ಕರ್ನಾಟಕ

karnataka

ETV Bharat / bharat

'ಬ್ಲಾಕ್​ ಫಂಗಸ್'​​ಕ್ಕಿಂತಲೂ ಅಪಾಯಕಾರಿ ಈ 'ವೈಟ್​ ಫಂಗಸ್​'... ಯಾರಿಗೆ ಹೆಚ್ಚು ತೊಂದರೆ!?

ಕೋವಿಡ್​ ಮಹಾಮಾರಿ ಹಾಗೂ ಬ್ಲಾಕ್ ಫಂಗಸ್​ ಹಾವಳಿ ಮಧ್ಯೆ ಇದೀಗ ವೈಟ್​ ಫಂಗಸ್​ ಲಗ್ಗೆ ಹಾಕಿದ್ದು, ಇದರಿಂದ ಜನರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.

White Fungus
White Fungus

By

Published : May 20, 2021, 9:03 PM IST

ಹೈದರಾಬಾದ್​:ದೇಶದಲ್ಲಿ ಕೊರೊನಾ ವೈರಸ್​ ಹಾವಳಿ ನಡುವೆ ಬ್ಲಾಕ್​ ಫಂಗಸ್ ಕಾಟ ಶುರುವಾಗಿದ್ದು, ಬಹುತೇಕ ಎಲ್ಲೆಡೆ ಈ ಸೋಂಕು ಕಾಣಿಸಿಕೊಳ್ಳಲು ಶುರುವಾಗಿದ್ದರಿಂದ ಇದೊಂದು ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಲಾಗ್ತಿದೆ. ಇದರ ಬೆನ್ನಲ್ಲೇ ಇದೀಗ ವೈಟ್ ಫಂಗಸ್​ ಕಾಣಿಸಿಕೊಂಡಿದ್ದು, ಎಲ್ಲದಕ್ಕಿಂತಲೂ ಅತಿ ಹೆಚ್ಚು ಡೇಂಜರ್​ ಎಂದು ಹೇಳಲಾಗುತ್ತಿದೆ.

ಬ್ಲಾಕ್​ ಫಂಗಸ್​ಕ್ಕಿಂತಲೂ ಅತಿ ಹೆಚ್ಚು ಅಪಾಯಕಾರಿ ಈ ವೈಟ್ ಫಂಗಸ್ ಎಂದು ಹೇಳಲಾಗುತ್ತಿದ್ದು, ಈಗಾಗಲೇ ಬಿಹಾರದ ಪಾಟ್ನಾದಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಶ್ವಾಸಕೋಸಕ್ಕೆ ನೇರವಾಗಿ ದಾಳಿ ಮಾಡುವುದರಿಂದ ಹೆಚ್ಚಿನ ಅಪಾಯವಿರುತ್ತದೆ ಎಂದು ತಿಳಿದು ಬಂದಿದೆ. ಅನಾರೋಗ್ಯದಿಂದ ಬಳಲುತ್ತಿರುವವರಲ್ಲಿ ಹೆಚ್ಚಾಗಿ ಈ ಸೋಂಕು ದಾಳಿ ಮಾಡುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಕೋವಿಡ್ ಸೋಂಕಿಗೆ ಒಂದೇ ಕುಟುಂಬದ ಆರು ಮಂದಿ ಬಲಿ.. ಮನೆ ದೀಪ ಬೆಳಗಲೂ ಇಲ್ಲ ಜನ!

ವೈಟ್ ಫಂಗಸ್ ಲಕ್ಷಣಗಳು

  • ಬ್ಲಾಕ್​ಫಂಗಸ್​ನಲ್ಲಿ ಕಾಣಿಸಿಕೊಳ್ಳುವ ಬಹುತೇಕ ಲಕ್ಷಣಗಳು ಇಲ್ಲಿ ಗೋಚರಿಸುತ್ತವೆ
  • ಪ್ರಮುಖವಾಗಿ ತಲೆ ನೋವು, ಮುಖ ಊತ ಅಥವಾ ಬಾವು
  • ಮಾನಸಿಕವಾಗಿ ಕಿರಿಕಿರಿಯಾಗುವುದು
  • ಮೇಲಿಂದ ಮೇಲೆ ಮೂಗು ಕಟ್ಟುವಿಕೆ

ಪ್ರಮುಖವಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಹಾಗೂ ಮದುಮೇಹಿಗಳಲ್ಲಿ ಈ ಸೋಂಕು ಹೆಚ್ಚಾಗಿ ಕಂಡು ಬರಲಿದ್ದು, ಶ್ವಾಸಕೋಶದ ಜೊತೆಗೆ ದೇಹದ ಇತರ ಭಾಗಗಳಾದ ಕಿಡ್ನಿ, ಉಗುರು, ಜನನಾಂಗಗಳು ಹಾಗೂ ಚರ್ಮಕ್ಕೂ ಹಾನಿ ಮಾಡುತ್ತದೆ.

ಕೋವಿಡ್​​ ಸೋಂಕಿನಿಂದ ಗುಣಮುಖರಾಗುವ ಕೆಲ ಜನರಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಒಂದು ವೇಳೆ ಇದಕ್ಕೆ ಚಿಕಿತ್ಸೆ ನೀಡದಿದ್ದರೆ ಸಾವನ್ನಪ್ಪುವ ಸಾಧ್ಯತೆ ಹೆಚ್ಚಾಗಿರುತ್ತವೆ ಎನ್ನಲಾಗಿದೆ. ವೈಟ್​ ಫಂಗಸ್​​ಗೆ ಆ್ಯಂಟಿ ಫಂಗಲ್​ ಇಂಜೆಕ್ಷನ್​ ನೀಡಲಾಗ್ತಿದ್ದು, ಇದರ ಪ್ರತಿ ಡೋಸ್​ನ ಬೆಲೆ 3,500 ರೂ ಆಗಿದೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ PMCH ಮೈಕ್ರೋಬಯಾಲಜಿ ಮುಖ್ಯಸ್ಥ ಡಾ. ಎಸ್​​ ಎನ್ ಸಿಂಗ್​, ಬಿಹಾರದಲ್ಲಿ ನಾಲ್ವರು ಸೋಂಕಿತರ ಮಾದರಿ ಈಗಾಗಲೇ ತೆಗೆದುಕೊಳ್ಳಲಾಗಿದ್ದು, ಇದರಿಂದ ಅವರ ಶ್ವಾಸಕೋಸಕ್ಕೆ ಹೆಚ್ಚಿನ ತೊಂದರೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.

ABOUT THE AUTHOR

...view details