ನವದೆಹಲಿ: ವಕೀಲನಾಗಿದ್ದಾಗ ಮೊದಲ ಬಾರಿಗೆ ಶುಲ್ಕ ರೂಪದಲ್ಲಿ ನನ್ನ ತಾಯಿಗೆ ಸೀರೆಯನ್ನು ಪಡೆದಿದ್ದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೆನಪಿಸಿಕೊಂಡರು. ಹೊಸದಾಗಿ ನೋಂದಾಯಿತ ಅಡ್ವೊಕೇಟ್ ಆನ್ ರೆಕಾರ್ಡ್ (ಎಒಆರ್) ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿಗಳು, ನಾನು ಪ್ರಮುಖ ರಾಜಕಾರಣಿಯೊಬ್ಬರ ವಕಾಲತ್ತು ವಹಿಸಿದ್ದೆ, ನನ್ನಂತಹ ಕಿರಿಯ ವಕೀಲ ಹೇಗೆ ಪ್ರಕರಣವನ್ನು ನಿಭಾಯಿಸುತ್ತಾನೆ ಎಂದು ಅವರು ಆಶ್ಚರ್ಯಪಟ್ಟಿದ್ದರು ಎಂದರು.
ಈ ಪ್ರಸಂಗವನ್ನು ವಕೀಲರೊಂದಿಗೆ ಹಂಚಿಕೊಂಡ ಮುಖ್ಯ ನ್ಯಾಯಮೂರ್ತಿ, ನಾನು ಸೋಮ್ ವಿಹಾರ್‌ನ ಸಣ್ಣ ಫ್ಲಾಟ್ನಲ್ಲಿ ವಾಸಿಸುತ್ತಿದ್ದೆ. ಈ ವೇಳೆ ರಾಜಕಾರಣಿ ನನ್ನ ಫ್ಲಾಟ್ಗೆ ಬಂದು ನನ್ನ ತಾಯಿಗೆ ಒಳ್ಳೆಯ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು. ಮರುದಿನ ಬೆಳಗ್ಗೆ ಕಚೇರಿಗೆ ಹೋದಾಗ, ಇದು ನಿಮಗೆ ಶುಲ್ಕ ರೂಪದಲ್ಲಿ ನೀಡಿದ ಸೀರೆ ಎಂದು ಹಿರಿಯರು ಹೇಳಿದರು. ಮೊದಲು ನಾನು ಕಿರಿಯ ವಕೀಲನಾಗಿದ್ದರಿಂದ ನನಗೆ ಪ್ರಶಂಸೆ ಸಿಗುವುದಿಲ್ಲ ಎಂದು ತುಂಬಾ ನಿರಾಶೆಗೊಂಡಿದ್ದೆ. ನಂತರ ಶುಲ್ಕ ನೀಡಿದಾಗ ನನಗೆ ಏನೆಂಬುದು ತಿಳಿಯಿತು ಎಂದು ಹೇಳಿದರು.
ಎಒಆರ್ನ ಪಾತ್ರವು ಅತ್ಯಂತ ಜವಾಬ್ದಾರಿಯುತವಾಗಿದೆ ಮತ್ತು ಕಿರಿಯ ವಕೀಲರು ಕಕ್ಷಿದಾರರೊಂದಿಗಿನ ಮೊದಲ ಇಂಟರ್ಫೇಸ್ ಆಗಿದ್ದಾರೆ ಮತ್ತು ಈ ನ್ಯಾಯಾಲಯದ ಉಳಿವಿಗಾಗಿ ಎಒಆರ್ ನಂತಹ ಸಂಸ್ಥೆಯ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. ನಂತರ ಕಕ್ಷಿದಾರರು ಹಣದ ಬದಲು ಇನ್ನೂ ಹೆಚ್ಚಿನ ಪ್ರಕರಣಗಳನ್ನು ನೀಡಿದ ಎರಡನೇ ಪ್ರಸಂಗವನ್ನು ಮುಖ್ಯ ನ್ಯಾಯಮೂರ್ತಿ ಕಿರಿಯ ವಕೀಲರೊಂದಿಗೆ ಹಂಚಿಕೊಂಡರು.