ಕರ್ನಾಟಕ

karnataka

ETV Bharat / bharat

ಕೋವಿಡ್​ ಲಸಿಕೆ ವಿತರಿಸುವಲ್ಲಿ ಭಾರತದ ನಡೆ ಕೊಂಡಾಡಿದ ಡಬ್ಲ್ಯುಹೆಚ್‌ಒ ಮಹಾನಿರ್ದೇಶಕ! - ಪ್ರಧಾನಿ ಮೋದಿಯವರ ಪ್ರಯತ್ನವನ್ನು ಶ್ಲಾಘಿಸಿದ ಡಬ್ಲ್ಯುಎಚ್‌ಒ ಮಹಾನಿರ್ದೇಶಕ

1.3 ಬಿಲಿಯನ್ ಜನಸಂಖ್ಯೆಯೊಂದಿಗೆ ದೇಶೀಯ ವ್ಯಾಕ್ಸಿನೇಷನ್ ಡ್ರೈವ್ ವಿಶ್ವದಲ್ಲಿಯೇ ಅತಿ ದೊಡ್ಡ ಮಟ್ಟದ್ದಾಗಿದೆ. ಪೋಲಿಯೊ ಮತ್ತು ಕಾಲರಾ ಮುಂತಾದ ವಿವಿಧ ಕಾಯಿಲೆಗಳಿಗೆ ನಿಯಮಿತ ಚುಚ್ಚುಮದ್ದನ್ನು ಪಡೆಯುತ್ತಿರುವ ಜನಸಂಖ್ಯೆಯೊಂದಿಗೆ ದೇಶವು ಇಂತಹ ಡ್ರೈವ್‌ಗಳ ಮೂಲಕ ಉತ್ತಮ ದಾಖಲೆ ಹೊಂದಿದೆ..

who-chief
ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್

By

Published : Jan 5, 2021, 12:20 PM IST

ನವದೆಹಲಿ :ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಹೆಚ್‌ಒ)ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ವಿಶ್ವದಲ್ಲಿಯೇ ದೊಡ್ಡಮಟ್ಟದಲ್ಲಿ ಲಸಿಕೆ ವಿತರಿಸುವ ಭಾರತದ ಕ್ರಮ ಹಾಗೂ ಕೋವಿಡ್ ಸಾಂಕ್ರಾಮಿಕ ರೋಗ ಕೊನೆಗೊಳಿಸುವ ಸಂಕಲ್ಪ ಶ್ಲಾಘಿಸಿದ್ದಾರೆ.

ಭಾರತ ತನ್ನ ನಿರ್ಣಾಯಕ ಕ್ರಮವನ್ನು ಮುಂದುವರಿಸಿ ಕೋವಿಡ್​ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ತನ್ನ ಸಂಕಲ್ಪ ಪ್ರದರ್ಶಿಸುತ್ತಿದೆ. ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕರಾಗಿ ಕೋವಿಡ್​ ನಿರ್ಮೂಲನೆ ಮಾಡುವಲ್ಲಿ ಉತ್ತಮ ಸ್ಥಾನದಲ್ಲಿದೆ ಎಂದು ಟೆಡ್ರೊಸ್ ಟ್ವೀಟ್ ಮಾಡಿದ್ದಾರೆ.

ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ಮೋದಿಯವರ ಪ್ರಯತ್ನ ಶ್ಲಾಘಿಸಿದ ಅವರು, ನಾವು ಒಟ್ಟಾಗಿ ಹೋದ್ರೆ, ಪ್ರಪಂಚದಾದ್ಯಂತ ರೊಗದಿಂದ ಬಳಲುವವರನ್ನು ರಕ್ಷಿಸಲು ಪರಿಣಾಮಕಾರಿಯಾದ ಸುರಕ್ಷಿತ ಲಸಿಕೆಗಳನ್ನು ಬಳಸಬಹುದು ಎಂದು ನಾವು ಖಚಿತಪಡಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕೊಚ್ಚಿ - ಮಂಗಳೂರು ನೈಸರ್ಗಿಕ ಅನಿಲ ಪೈಪ್‌ಲೈನ್​ ಉದ್ಘಾಟಿಸಿದ ಪ್ರಧಾನಿ ಮೋದಿ

ಭಾರತವು ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ (ಅತಿದೊಡ್ಡ ಲಸಿಕೆ ಉತ್ಪಾದಕ - ಸೆರಮ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಸೇರಿದಂತೆ) ಮತ್ತು ಅಸ್ಟ್ರಾಜೆನೆಕಾ, ನೊವಾವಾಕ್ಸ್ ಮತ್ತು ಗಮಲೇಯ ರಿಸರ್ಚ್ ಇನ್ಸ್‌ಟಿಟ್ಯೂಟ್ ಲಸಿಕೆಗಳನ್ನು ಸಾಮೂಹಿಕವಾಗಿ ಉತ್ಪಾದಿಸುವ ಅಧಿಕಾರವನ್ನು ಪಡೆದುಕೊಂಡಿದೆ ಎಂದು ಹೇಳಿದರು.

1.3 ಬಿಲಿಯನ್ ಜನಸಂಖ್ಯೆಯೊಂದಿಗೆ ದೇಶೀಯ ವ್ಯಾಕ್ಸಿನೇಷನ್ ಡ್ರೈವ್ ವಿಶ್ವದಲ್ಲಿಯೇ ಅತಿ ದೊಡ್ಡ ಮಟ್ಟದ್ದಾಗಿದೆ. ಪೋಲಿಯೊ ಮತ್ತು ಕಾಲರಾ ಮುಂತಾದ ವಿವಿಧ ಕಾಯಿಲೆಗಳಿಗೆ ನಿಯಮಿತವಾಗಿ ಚುಚ್ಚುಮದ್ದನ್ನು ಪಡೆಯುತ್ತಿರುವ ಜನಸಂಖ್ಯೆಯೊಂದಿಗೆ ದೇಶವು ಇಂತಹ ಡ್ರೈವ್‌ಗಳ ಮೂಲಕ ಉತ್ತಮ ದಾಖಲೆ ಹೊಂದಿದೆ ಎಂದರು.

ABOUT THE AUTHOR

...view details