ಕರ್ನಾಟಕ

karnataka

ETV Bharat / bharat

ಡೋಂಟ್​ ವರಿ...  WHO-AIIMS ಸಿರೊಪ್ರೆವೆಲೆನ್ಸ್ ಸಮೀಕ್ಷೆಯ ಫಲಿತಾಂಶ ಸಕಾರಾತ್ಮಕ: ಗುಲೇರಿಯಾ - ವಯಸ್ಕ ಮತ್ತು ಮಕ್ಕಳ ನಡುವೆ ಹರಡುವಿಕೆ

ಈ ಸಮೀಕ್ಷೆಯಿಂದ ಎರಡು ವಿಷಯಗಳನ್ನು ಗುರುತಿಸಲಾಗಿದ್ದು, ಮೊದಲನೆಯದಾಗಿ, ಹೆಚ್ಚಿನ ಸಂಖ್ಯೆಯ ಮಕ್ಕಳು ಸೌಮ್ಯವಾದ ಸೋಂಕಿಗೆ ಒಳಗಾಗುತ್ತಾರೆ ಮತ್ತು ಸರಿಯಾಗುತ್ತಾರೆ ಹಾಗೆ ಎರಡನೆಯದಾಗಿ ನಮ್ಮ ದೇಶದಲ್ಲಿ ಗಮನಾರ್ಹ ಮಕ್ಕಳು ಈಗಾಗಲೇ ಸೋಂಕಿಗೆ ಒಳಗಾಗಿದ್ದು, , ಅವರು ಮತ್ತೆ ಸೋಂಕಿಗೆ ಒಳಗಾಗುವು ಸಾಧ್ಯತೆಗಳು ಕಡಿಮೆ ಎಂಬುದಾಗಿ ತಿಳಿದು ಬಂದಿದೆ.

who-aiims-seroprevalence-survey-outcome-positive-guleria
who-aiims-seroprevalence-survey-outcome-positive-guleria

By

Published : Jun 18, 2021, 3:24 PM IST

ನವದೆಹಲಿ:ಕೊರೊನಾ ಪ್ರಮಾಣ ಕ್ರಮವಾಗಿ 18 ವರ್ಷಕ್ಕಿಂತ ಕಡಿಮೆ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಲ್ಲಿ ಶೇಕಡಾ 55.7 ಮತ್ತು 63.5 ರಷ್ಟಿದೆ ಎಂದು ಕಂಡು ಹಿಡಿಯಲಾಗಿದೆ. ಆದಾಗ್ಯೂ, ಸಮಗ್ರ ಫಲಿತಾಂಶಗಳಿಗಾಗಿ ರಾಷ್ಟ್ರವ್ಯಾಪಿ ದೊಡ್ಡ ಮಟ್ಟದ ಸಮೀಕ್ಷೆ ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಏಮ್ಸ್ ಜಂಟಿ ಸಮೀಕ್ಷೆಯ ಫಲಿತಾಂಶದ ಬಗ್ಗೆ ಏಮ್ಸ್ ದೆಹಲಿ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ.

ವಯಸ್ಕ ಮತ್ತು ಮಕ್ಕಳ ನಡುವೆ ಹರಡುವಿಕೆಯಲ್ಲಿ ಸಂಖ್ಯಾತ್ಮಕವಾಗಿ ದೊಡ್ಡ ವ್ಯತ್ಯಾಸಗಳಿಲ್ಲ ಎಂದು ಅಧ್ಯಯನವು ಒತ್ತಿ ಹೇಳಿದೆ. ಈ ಅಧ್ಯಯನವು ಸೋಂಕಿಗೆ ಒಳಗಾಗಿವೆ ಎಂದು ತಿಳಿದಿಲ್ಲದ ಮಕ್ಕಳಲ್ಲಿ ಸಿರೊ ಕಣ್ಗಾವಲುಗಳನ್ನು ಗಮನಿಸಿದೆ. 18 ವರ್ಷದೊಳಗಿನವರಲ್ಲಿ, ಶೇಕಡಾ 50 ಕ್ಕಿಂತ ಹೆಚ್ಚು ಮಕ್ಕಳು ಮತ್ತು ಕೆಲವು ಪ್ರದೇಶಗಳಲ್ಲಿ, ಶೇಕಡಾ 80 ಕ್ಕಿಂತ ಹೆಚ್ಚು ನಗರ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳು ಪ್ರತಿಕಾಯಗಳನ್ನು ಹೊಂದಿದ್ದಾರೆ.

ಇದರರ್ಥ ಅವರು ಈಗಾಗಲೇ ಸೋಂಕಿಗೆ ಒಳಗಾಗಿದ್ದರು ಮತ್ತು ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂಬ ಬಗ್ಗೆ ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ಡಾ ಗುಲೇರಿಯಾ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.

ಈ ಸಮೀಕ್ಷೆಯಿಂದ ಎರಡು ವಿಷಯಗಳನ್ನು ತೋರಿಸಿದ್ದು, ಮೊದಲನೆಯದಾಗಿ, ಹೆಚ್ಚಿನ ಸಂಖ್ಯೆಯ ಮಕ್ಕಳು ಸೌಮ್ಯವಾದ ಸೋಂಕಿಗೆ ಒಳಗಾಗುತ್ತಾರೆ ಮತ್ತು ಸರಿಯಾಗುತ್ತಾರೆ ಹಾಗೆ ಎರಡನೆಯದಾಗಿ ನಮ್ಮ ದೇಶದಲ್ಲಿ ಗಮನಾರ್ಹ ಮಕ್ಕಳು ಈಗಾಗಲೇ ಸೋಂಕಿಗೆ ಒಳಗಾಗಿದ್ದು, ಅವರು ಮತ್ತೆ ಸೋಂಕಿಗೆ ಒಳಗಾಗುವು ಸಾಧ್ಯತೆಗಳು ಕಡಿಮೆ. ಈ ಡೇಟಾ ಜಾಗತಿಕವಾಗಿ ಲಭ್ಯವಿದ್ದಯ, ಮಕ್ಕಳು ತೀವ್ರವಾದ ಸೋಂಕನ್ನು ಪಡೆಯುವ ಸಾಧ್ಯತೆಯಿಲ್ಲ ಅಥವಾ ಹೆಚ್ಚಿನ ಸಂಖ್ಯೆಯ ಮಕ್ಕಳು ಸೋಂಕಿಗೆ ಒಳಗಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಮುಂದುವರಿದು ಮಾತನಾಡಿರುವ ಅವರು, ಪ್ರತಿಕಾಯಗಳು ಕಂಡು ಬಂದರೆ, ಇದರರ್ಥ ಸ್ವಲ್ಪ ಮಟ್ಟಿಗೆ ರಕ್ಷಣೆ ಇದೆ ಎಂದರ್ಥ. ಕೆಲವು ಜನರು ಕೋಶ-ಮಧ್ಯಸ್ಥಿಕೆಯ ಪ್ರತಿರಕ್ಷೆಯನ್ನು ಹೊಂದಿರುತ್ತಾರೆ. ಒಮ್ಮೆ ಒಬ್ಬರು ಕೋವಿಡ್ ಸೋಂಕಿಗೆ ಒಳಗಾದ ನಂತರ ನಾಲ್ಕರಿಂದ ಆರು ತಿಂಗಳೊಳಗೆ ಪ್ರತಿಕಾಯವು ಕೆಳಗಿಳಿಯುತ್ತದೆ. ಆದರೆ, ವ್ಯಕ್ತಿಯ ಕೋಶ-ಮಧ್ಯಸ್ಥಿಕೆಯ ಪ್ರತಿರಕ್ಷೆಯು ತಿಂಗಳುಗಳು ಮತ್ತು ವರ್ಷಗಳವರೆಗೆ ಪ್ರಕ್ರಿಯೆಯಲ್ಲಿ ಮುಂದುವರೆಯುತ್ತಿರುತ್ತದೆ ಎಂದಿದ್ದಾರೆ.

ಕೆಲವರು ಮೂಳೆ ಮಜ್ಜೆಯಲ್ಲಿ ಮೆಮೊರಿ ಕೋಶಗಳನ್ನು ಸಹ ಹೊಂದಿರುತ್ತಾರೆ. ಈ ಮೆಮೊರಿ ಕೋಶಗಳಿಗೆ ವೈರಸ್ ಬಗ್ಗೆ ಅರಿವಾಗಿ ನೆನಪಿಸಿಕೊಳ್ಳುತ್ತದೆ. ವೈರಸ್‌ಗೆ ಒಡ್ಡಿಕೊಂಡಾಗಲೆಲ್ಲಾ ಮೆಮೊರಿ ಕೋಶಗಳು ದೇಹವನ್ನು ಉತ್ತೇಜಿಸುತ್ತವೆ ಮತ್ತು ಮೂಳೆ ಮಜ್ಜೆಯ ಮತ್ತು ಇತರ ಜೀವಕೋಶಗಳು ವೈರಸ್ ಅನ್ನು ಕೊಲ್ಲಲು ಹೆಚ್ಚಿನ ಸಂಖ್ಯೆಯ ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತವೆ ಎಂದು ವಿವರವಾದ ಮಾಹಿತಿ ನೀಡಿದ್ದಾರೆ.

ವಯಸ್ಕ ಜನಸಂಖ್ಯೆಗೆ ಹೋಲಿಸಿದರೆ ಮಕ್ಕಳಲ್ಲಿ SARS-CoV-2 ಸಿರೊಪೊಸಿಟಿವಿಟಿ ಪ್ರಮಾಣ ಹೆಚ್ಚಿದೆ. ಆದ್ದರಿಂದ, ಚಾಲ್ತಿಯಲ್ಲಿರುವ ಕೊರೊನಾ ರೂಪಾಂತರದ ಮೂಲಕ ಭವಿಷ್ಯದ ಯಾವುದೇ ಮೂರನೇ ತರಂಗವು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳ ಮೇಲೆ ಅಸಮಾನವಾಗಿ ಪರಿಣಾಮ ಬೀರುತ್ತದೆ ಎಂಬುದು ಅಸಂಭವವಾಗಿದೆ ಎಂದಿದ್ದಾರೆ.

ದೆಹಲಿ ನಗರ ಪುನರ್ವಸತಿ ಕೆಂದ್ರಗಳು, ದೆಹಲಿ ಗ್ರಾಮೀಣ (ದೆಹಲಿ-ಎನ್‌ಸಿಆರ್ ಅಡಿಯಲ್ಲಿ ಫರಿದಾಬಾದ್ ಜಿಲ್ಲೆಯ ಹಳ್ಳಿಗಳು), ಭುವನೇಶ್ವರ ಗ್ರಾಮೀಣ, ಗೋರಖ್‌ಪುರ ಗ್ರಾಮೀಣ ಮತ್ತು ಅಗರ್ತಲಾ ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳಲ್ಲಿ ಸೆರೋಸರ್ವೇ ನಡೆಸಲಾಯಿತು. ದತ್ತಾಂಶ ಸಂಗ್ರಹ ಅವಧಿಯು ಮಾರ್ಚ್ 15, 2021 ರಿಂದ ಜೂನ್ 10, 2021 ರವರೆಗೆ ನಡೆದಿದ್ದು, SARS-CoV-2 ವೈರಸ್ ವಿರುದ್ಧದ ಒಟ್ಟು ಸೀರಮ್ ಪ್ರತಿಕಾಯವನ್ನು ಪ್ರಮಾಣಿತ ಎಲಿಸಾ ಕಿಟ್ ಬಳಸಿ ಗುಣಾತ್ಮಕವಾಗಿ ನಿರ್ಣಯಿಸಲಾಗುತ್ತದೆ ಎಂದು ಗುಲೇರಿಯಾ ಹೇಳಿದ್ದಾರೆ.

ABOUT THE AUTHOR

...view details