ಕರ್ನಾಟಕ

karnataka

ETV Bharat / bharat

ಏನಿದು ಒಂದು ದೇಶ ಒಂದು ಚುನಾವಣಾ.. ಈ ಕ್ರಮಕ್ಕೆ ಅನುಮೋದನೆ ಅಷ್ಟು ಸುಲಭವಲ್ಲವೇಕೆ? ಇಲ್ಲಿದೆ ಮಾಹಿತಿ.. - ಸಂಯೋಜಿತ ಚುನಾವಣೆ ಏಕೆ

ಭಾರತ ಸರ್ಕಾರ ಚುನಾವಣಾ ನಿರ್ವಹಣೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತರಲು ಸಿದ್ಧತೆಗಳನ್ನು ಸಿದ್ಧಪಡಿಸುತ್ತದೆ. ಇಂದು 'ಒಂದು ದೇಶ ಒಂದು ಚುನಾವಣಾ' ಮೇಲೆ ಪರಿಶೀಲನೆಗೆ ಸಮಿತಿ ರಚಿಸಿದೆ. ಆದರೆ, ಇದಕ್ಕೆ ಅನುಮೋದನೆ ಪಡೆಯುವುದು ಅಷ್ಟು ಸುಲಭದ ಮಾತಲ್ಲ.. ಅದರ ಬಗ್ಗೆ ಇಲ್ಲಿದೆ ಡಿಟೇಲ್ಸ್​..

what is one nation one election  one nation one election  one nation one election details  ಏನಿದು ಒಂದು ದೇಶ ಒಂದು ಚುನಾವಣಾ  ಅನುಮೋದನೆ ಅಷ್ಟು ಸುಲಭವಲ್ಲ  ಭಾರತ ಸರ್ಕಾರ ಚುನಾವಣಾ ನಿರ್ವಹಣೆ  ಪ್ರಮುಖ ಬದಲಾವಣೆಗಳನ್ನು ತರಲು ಸಿದ್ಧತೆ  ಏನಿದು ಜಮಿಲಿ ಚುನಾವಣೆ  ಒಂದು ರಾಷ್ಟ್ರ ಒಂದು ಚುನಾವಣೆ  ಸಂಯೋಜಿತ ಚುನಾವಣೆ ಏಕೆ  ಹಿಂದೆ ನಡೆದಿತ್ತು ಜಮಿಲಿ ಚುನಾವಣೆ
ಏನಿದು ಒಂದು ದೇಶ ಒಂದು ಚುನಾವಣಾ

By ETV Bharat Karnataka Team

Published : Sep 1, 2023, 2:32 PM IST

ನವದೆಹಲಿ:ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಹದಿನೈದು ದಿನಗಳ ಮೊದಲು ಕೇಂದ್ರ ಸರ್ಕಾರ ಅತ್ಯಂತ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. 'ಒಂದು ರಾಷ್ಟ್ರ, ಒಂದು ಚುನಾವಣೆ'ಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ರಚಿಸಲಾಗಿದೆ. ವಾಸ್ತವವಾಗಿ, ಈ ರೀತಿಯ ಚುನಾವಣೆಗಳು ಹಿಂದೆ ನಡೆದಿದ್ದವು.. ಆದರೆ, ವಿವಿಧ ಕಾರಣಗಳಿಂದ ಬದಲಾವಣೆಗಳು ಕಂಡು ಬಂದವು.

ಏನಿದು ಜಮಿಲಿ ಚುನಾವಣೆ..?:ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಸುವುದು ಇದರ ಉದ್ದೇಶ. ಅಂದರೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯ ಮತದಾನವನ್ನು ಏಕಕಾಲದಲ್ಲಿ ನಡೆಸುವುದು. ಪ್ರಸ್ತುತ, ವಿಧಾನಸಭೆ ಮತ್ತು ಸಂಸತ್ತಿಗೆ ಪ್ರತ್ಯೇಕ ಚುನಾವಣೆ ನಡೆಯುತ್ತಿದೆ. ಈ ಬಾರಿ ಸೆ.18-22ರ ನಡುವೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ‘ಒಂದು ದೇಶ - ಒಂದು ಚುನಾವಣೆ’ ವಿಧೇಯಕವನ್ನು ಮಂಡಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ಜೋರಾಗಿ ಪ್ರಚಾರ ನಡೆಯುತ್ತಿದೆ. ವಾಸ್ತವವಾಗಿ, ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಈ ಬಗ್ಗೆ ಮಾತನಾಡುತ್ತಿದ್ದಾರೆ.

‘ಒಂದು ರಾಷ್ಟ್ರ ಒಂದು ಚುನಾವಣೆ’ ಅಷ್ಟು ಸುಲಭವಲ್ಲ:ಈ ಮಸೂದೆಯನ್ನು ಅಂಗೀಕರಿಸಲು ಸಾಂವಿಧಾನಿಕ ತಿದ್ದುಪಡಿಗಳ ಅಗತ್ಯವಿದೆ. ಲೋಕಸಭೆಯ 543 ಸ್ಥಾನಗಳಲ್ಲಿ ಕನಿಷ್ಠ 67 ಪ್ರತಿಶತದಷ್ಟು ಜನರು ಈ ತಿದ್ದುಪಡಿಗಳ ಪರವಾಗಿ ಮತ ಚಲಾಯಿಸಬೇಕು. ಜತೆಗೆ ರಾಜ್ಯಸಭೆಯ 245 ಸ್ಥಾನಗಳಲ್ಲಿ ಶೇ.67ರಷ್ಟು ಜನ ಬೆಂಬಲ ನೀಡಬೇಕು. ಇದರ ಜೊತೆಗೆ ದೇಶದ ಕನಿಷ್ಠ ಅರ್ಧದಷ್ಟು ರಾಜ್ಯ ವಿಧಾನಸಭೆಗಳು ತಮ್ಮ ಅನುಮೋದನೆಯ ಮುದ್ರೆಯನ್ನು ನೀಡಬೇಕು. ಅಂದರೆ 14 ರಾಜ್ಯಗಳು ಈ ಮಸೂದೆಯ ಪರವಾಗಿ ನಿಲ್ಲಬೇಕಾಗುತ್ತದೆ.

ಪ್ರಸ್ತುತ 10 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ.. ಅದನ್ನು ಬೆಂಬಲಿಸುವ ಪಕ್ಷಗಳು ಇನ್ನೂ 6 ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿವೆ. ಲೋಕಸಭೆಯಲ್ಲಿ ಎನ್‌ಡಿಎ 333 ಮತಗಳ ಬಲ ಹೊಂದಿದೆ. ಇದು 61 ಪ್ರತಿಶತಕ್ಕೆ ಸಮನಾಗಿರುತ್ತದೆ. ಇನ್ನು ಶೇ.5ರಷ್ಟು ಮತ ಗಳಿಸುವುದು ಕಷ್ಟವಾಗುತ್ತದೆ. ರಾಜ್ಯಸಭೆಯಲ್ಲಿ ಕೇವಲ ಶೇ.38 ಸ್ಥಾನಗಳಿವೆ.

ಸಂಯೋಜಿತ ಚುನಾವಣೆ ಏಕೆ?:2019ರ ಲೋಕಸಭೆ ಚುನಾವಣೆಗೆ ಕೇಂದ್ರ ಸರ್ಕಾರ ರೂ. 10,000 ಕೋಟಿ ಖರ್ಚು ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಇದೇ ಸಂದರ್ಭದಲ್ಲಿ ಪ್ರತಿ ರಾಜ್ಯ ಚುನಾವಣೆಗೆ ಸರಕಾರ 250ರಿಂದ 500 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಈ ವೆಚ್ಚಕ್ಕೆ ರಾಜಕೀಯ ಪಕ್ಷಗಳ ಖರ್ಚು ಕೂಡಿಸಿದರೆ ಕಣ್ಣುಗಳು ಕೆಂಪಾಗುತ್ತವೆ. 2019ರ ಲೋಕಸಭೆ ಚುನಾವಣೆಗೆ ಆಯಾ ಪಕ್ಷಗಳ ಖರ್ಚು 60 ಸಾವಿರ ಕೋಟಿ ರೂ.ವರೆಗೆ ಇತ್ತು ಎಂದು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಎಂಬ ಸಂಸ್ಥೆ ಆ ವೇಳೆ ಬಹಿರಂಗಪಡಿಸಿತ್ತು. ಇದು ಭಾರತದ ಇತಿಹಾಸದಲ್ಲೇ ಅತ್ಯಂತ ದುಬಾರಿ ಚುನಾವಣೆಯಾಗಿತ್ತು. ಈ ವೆಚ್ಚವನ್ನು ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಹಂಚಿಕೊಳ್ಳುತ್ತವೆ ಎಂಬ ವಾದವಿದೆ.

ಇದಲ್ಲದೇ ಸರಕಾರಿ ಯಂತ್ರವನ್ನು ಸಮರ್ಥವಾಗಿ ಬಳಸಿಕೊಳ್ಳಲು ಅವಕಾಶವಿದೆ. ಸಾಮಾನ್ಯ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿದ್ದರೆ, ಆಡಳಿತ ನಿಧಾನವಾಗುತ್ತದೆ. ಹಾಗಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಚುನಾವಣೆ ಏಕಕಾಲಕ್ಕೆ ನಡೆಯುವುದರಿಂದ.. ಸಮಯ ಉಳಿತಾಯವಾಗುತ್ತದೆ ಮತ್ತು ಆಡಳಿತದತ್ತ ಗಮನ ಹರಿಸಲು ಅವಕಾಶ ಸಿಗುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳು ಮತ್ತು ಯೋಜನೆಗಳ ಅನುಷ್ಠಾನದಲ್ಲಿ ಅಡೆತಡೆಗಳ ಸಾಧ್ಯತೆಗಳು ಚುನಾವಣಾ ನೀತಿ ಸಂಹಿತೆಗಳ ರೂಪದಲ್ಲಿ ಕಡಿಮೆಯಾಗುತ್ತವೆ. ಇದಲ್ಲದೇ ಚುನಾವಣಾ ನೀತಿ ಸಂಹಿತೆಯಿಂದಾಗಿ ಹೊಸ ಯೋಜನೆಗಳ ಆರಂಭ ಮುಂದೂಡುವ ಸಾಧ್ಯತೆ ಇಲ್ಲ. ಒಂದೇ ಚುನಾವಣೆಯಿಂದಾಗಿ ಎಲ್ಲ ರೀತಿಯ ಮತದಾನ ಒಂದೇ ಸಮಯದಲ್ಲಿ ನಡೆಯುವುದರಿಂದ ಮತದಾರರಿಗೆ ಅನುಕೂಲವಾಗಲಿದೆ. ಇದರಿಂದ ಮತದಾನದ ಪ್ರಮಾಣ ಹೆಚ್ಚಾಗಲಿದೆ ಎಂದು ಕಾನೂನು ಆಯೋಗ ಹೇಳಿದೆ.

ಸಮಸ್ಯೆಗಳೇನು?: ಲೋಕಸಭೆ ಚುನಾವಣೆ ಜತೆಗೆ ವಿಧಾನಸಭೆ ಚುನಾವಣೆಗೂ ಅವಕಾಶ ಕಲ್ಪಿಸಲು ಸಂವಿಧಾನ ತಿದ್ದುಪಡಿ ತರಬೇಕು. ಪ್ರಜಾಪ್ರತಿನಿಧಿ ಕಾಯ್ದೆ ಸೇರಿದಂತೆ ಇತರ ಸಂಸದೀಯ ಕಾರ್ಯವಿಧಾನಗಳಿಗೆ ತಿದ್ದುಪಡಿ ತರಬೇಕಾಗುತ್ತದೆ. ಇದಕ್ಕೆ ರಾಜ್ಯಗಳ ಒಪ್ಪಿಗೆಯೂ ಅತೀ ಅಗತ್ಯ.

ಜಮಿಲಿ ಚುನಾವಣೆಯಿಂದಾಗಿ ರಾಷ್ಟ್ರೀಯ ಅಂಶಗಳು ಪ್ರಚಾರದ ಹೆಚ್ಚಿನ ಭಾಗವನ್ನು ಆಕ್ರಮಿಸಿಕೊಂಡರೆ ಸ್ಥಳೀಯ ಅಂಶಗಳ ಪಾತ್ರ ಕಡಿಮೆಯಾಗಲಿದೆ ಎಂದು ಪಕ್ಷಗಳು ಹೆದರುತ್ತಿವೆ. ಅದರಲ್ಲೂ ಸ್ಥಳೀಯ ಪಕ್ಷಗಳಲ್ಲಿ ಈ ಭಯ ಹೆಚ್ಚಿದೆ. ಚುನಾವಣಾ ವೆಚ್ಚದಲ್ಲಿಯೂ ಸ್ಥಳೀಯ ಪಕ್ಷಗಳು ರಾಷ್ಟ್ರೀಯ ಪಕ್ಷಗಳೊಂದಿಗೆ ಪೈಪೋಟಿ ನಡೆಸಬೇಕಾಗುವುದು ಅನುಮಾನ.

2015ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಜಮಿಲಿ ಚುನಾವಣೆ ವೇಳೆ ಶೇ.77 ರಷ್ಟು ಜನರು ಒಂದೇ ಪಕ್ಷ ಅಥವಾ ಮೈತ್ರಿಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಆರು ತಿಂಗಳ ಅಂತರದಲ್ಲಿ ಒಂದೇ ವಿಧಾನಸಭೆ ಮತ್ತು ಸಂಸತ್ ಚುನಾವಣೆ ನಡೆದರೆ ಅದೇ ಪಕ್ಷವನ್ನು ಆಯ್ಕೆ ಮಾಡುವ ಸಾಧ್ಯತೆ ಶೇ.61ಕ್ಕೆ ಇಳಿಕೆಯಾಗಲಿದೆ ಎಂದು ತಿಳಿದು ಬಂದಿದೆ.

ಹಿಂದೆ ನಡೆದಿತ್ತು ಜಮಿಲಿ ಚುನಾವಣೆ:1967 ರವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಆದರೆ, ಕೆಲವು ರಾಜ್ಯಗಳ ಅಸೆಂಬ್ಲಿಗಳ ವಿಸರ್ಜನೆ ಮತ್ತು 1970 ರಲ್ಲಿ ಲೋಕಸಭೆಯ ಒಂದು ವರ್ಷದ ಮೊದಲು ವಿಸರ್ಜನೆಯೊಂದಿಗೆ ಈ ನೀತಿಯನ್ನು ಮುಂದುವರಿಸಲಾಗಲಿಲ್ಲ. 1983 ರಲ್ಲಿ, ಚುನಾವಣಾ ಆಯೋಗವು ಮತ್ತೊಮ್ಮೆ ಜಮಿಲಿ ಚುನಾವಣಾ ಪ್ರಸ್ತಾಪವನ್ನು ತಂದಿತು. ಆದರೆ, ಆಗ ಸರ್ಕಾರ ಆಸಕ್ತಿ ವಹಿಸಿರಲಿಲ್ಲ.

1999ರಲ್ಲಿ ಕಾನೂನು ಆಯೋಗದ ವರದಿ ಇದನ್ನು ಮತ್ತೊಮ್ಮೆ ಎತ್ತಿ ಹಿಡಿದಿತ್ತು. 2016ರಲ್ಲಿ ಪ್ರಧಾನಿ ಮೋದಿ ಮತ್ತೊಮ್ಮೆ ಈ ವಿಚಾರ ಪ್ರಸ್ತಾಪಿಸಿದ್ದರು. 2017ರಲ್ಲಿ ನೀತಿ ಆಯೋಗ ಈ ಬಗ್ಗೆ ಕಸರತ್ತು ನಡೆಸಿತ್ತು. 2019ರಲ್ಲಿ ಈ ವಿಚಾರವಾಗಿ ವಿವಿಧ ಪಕ್ಷಗಳ ಮುಖಂಡರ ಜೊತೆ ಪ್ರಧಾನಿ ಸಭೆ ಏರ್ಪಡಿಸಿದ್ದರು.. ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಇದರಿಂದ ದೂರ ಉಳಿದಿದ್ದವು. ಕೆಲವು ಪಕ್ಷಗಳು ಮಾತ್ರ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದ್ದವು.

2022 ರಲ್ಲಿ ಜಮಿಲಿ ಚುನಾವಣೆ ನಡೆಸಲು ಸಿದ್ಧ ಎಂದು ಸಿಇಸಿ ಸುಶೀಲ್ ಚಂದ್ರ ಘೋಷಿಸಿದರು. ಡಿಸೆಂಬರ್ 2022 ರಲ್ಲಿ ಈ ರೀತಿಯ ಚುನಾವಣೆಯ ಕುರಿತು ಆಯೋಗವು ವಿವಿಧ ಪಕ್ಷಗಳು, ಇಸಿ, ಅಧಿಕಾರಿಗಳು, ಶಿಕ್ಷಣ ತಜ್ಞರು ಮತ್ತು ತಜ್ಞರ ಅಭಿಪ್ರಾಯಗಳನ್ನು ಆಹ್ವಾನಿಸಿತ್ತು. ಆದ್ರೆ ಯಾವುದೇ ಪ್ರಯೋಜನೆಗಳು ಆಗಲಿಲ್ಲ. ಈಗ ವಿಶೇಷ ಅಧಿವೇಶನದಲ್ಲಿ ಏನಾಗುತ್ತೋ ಎಂಬುದು ಕಾದು ನೋಡ್ಬೇಕಾಗಿದೆ. (ಈನಾಡು.ನೆಟ್​)

ಓದಿ:ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಅವಲೋಕಿಸಲು ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಸಮಿತಿ ರಚನೆ

ABOUT THE AUTHOR

...view details