ಲಖನೌ :ಜಾರಿ ನಿರ್ದೇಶನಾಲಯ (ಇಡಿ) ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಪರೀಕ್ಷೆ ಇದ್ದಂತೆ. ಯಾವಾಗೆಲ್ಲ ಅಧಿಕಾರದಲ್ಲಿರುವ ಸರ್ಕಾರವು ವಿಫಲವಾಗುತ್ತದೆಯೋ ಆಗೆಲ್ಲ ಪ್ರತಿಪಕ್ಷದವರು ಈ ಪರೀಕ್ಷೆಯನ್ನು ಪಾಸು ಮಾಡಬೇಕಾಗುತ್ತದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಸಿಂಗ್ ಯಾದವ್ ವ್ಯಂಗ್ಯವಾಡಿದ್ದಾರೆ. ಆದರೆ, ಎಲ್ಲದಕ್ಕೂ ಸಿದ್ಧರಾಗಿರುವವರು ಮಾತ್ರ ಇಂಥ ಪರೀಕ್ಷೆಗೆ ಹೆದರುವುದಿಲ್ಲ ಎಂದು ಅವರು ಹೇಳಿದ್ದಾರೆ.
"ಇಂದಿನ ದಿನಮಾನದಲ್ಲಿ ಇಡಿ ಅಂದ್ರೆ ಎಕ್ಸಾಮಿನೇಶನ್ ಇನ್ ಡೆಮಾಕ್ರಸಿ ಎಂದಾಗಿದೆ. ರಾಜಕೀಯದಲ್ಲಿ ಪ್ರತಿಪಕ್ಷದವರು ಈ ಎಕ್ಸಾಮ್ ಪಾಸು ಮಾಡಲೇಬೇಕು. ಸರಕಾರ ಫೇಲ್ ಆದಾಗಲೆಲ್ಲ ಅದು ಈ ಎಕ್ಸಾಂ ಘೋಷಣೆ ಮಾಡುತ್ತೆ.