ತಮಿಳುನಾಡು: ಸತ್ಯಮಂಗಲ ಹುಲಿ ಅಭಯಾರಣ್ಯದಲ್ಲಿರುವ ಬಿಳಿ ಹುಲಿಗಳಿಗೆ ಸಂಕಷ್ಟ ಎದುರಾಗಿದೆ. ಸಮೀಪದ ಅರಣ್ಯದಲ್ಲಿರುವ ಬವಾರಿಯಾ ದರೋಡೆಕೋರರ ಅಟ್ಟಹಾಸಕ್ಕೆ ಕಡಿವಾಣ ಹಾಕಬೇಕು ಎಂದು ಇಲ್ಲಿನ ಪರಿಸರವಾದಿಗಳು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸತ್ಯಮಂಗಲ ಸಮೀಪದ ಅರಸೂರು ಅರಣ್ಯ ಪ್ರದೇಶದಲ್ಲಿ ಹುಲಿ ಚರ್ಮ ಮತ್ತು ಉಗುರುಗಳನ್ನು ಅಕ್ರಮವಾಗಿ ಅಡಗಿಸಿಟ್ಟಿದ್ದ ನಾಲ್ವರನ್ನು ಬಂಧಿಸಿದ ಬೆನ್ನಲ್ಲೇ ಅರಣ್ಯದಲ್ಲಿ ದರೋಡೆಕೋರರ ಅಟ್ಟಹಾಸ ಪ್ರಾರಂಭವಾಗಿದೆಯೇ? ಎಂಬುದನ್ನು ಪತ್ತೆ ಹಚ್ಚುವಂತೆ ಪರಿಸರವಾದಿಗಳು ಪೊಲೀಸರು ಮತ್ತು ಅಲ್ಲಿನ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹುಲಿಗಳ ಮೇಲೆ ದಾಳಿ ನಡೆಯುತ್ತಿರುವ ಕುರಿತು ಕೆಲ ಮೂಲಗಳಿಂದ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು, ತಕ್ಷಣ ಆಯ್ದ ಸ್ಥಳಗಳಲ್ಲಿ ದಾಳಿ ನಡೆಸಿ ತಾತ್ಕಾಲಿಕ ಶೆಲ್ಟರ್‌ಗಳನ್ನು ಪರಿಶೀಲನೆ ಕೂಡಾ ನಡೆಸಿದ್ದಾರೆ. ಈ ಕಾರ್ಯಾಚರಣೆ ವೇಳೆ ಅಧಿಕಾರಿಗಳು ಗೋಣಿಚೀಲದಲ್ಲಿ ಬಚ್ಚಿಟ್ಟಿದ್ದ ಹುಲಿಯ ಚರ್ಮ, ಉಗುರು, ಮೂಳೆಗಳನ್ನು ತಮಿಳುನಾಡು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರು ಪಂಜಾಬ್ ಮೂಲದ ರತ್ನ (40), ಮಂಗಲ್ (28), ಕೃಷ್ಣನ್ (59) ಮತ್ತು ರಾಜಸ್ಥಾನದ ರಾಮ್ ಚಂದರ್ (50) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಗಾಯಗೊಂಡಿದ್ದ ತಾಯಿ ಹುಲಿ ಸೆರೆ: ಚಿಕಿತ್ಸೆಗಾಗಿ ಮೈಸೂರಿಗೆ ಸ್ಥಳಾಂತರ
ಈ ಪ್ರಕರಣದ ಕುರಿತು ಮಾಹಿತಿ ನೀಡಿರುವ ಅರಣ್ಯ ಅಧಿಕಾರಿಗಳು, 'ಬಂಧಿತ ನಾಲ್ವರು ಬವಾರಿಯಾ ಗ್ಯಾಂಗ್‌ನ ಸದಸ್ಯರು ಎಂದು ಕಂಡುಬಂದಿದೆ, ಅವರು ಡಕಾಯಿತಿ ಮತ್ತು ಹತ್ಯೆಗಳಿಗೆ ಕುಖ್ಯಾತರಾಗಿದ್ದಾರೆ. ಪ್ರಕರಣದ ಕುರಿತು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಬಂಧಿತರು ಅರಣ್ಯ ಪ್ರದೇಶದಲ್ಲಿ ಬೇಟೆಯಾಡಿದ್ದಾರೆಯೇ? ಇಲ್ಲವೇ ಎಂಬ ಕುರಿತು ವಿಚಾರಣೆ ನಡೆಸಲಾಗುತ್ತಿದೆ' ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಎರಡು ಪ್ರಾಣ ತೆಗೆದಿದ್ದ ಹುಲಿ ಕೊನೆಗೂ ಸೆರೆ: ನಿಟ್ಟುಸಿರು ಬಿಟ್ಟ ಕೊಡಗಿನ ಜನ
ಅದಾಗಿಯೂ, ಈರೋಡ್ ಮೂಲದ ಪರಿಸರವಾದಿಗಳು ಬಿಳಿ ಹುಲಿಗಳನ್ನು ಬೇಟೆಯಾಡಲಾಗುತ್ತಿದೆಯೇ ಎಂಬುದನ್ನು ಪತ್ತೆ ಮಾಡುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ನೀಲಗಿರಿ ಅರಣ್ಯ ವ್ಯಾಪ್ತಿಯ ಅವಿಲಾಂಚಿ ಅರಣ್ಯ ಪ್ರದೇಶದಲ್ಲಿ ಎರಡು ವರ್ಷಗಳ ಹಿಂದೆ ಬಿಳಿ ಹುಲಿಗಳು ಕಾಣಿಸಿಕೊಂಡಿದ್ದವು. ಬಂಧಿತ ನಾಲ್ವರೂ ಬವಾರಿಯಾ ದರೋಡೆಕೋರರಾಗಿದ್ದು, ಇವರ ಸಹಚರರು ಬೇರೆ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿ ಬೇಟೆಗಾಗಿ ಉಳಿದುಕೊಂಡಿದ್ದಾರೆಯೇ ಎಂದು ಅರಣ್ಯ ಇಲಾಖೆ ಪರಿಶೀಲಿಸಬೇಕು. ಪರಿಶೀಲನೆ ವೇಳೆ ಅಂತಹದ್ದೇನಾದರೂ ಕಂಡು ಬಂದರೆ, ಅವರನ್ನೆಲ್ಲ ಕೂಡಲೇ ಬಂಧಿಸಬೇಕೆಂದು ವನ್ಯಜೀವಿಗಳ ಸುರಕ್ಷತೆಯ ಬಗ್ಗೆ ಪರಿಸರವಾದಿಗಳು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ ಒನ್ಯಪ್ರಾಣಿಗಳನ್ನು ಕೊಲ್ಲುವ ಈ ಗ್ಯಾಂಗ್‌ನ ಕೃತ್ಯದ ಬಗ್ಗೆ ಇವರೆಲ್ಲ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕೆರೆಯಲ್ಲಿ ಹುಲಿ ಕಳೇಬರ ಪತ್ತೆ: ಮೊದಲೇ ಸೆರೆ ಹಿಡಿಯದಿದ್ದಕ್ಕೆ ಜನರ ಆಕ್ರೋಶ