ಪಾಟ್ನಾ:ಬಿಹಾರದಛಾಪ್ರಾದಲ್ಲಿ ಅಕ್ರಮ ನಕಲಿ ಮದ್ಯ ಸೇವಿಸಿ 39 ವ್ಯಕ್ತಿ ಸಾವಿಗೀಡಾಗಿರುವ ಪ್ರಕರಣವೂ ನಿತೀಶ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬಿಹಾರ ವಿಧಾನಸಭೆ ಕಲಾಪದಲ್ಲಿ ಪ್ರತಿಪಕ್ಷಗಳು ಬಿಹಾರದಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧವಿದ್ದರೂ ಇಂಥ ಘಟನೆಗಳು ಹೇಗೆ ಮರುಕಳಿಸುತ್ತಿವೆ. ಸಿಎಂ ನಿತೀಶ್ ಕುಮಾರ್ ಸಮರ್ಪಕ ಉತ್ತರ ನೀಡುವಂತೆ ಆಗ್ರಹಿಸಿವೆ.
ಈ ವೇಳೆ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರ ನೀಡಿದ ಒಂದು ದಿನದ ಬಳಿಕ ಮಾಧ್ಯಮದವರೊಂದಿಗೆ ನಿತೀಶ್ ಕುಮಾರ್ ಮಾತನಾಡಿದರು. ಬಿಹಾರದಲ್ಲಿ ನಕಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. 'ಮದ್ಯ ಸೇವಿಸುವುದು ಕೆಟ್ಟದ್ದು, ಅದನ್ನು ಕುಡಿದವರು ಸಾಯುತ್ತಾರೆ' ಅದರಲ್ಲಿ ನಕಲಿ ಮದ್ಯ ಸೇವಿಸಿದವರು ಖಂಡಿತವಾಗಿಯೂ ಸಾಯುತ್ತಾರೆ, ಜನರು ಎಚ್ಚರದಿಂದಿರಬೇಕು.
ಮದ್ಯ ನಿಷೇಧವಿಲ್ಲದ ವಿವಿಧ ರಾಜ್ಯಗಳಲ್ಲೂ ನಕಲಿ ಮದ್ಯ ಸೇವಿಸಿ ಸಾವು - ನೋವುಗಳು ಸಂಭವಿಸುತ್ತಲೇ ಇವೆ. ಮದ್ಯಪಾನ ಕೆಟ್ಟ ಚಟ, ಅದನ್ನು ಸೇವಿಸಬಾರದು ಎಂದು ನಿತೀಶ್ ಕುಮಾರ್ ಹೇಳಿದರು.
ನಕಲಿ ಮದ್ಯ ದಂಧೆಗೆ ಕಡಿವಾಣ:ಬಡವರನ್ನು ಹಿಡಿಯಬೇಡಿ, ಈ ನಕಲಿ ಮದ್ಯ ದಂಧೆ ತೊಡಗಿರುವವರನ್ನು ಹಿಡಿಯಿರಿ ಎಂದು ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚಿಸಲಾಗಿದೆ. ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ಜಾರಿ ಇದ್ದು ಇದರ ಲಾಭವನ್ನೂ ಕೆಲವರು ಪಡೆದುಕೊಳ್ಳುತ್ತಿದ್ದಾರೆ. ಬಹಳಷ್ಟು ಜನರು ಮದ್ಯವನ್ನು ತ್ಯಜಿಸಿದ್ದಾರೆ. ತಪ್ಪು ಮಾಡುವವರು ಎಲ್ಲೆಡೆ ಇರುತ್ತಾರೆ. ಅಕ್ರಮ ಮದ್ಯ ಮಾರಾಟ ಕಾನೂನು ಜಾರಿಗೊಳಿಸಲಾಗಿದೆ. ಆದರೂ ಗೊಂದಲ ಸೃಷ್ಟಿಸುವವರು ಅದನ್ನು ಮಾಡುತ್ತಲೇ ಇದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.