ಕರ್ನಾಟಕ

karnataka

ETV Bharat / bharat

ಭಾರತ ಚೀನಾ ಯೋಧರ ಘರ್ಷಣೆ.. ಪರಿಸ್ಥಿತಿ ಶಾಂತವಾಗಿರುವುದಕ್ಕೆ ಅಮೆರಿಕ ಸಂತಸ

ಭಾರತ ಚೀನಾ ಯೋಧರು ಘರ್ಷಣೆಯಿಂದ ಹಿಂದೆ ಸರಿದು ಶಾಂತಿ ಕಾಪಾಡುತ್ತಿರುವುದು ನಮಗೆ ಸಂತೋಷವಾಗಿದೆ ಎಂದು ಅಮೆರಿಕದ ಶ್ವೇತಭವನದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಪತ್ರಿಕಾ ಕಾರ್ಯದರ್ಶಿ ತಿಳಿಸಿದ್ದಾರೆ.

India China conflict in Tawang
ಭಾರತ ಚೀನಾ ಯೋಧರ ಘರ್ಷಣೆ

By

Published : Dec 14, 2022, 10:23 AM IST

Updated : Dec 14, 2022, 11:32 AM IST

ವಾಷಿಂಗ್ಟನ್​ ​(ಅಮೆರಿಕ): ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ನಡೆದ ಭಾರತ ಚೀನಾ ಯೋಧರ ಘರ್ಷಣೆಯ ನಂತರ ಇದೀಗ ಭಾರತ ಮತ್ತು ಚೀನಾ ಎರಡೂ ದೇಶಗಳು ಸಂಘರ್ಷದಿಂದ ಹಿಂದೆ ಸರಿದಿರುವುದು ಉತ್ತಮ ಬೆಳವಣಿಗೆ ಮತ್ತು ಸಂತಸ ತಂದಿದೆ ಎಂದು ಅಮೆರಿಕ ಹೇಳಿದೆ.

ಮಂಗಳವಾರ ಶ್ವೇತಭವನದಲ್ಲಿ ನಡೆದ (ಸ್ಥಳೀಯ ಕಾಲಮಾನ) ಮಾಧ್ಯಮಗೋಷ್ಟಿಯಲ್ಲಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಅವರು, ಭಾರತ-ಚೀನಾ ಯೋಧರ ಘರ್ಷಣೆಯನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸದ್ಯ ಭಾರತ ಮತ್ತು ಚೀನಾ ಶಾಂತಿ ಕಾಪಾಡುತ್ತಿರುವುದಕ್ಕೆ ಬೈಡನ್​ ಆಡಳಿತಕ್ಕೆ ಸಂತೋಷವಾಗಿದೆ ಎಂದಿದ್ದಾರೆ.

ಅಲ್ಲದೇ ವಿವಾದಿತ ಗಡಿಗಳ ಬಗ್ಗೆ ಚರ್ಚಿಸಲು ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಮಾರ್ಗಗಳನ್ನು ಬಳಸುವಂತೆ ಎರಡೂ ರಾಷ್ಟ್ರಗಳಿಗೆ ಅಮೆರಿಕ ಸಲಹೆ ನೀಡಿದೆ.

ಇದನ್ನೂ ಓದಿ:ಅರುಣಾಚಲದಲ್ಲಿ ಭಾರತ-ಚೀನಾ ಯೋಧರ ಘರ್ಷಣೆ; ಎರಡೂ ಕಡೆ ಯೋಧರಿಗೆ ಗಾಯ

Last Updated : Dec 14, 2022, 11:32 AM IST

ABOUT THE AUTHOR

...view details