ಕರ್ನಾಟಕ

karnataka

ಮುಂದಿನ ದಿನಗಳಲ್ಲಿ ವಾಟ್ಸ್​ಆ್ಯಪ್ ​ಅಪ್ಲಿಕೇಶನ್‌ನಲ್ಲಿ ಬ್ಯಾನರ್​ ಪ್ರದರ್ಶನ: ಏನಿದು ಬ್ಯಾನರ್​

By

Published : Feb 19, 2021, 1:55 PM IST

ಇಂದು ಬ್ಲಾಗ್ ಪೋಸ್ಟ್‌ನಲ್ಲಿ, ವಾಟ್ಸ್​ಆ್ಯಪ್ ಮುಂದಿನ ವಾರಗಳಲ್ಲಿ ಅಪ್ಲಿಕೇಶನ್‌ನಲ್ಲಿ ಬ್ಯಾನರ್​ನನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದೆ. ಇದರಲ್ಲಿ ಜನರು ತಮಗೆ ಬೇಕಾದ ಮಾಹಿತಿಯನ್ನು ಓದಬಹುದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

WhatsApp
ವಾಟ್ಸ್​ಆ್ಯಪ್

ನವದೆಹಲಿ:ವಾಟ್ಸ್​ಆ್ಯಪ್ ತನ್ನ ಮೂಲ ಕಂಪನಿ ಫೇಸ್‌ಬುಕ್‌ನೊಂದಿಗೆ ಬಳಕೆದಾರರ ಡೇಟಾವನ್ನು ಹಂಚಿಕೊಳ್ಳುತ್ತಿರುವ ಬಗ್ಗೆ ವ್ಯಾಪಕ ಟೀಕೆಗಳು ಬಂದ ಹಿನ್ನೆಲೆ ಗೌಪ್ಯತೆ ನೀತಿ ಮತ್ತು ಬಳಕೆಯ ನವೀಕರಣಕ್ಕೆ ಸಂಬಂಧಿಸಿ, ಬಳಕೆದಾರರಿಗೆ ಹೆಚ್ಚಿನ ಮಾಹಿತಿ ನೀಡುವ ಸಲುವಾಗಿ ವಾಟ್ಸ್​ಆ್ಯಪ್ ಬ್ಯಾನರ್ ಪ್ರದರ್ಶಿಸಲಿದೆ.

ವಿವಾದಾತ್ಮಕ ನೀತಿಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆಯನ್ನು ಮಾಡಲಾಗುವುದಿಲ್ಲ ಎಂದು ಕಂಪನಿ ಹೇಳಿದ್ದು, ಬದಲಾವಣೆಯ ದಿನಾಂಕವನ್ನು ಫೆಬ್ರವರಿ 8 ರಿಂದ ಮೇ 15 ಕ್ಕೆ ಮುಂದೂಡಿದೆ.

ಶುಕ್ರವಾರ ಬ್ಲಾಗ್‌ಪೋಸ್ಟ್‌ನಲ್ಲಿ, ಮುಂದಿನ ದಿನಗಳಲ್ಲಿ ಅಪ್ಲಿಕೇಶನ್‌ನಲ್ಲಿ ಬ್ಯಾನರ್ ಪ್ರದರ್ಶಿಸಲಾಗುವುದು. ಜನರು ತಮಗೆ ಬೇಕಾದ ಮಾಹಿತಿಯನ್ನು ಇಲ್ಲಿ ಓದಬಹುದಾಗಿದೆ ಎಂದು ವಾಟ್ಸ್​ಆ್ಯಪ್ ಹೇಳಿದೆ.

ಓದಿ:ಫೆ.8ರಿಂದ ವಾಟ್ಸ್​ಆ್ಯಪ್​ನಲ್ಲಿ ಪರಿಷ್ಕೃತ ಗೌಪ್ಯ ನೀತಿ: ಈ ನಿಯಮ ಒಪ್ಪಿದರಷ್ಟೇ ಸೇವೆ ಮುಂದುವರಿಕೆ

"ನಿಮ್ಮ ಕಾಳಜಿಗಾಗಿ ನಾವು ಹೆಚ್ಚಿನ ಮಾಹಿತಿಯನ್ನು ಸೇರಿಸಿದ್ದೇವೆ. ಅಂತಿಮವಾಗಿ, ಬಳಕೆದಾರರು ವಾಟ್ಸ್​ಆ್ಯಪ್​​ನನ್ನು ಬಳಸುವುದನ್ನು ಮುಂದುವರಿಸಲಿ ಎಂದು ನಾವು ಈ ಬದಲಾವಣೆಯನ್ನು ಮಾಡುತ್ತಿದ್ದೇವೆ " ಎಂದು ಫೇಸ್ಬುಕ್ ಒಡೆತನದ ಕಂಪನಿ ಹೇಳಿಕೊಂಡಿದೆ.

ಫೆಬ್ರವರಿ 8ರ ಒಳಗೆ ವಾಟ್ಸ್​ಆ್ಯಪ್​ನ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯಲ್ಲಿನ ಬದಲಾವಣೆಗಳನ್ನು ಒಪ್ಪಿಕೊಳ್ಳುವಂತೆ ಕಂಪನಿ ಸೂಚಿಸಿತ್ತು. ಒಂದು ವೇಳೆ ಒಪ್ಪಿಗೆ ಸೂಚಿಸದಿದ್ದರೇ ಖಾತೆಗಳು ಅಳಿಸಲಾಗುತ್ತದೆ ಎಂದು ಕೂಡ ಹೇಳಿತ್ತು. ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ನಂತರ, ವಾಟ್ಸ್​ಆ್ಯಪ್ ತನ್ನ ಹೊಸ ನೀತಿ ನವೀಕರಣವನ್ನು ಮೇ.15 ಕ್ಕೆ ಮುಂದೂಡಿತ್ತು.

ABOUT THE AUTHOR

...view details