮಾ, ಬಿಜಾಪುರ ಮತ್ತು ದಂತೇವಾಡ ಪ್ರದೇಶಗಳಲ್ಲಿ ಹೆಚ್ಚು ಸಕ್ರಿಯವಾಗಿದ್ದಾನೆ.
ಹಿಡ್ಮಾ ಸುಳಿವು ನೀಡಿದರೆ 50 ಲಕ್ಷ ಬಹುಮಾನ: