ನೀವು ನಿಮ್ಮ ದೇಹವನ್ನು ಸಾಕಷ್ಟು ತೇವದಿಂದ ಕೂಡಿರುವಂತೆ ನೋಡಿಕೊಳ್ಳದೇ ಹೋದರೆ ಚರ್ಮದ ತುರಿಕೆ, ಶುಷ್ಕತೆಯಂತಹ ಸಮಸ್ಯೆಗಳು ಯಾವಾಗ ಬೇಕಾದರೂ ಎದುರಾಗಬಹುದು. ಕೆಲವು ಜನರು ತಮ್ಮ ತ್ವಚೆಯ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸಿದರೆ, ಹೆಚ್ಚಿನವರು ದೇಹವನ್ನು ತೇವವಾಗಿಟ್ಟುಕೊಳ್ಳುವುದನ್ನು ನಿರ್ಲಕ್ಷಿಸುತ್ತಾರೆ ಎನ್ನಲಾಗಿದೆ.
ಮಾಯಿಶ್ಚರೈಸರ್‌ಗಳನ್ನು ಯಾವ ಸಮಯದಲ್ಲಿ ಹಚ್ಚಿಕೊಳ್ಳಬೇಕು ಎಂಬುದರ ಬಗ್ಗೆ ಸರಿಯಾದ ತಿಳಿವಳಿಕೆ ಅಗತ್ಯ. ಪ್ರಮುಖ ದೇಹದ ಆರೈಕೆ ಬ್ರಾಂಡ್‌ನ ರಿಟೇಲ್ ಮುಖ್ಯಸ್ಥ ಕಿಮಿ ಜೈನ್ ಅವರು ನಿಮ್ಮ ದೇಹವನ್ನು ತೇವಗೊಳಿಸಲು ಸೂಕ್ತವಾದ ಸಮಯ ಯಾವುದೆಂದು ಹೇಳಿದ್ದಾರೆ.
ಬೆಳಗ್ಗೆ:
ಬೆಳಗ್ಗೆ ದೇಹವನ್ನು ತೇವಗೊಳಿಸುವುದು ನಿಮ್ಮ ಚರ್ಮವನ್ನು ಹಗಲಿನಲ್ಲಿ ಅಸಂಖ್ಯಾತ ಚರ್ಮ ಹಾನಿಕಾರಕ ಅಂಶಗಳಿಂದ ದೂರವಿಡುವಂತೆ ಮಾಡುತ್ತದೆ. ನೀವು ಹೊರಗಿರುವಾಗ ಚರ್ಮವು ನಿರಂತರವಾಗಿ ಕಠಿಣ ರಾಸಾಯನಿಕಗಳು ಮತ್ತು ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುತ್ತದೆ, ಆದ್ದರಿಂದ ಹೊರಗೆ ಹೋಗುವಾಗ ರಕ್ಷಣಾತ್ಮಕ ಮತ್ತು ಹಿತವಾದ ಮಾಯಿಶ್ಚರೈಸರ್ ಅನ್ನು ಬಳಸುವುದು ಅಗತ್ಯವಾಗಿರುತ್ತದೆ.
ಸ್ನಾನ, ಶೇವಿಂಗ್ ನಂತರ:
ನೀವು ಸ್ನಾನ ಮಾಡಿದ ನಂತರ, ನಿಮ್ಮ ಚರ್ಮವು ಗರಿಷ್ಠ ತೇವಾಂಶವನ್ನು ಹೊಂದಿರುತ್ತದೆ ಮತ್ತು ಮಾಯಿಶ್ಚರೈಸರ್ಗಳು ಹೈಡ್ರೇಟೆಡ್ ಚರ್ಮದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಅದಕ್ಕಾಗಿಯೇ ಡರ್ಮಟಾಲಾಜಿಸ್ಟ್ಗಳು ಯಾವಾಗಲೂ ಸ್ನಾನ ಮಾಡಿ ಹೊರಬಂದ ತಕ್ಷಣ ಮಾಯಿಶ್ಚರೈಸರ್ ಅನ್ನು ಹಚ್ಚಲು ಶಿಫಾರಸು ಮಾಡುತ್ತಾರೆ. ಏಕೆಂದರೆ ಮಾಯಿಶ್ಚರೈಸರ್ಗಳು ದೇಹದಲ್ಲಿ ಇನ್ನೂ ಸ್ವಲ್ಪ ನೀರನ್ನು ಹಿಡಿದಿಟ್ಟುಕೊಳ್ಳಲು ಮತ್ತು ದೇಹವನ್ನು ಹೈಡ್ರೇಟ್ ಮಾಡಲು ಸಾಧ್ಯವಾಗುತ್ತದೆ.
ಶೇವಿಂಗ್ ದೇಹದ ಅನಗತ್ಯ ಕೂದಲನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಆದರೆ, ಮೇಲ್ಮೈ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ. ಯಾವುದೇ ಚರ್ಮದ ಕಿರಿಕಿರಿಯನ್ನು ಶಮನಗೊಳಿಸಲು ಮತ್ತು ತೆರೆದ ಚರ್ಮವನ್ನು ಶುಷ್ಕತೆಯಿಂದ ರಕ್ಷಿಸಲು, ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುವ ಯಾವುದೇ ಹೈಡ್ರೇಟಿಂಗ್ ಮಾಯಿಶ್ಚರೈಸರ್ ಅನ್ನು ಬಳಸಿ.