ಕರ್ನಾಟಕ

karnataka

ETV Bharat / bharat

18 ಲಕ್ಷ ಭಾರತೀಯರ ಖಾತೆಗಳನ್ನು ನಿಷೇಧಿಸಿದ WhatsApp : ಕಾರಣ? - ಹೊಸ ಐಟಿ ನಿಯಮಗಳ ಆಧಾರದ ಮೇಲೆ ಹಲವಾರು ವಾಟ್ಸಾಪ್​ ಖಾತೆಗಳನ್ನು ನಿಷೇಧಿಸಿದ ಸಂಸ್ಥೆ

ಇತ್ತೀಚಿನ ವರದಿಯ ಪ್ರಕಾರ ಮಾರ್ಚ್ 1ರಿಂದ ಮಾ. 31, 2022 ರ ನಡುವೆ 18.05 ಲಕ್ಷ ಭಾರತೀಯ ಖಾತೆಗಳನ್ನು ವಾಟ್ಸಾಪ್​ನಿಂದ ನಿಷೇಧಿಸಲಾಗಿದೆ.

ಮಾರ್ಚ್‌ನಲ್ಲಿ 18 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದ WhatsApp
ಮಾರ್ಚ್‌ನಲ್ಲಿ 18 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದ WhatsApp

By

Published : May 2, 2022, 4:57 PM IST

ಹೈದರಾಬಾದ್​: ಎಂದಿನಂತೆ ಮಾರ್ಚ್ 2022 ರಲ್ಲಿ 597 ಕುಂದುಕೊರತೆ ವರದಿಗಳನ್ನು ಸ್ವೀಕರಿಸಲಾಗಿದ್ದು, ಇದರಲ್ಲಿ 74 ಖಾತೆಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ವರದಿಯ ಪ್ರಕಾರ ವಾಟ್ಸಾಪ್ ಮಾರ್ಚ್‌ನಲ್ಲಿ 18.05 ಲಕ್ಷ ಭಾರತೀಯರ ಖಾತೆಗಳನ್ನು ನಿಷೇಧಿಸಿದೆ. ಬಳಕೆದಾರರಿಂದ ಸ್ವೀಕರಿಸಿದ ದೂರುಗಳ ಆಧಾರದ ಮೇಲೆ ಮತ್ತು ಉಲ್ಲಂಘನೆಗಳನ್ನು ತಡೆಗಟ್ಟಲು ಮತ್ತು ಪತ್ತೆಹಚ್ಚಲು ಈ ಕೆಲಸ ಮಾಡಿಕೊಂಡು ಬರುತ್ತಿದೆ.

ಹೊಸ ಐಟಿ ನಿಯಮಗಳು ಕಳೆದ ವರ್ಷ ಜಾರಿಗೆ ಬಂದಿವೆ. ಈ ಮೂಲಕ ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು (50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಒಳಗೊಂಡಿರುವವು) ಪ್ರತಿ ತಿಂಗಳು ಅನುಸರಣೆ ವರದಿಗಳನ್ನು ಪ್ರಕಟಿಸುವ ಅಗತ್ಯವಿದೆ. ಸ್ವೀಕರಿಸಿದ ದೂರುಗಳ ವಿವರಗಳನ್ನು ಮತ್ತು ತೆಗೆದುಕೊಂಡ ಕ್ರಮಗಳನ್ನು ಇದರಲ್ಲಿ ಉಲ್ಲೇಖಿಸಲಾಗುತ್ತದೆ. ಅದರಂತೆ ವಾಟ್ಸಾಪ್​ ಸಹ ಈ ಹಲವಾರು ಖಾತೆಗಳಲ್ಲಿ ಈ ನಿಯಮದಡಿ ನಿಷೇಧಿಸಿದೆ.

ಇತ್ತೀಚಿನ ವರದಿಯ ಪ್ರಕಾರ ಮಾರ್ಚ್ 1ರಿಂದ ಮಾ. 31, 2022 ರ ನಡುವೆ 18.05 ಲಕ್ಷ ಭಾರತೀಯ ಖಾತೆಗಳನ್ನು ವಾಟ್ಸಾಪ್​ನಿಂದ ನಿಷೇಧಿಸಲಾಗಿದೆ. ಹಾಗೆಯೇ ಪ್ಲಾಟ್‌ಫಾರ್ಮ್‌ನಲ್ಲಿನ ದುರ್ಬಳಕೆಯನ್ನು ಎದುರಿಸಲು ವಾಟ್ಸಾಪ್​ ಸ್ವಂತ ತಡೆಗಟ್ಟುವ ಕ್ರಮಗಳನ್ನು ಒಳಗೊಂಡಿದೆ.

ಮೆಟಾ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಫೆಬ್ರವರಿಯಲ್ಲಿ 14.26 ಲಕ್ಷ ಭಾರತೀಯರ ಖಾತೆಗಳನ್ನು ನಿಷೇಧಿಸಿದ್ದನ್ನು ಇಲ್ಲಿ ಗಮನಿಸಬಹುದು. ಬಳಕೆದಾರರು ಖಾತೆ ಬೆಂಬಲದ ಮೇಲೆ 597 ಖಾತೆಗಳ ಬಗ್ಗೆ ದೂರು ನೀಡಿದ್ದು, ಈ ಪೈಕಿ 407 ಖಾತೆಗಳನ್ನು ನಿಷೇಧಿಸುವಂತೆ ಮನವಿ ಮಾಡಿದ್ದರು. ಹಾಗೆ ಉತ್ಪನ್ನ ಬೆಂಬಲಕ್ಕೆ ಸಂಬಂಧಿಸಿದಂತೆ 37 , ಸುರಕ್ಷತೆಗೆ ಸಂಬಂಧಿಸಿದಂತೆ 13 ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ 28 ದೂರುಗಳು ಬಂದಿವೆ. ಇನ್ನುಳಿದಂತೆ ಇತರೆ ವಿಷಯಗಳ ಮೇಲೆ ವಾಟ್ಸಾಪ್​ ಕ್ರಮ ಜರುಗಿಸಿದೆ.

ಇದನ್ನೂ ಓದಿ: ಭಾರತವನ್ನ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಪ್ರತಿಜ್ಞೆ ಸ್ವೀಕರಿಸಿದ ಬಿಜೆಪಿ ಶಾಸಕ!

For All Latest Updates

TAGGED:

ABOUT THE AUTHOR

...view details