ಕರ್ನಾಟಕ

karnataka

ETV Bharat / bharat

WhatsApp: ಮೇ 15 ರಿಂದ ಜೂನ್ 15 ರವರೆಗೆ 20 ಲಕ್ಷ​ ಖಾತೆಗಳು ಬ್ಯಾನ್!

ಹೊಸ ಐಟಿ ನಿಯಮಗಳನ್ನು ಪಾಲಿಸುತ್ತಿರುವ ವಾಟ್ಸ್​ಆ್ಯಪ್​​​ ತಿಂಗಳ ವರದಿಯನ್ನು ಬಿಡುಗಡೆ ಮಾಡಿದ್ದು, ಒಂದು ತಿಂಗಳಲ್ಲೇ ಎರಡು ಮಿಲಿಯನ್ ಖಾತೆಗಳನ್ನು ಬ್ಯಾನ್ ಮಾಡಿದೆ.

By

Published : Jul 16, 2021, 7:25 AM IST

WhatsApp
WhatsApp

ನವದೆಹಲಿ: ಮೇ 15ರಿಂದ ಜೂನ್ 15 ರ ಅವಧಿಯಲ್ಲಿ ಎರಡು ಮಿಲಿಯನ್ ಭಾರತೀಯರ ಖಾತೆಗಳನ್ನು ವಾಟ್ಸ್​ಆ್ಯಪ್​ ಬ್ಯಾನ್ ಮಾಡಿದ್ದರೆ, 345 ಕುಂದು ಕೊರತೆ ವರದಿಗಳನ್ನು ಸ್ವೀಕರಿಸಲಾಗಿದೆ. ಹೊಸ ಐಟಿ ನಿಯಮಗಳ ಅನುಸಾರ ಮೊದಲ ತಿಂಗಳ ಕುಂದುಕೊರತೆ ವರದಿಯಲ್ಲಿ ಕಂಪನಿ ಈ ಮಾಹಿತಿ ನೀಡಿದೆ.

ದೈತ್ಯ ಡಿಜಿಟಲ್ ಫ್ಲಾಟ್ ಫಾರಂಗಳಿಗೆ ನೂತನ ಐಟಿ ನಿಯಮಗಳು ಅಗತ್ಯವಾಗಿದೆ. ಐದು ಮಿಲಿಯನ್ ಬಳಕೆದಾರರೊಂದಿಗೆ ಪ್ರತಿ ತಿಂಗಳು ಕುಂದುಕೊರತೆ ವರದಿಯನ್ನು ಪ್ರಕಟಿಸಬೇಕಾಗಿದೆ. ಸ್ವೀಕರಿಸಲಾದ ದೂರುಗಳ ವಿವರಗಳು ಮತ್ತು ತೆಗೆದುಕೊಂಡ ಕ್ರಮಗಳನ್ನು ವರದಿಯಲ್ಲಿ ಉಲ್ಲೇಖಿಸಬೇಕಾಗಿದೆ.

ಹಾನಿಕಾರಕ, ಅನಗತ್ಯ ಸಂದೇಶಗಳನ್ನು ಕಳುಹಿಸುವ ಖಾತೆಗಳನ್ನು ತಡೆಗಟ್ಟುವ ಕಡೆಗೆ ಹೆಚ್ಚಿನ ಗಮನ ಹರಿಸುತ್ತೇವೆ. ಅಸಹಜ ರೀತಿಯಲ್ಲಿ ಸಂದೇಶಗಳನ್ನು ಕಳುಹಿಸುವ ಈ ಖಾತೆಗಳನ್ನು ಗುರುತಿಸಲು ಸುಧಾರಿತ ಸಾಮರ್ಥ್ಯಗಳನ್ನು ನಿರ್ವಹಣೆ ಮಾಡುತ್ತೇವೆ. ಈ ರೀತಿಯ ನಿಂದನೆಗೆ ಪ್ರಯತ್ನಿಸಿದ ಎರಡು ಮಿಲಿಯನ್ ಭಾರತೀಯರ ಖಾತೆಗಳನ್ನು ಮೇ 15ರಿಂದ ಜೂನ್ 15ರ ಅವಧಿಯಲ್ಲಿ ಬ್ಯಾನ್ ಮಾಡಿರುವುದಾಗಿ ವಾಟ್ಸ್​ಆ್ಯಪ್​ ಗುರುವಾರ ತಿಳಿಸಿದೆ.

ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮೆಸೇಜ್ ಬರುತ್ತಿದ್ದ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ವ್ಯವಸ್ಥೆಗಳ ಅತ್ಯಾಧುನಿಕತೆ ಹೆಚ್ಚಾದಂತೆ 2019ರಿಂದ ಬ್ಯಾನ್ ಆಗುವ ಖಾತೆಗಳ ಸಂಖ್ಯೆಯಲ್ಲಿ ಗಮನಾರ್ಹ ರೀತಿಯಲ್ಲಿ ಏರಿಕೆಯಾಗಿದೆ.

ಸ್ವಯಂ ಚಾಲಿತವಾಗಿ ಅಥವಾ ಒಂದೇ ಬಾರಿಗೆ ಹೆಚ್ಚಿನ ರೀತಿಯಲ್ಲಿ ಸಂದೇಶ ಕಳುಹಿಸಲು ಪ್ರಯತ್ನಿಸುವ ಖಾತೆಗಳನ್ನು ಗುರುತಿಸಲಾಗಿದೆ. ಜಾಗತಿಕವಾಗಿ ತಿಂಗಳಿಗೆ ಸರಾಸರಿ ಎಂಟು ಮಿಲಿಯನ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಬ್ಯಾನ್​ಗೆ ಮೊರೆ, ಖಾತೆಗೆ ಸಹಕಾರ, ಉತ್ಪನ್ನಕ್ಕೆ ಬೆಂಬಲ ಸೇರಿದಂತೆ ಒಟ್ಟಾರೆ 345 ಕುಂದು ಕೊರತೆಗಳನ್ನು ಆಲಿಸಲಾಗಿದೆ. ಇದರ ವಿರುದ್ಧ ಮೇ 15 ರಿಂದ ಜೂನ್ 15, 2021 ರವರೆಗೆ 63 ಖಾತೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಕುಂದುಕೊರತೆ ಚಾನೆಲ್ ಮೂಲಕ ಬಳಕೆದಾರರ ದೂರುಗಳನ್ನು ಸ್ವೀಕರಿಸಲಾಗುವುದು ಎಂದು ವಾಟ್ಸ್​ಆ್ಯಪ್​ ತಿಳಿಸಿದೆ.

ಇದನ್ನೂ ಓದಿ:ಪತಿ ಕಸ ಗುಡಿಸುವ ಬ್ಲಾಕ್‌ನ ಅಧ್ಯಕ್ಷೆಯಾದ ಬಿಜೆಪಿಯ ಸೋನಿಯಾ: ಯುಪಿಯಲ್ಲಿ ಅಪರೂಪದ ಸಮಾಗಮ

ABOUT THE AUTHOR

...view details