ಕರ್ನಾಟಕ

karnataka

ETV Bharat / bharat

ಕೋವಿಶೀಲ್ಡ್​​ನ ನಕಲಿ ಡೋಸ್​ಗಳನ್ನು ಪತ್ತೆ ಹಚ್ಚಿದ ವಿಶ್ವಸಂಸ್ಥೆ

ಕೋವಿಶೀಲ್ಡ್​​ನ ನಕಲಿ ಡೋಸೇಜ್​ಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಪತ್ತೆ ಹಚ್ಚಿದೆ. ನಕಲಿ ಲಸಿಕೆಗಳು ಜಾಗತಿಕವಾಗಿ ಸಾರ್ವಜನಿಕರ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡುತ್ತವೆ ಎಂದು WHO ಎಚ್ಚರಿಕೆ ನೀಡಿದೆ.

WHO
WHO

By

Published : Aug 19, 2021, 8:43 PM IST

ನವದೆಹಲಿ: ಭಾರತದ ಲಸಿಕೆ ‘ಕೋವಿಶೀಲ್ಡ್​’​​​ನ ನಕಲಿ ಡೋಸೇಜ್​ಗಳನ್ನು (Counterfeit versions) ವಿಶ್ವ ಆರೋಗ್ಯ ಸಂಸ್ಥೆ ಪತ್ತೆ ಹಚ್ಚಿದೆ. ಜುಲೈ ಮತ್ತು ಆಗಸ್ಟ್​ ತಿಂಗಳ ನಡುವೆ ಕೋವಿಶೀಲ್ಡ್ ಲಸಿಕೆ ಡೋಸ್​​ಗಳನ್ನು ಭಾರತ ಮತ್ತು ಆಫ್ರಿಕಾದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು WHO ತಿಳಿಸಿದೆ.

ಲಸಿಕೆ ತಯಾರಕಾ ಸಂಸ್ಥೆ ಸೀರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾ, ವಶಪಡಿಸಿಕೊಂಡ ಲಸಿಕೆಗಳನ್ನು ನಕಲಿ ಎಂದು ದೃಢಪಡಿಸಿದೆ. ನಕಲಿ ಲಸಿಕೆಗಳು ಜಾಗತಿಕವಾಗಿ ಸಾರ್ವಜನಿಕರ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಕೋವಿಶೀಲ್ಡ್ ಅಸ್ಟ್ರಾಜೆನೆಕಾ ಜಬ್‌ನ ಭಾರತೀಯ ನಿರ್ಮಿತ ಆವೃತ್ತಿಯಾಗಿದ್ದು, ಇದುವರೆಗೆ ಭಾರತದಲ್ಲಿ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಲಸಿಕೆಯಾಗಿದೆ. ಇದುವರೆಗೆ 486 ದಶಲಕ್ಷ ಡೋಸ್‌ಗಳನ್ನು ನೀಡಲಾಗಿದೆ. ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ದೇಶಗಳಿಗೆ ಸೀರಮ್ ಲಕ್ಷಾಂತರ ಕೋವಿಶೀಲ್ಡ್ ಲಸಿಕೆಗಳನ್ನು ಪೂರೈಸಿದೆ. ಅಲ್ಲದೇ ಕೋವಾಕ್ಸ್ ಯೋಜನೆಯಡಿ ಸಂಸ್ಥೆ ಬಡ ರಾಷ್ಟ್ರಗಳಿಗೂ ವ್ಯಾಕ್ಸಿನ್ ಪೂರೈಸುತ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿಂದು 1,432 ಕೋವಿಡ್ ಸೋಂಕಿತರು ಪತ್ತೆ - 27 ಮಂದಿ ಸಾವು !

ವಿಶ್ವದಲ್ಲಿಯೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳನ್ನು ಹೊಂದಿರುವ ಭಾರತ ಈ ವರ್ಷದ ಅಂತ್ಯದ ವೇಳೆಗೆ ಎಲ್ಲ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಿದೆ.

ABOUT THE AUTHOR

...view details