ಬಾಲಸೋರ್ (ಒಡಿಶಾ):ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮೂರು ರೈಲುಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಅಪಾರ ಪ್ರಮಾಣದ ಸಾವು-ನೋವು ಉಂಟಾಗಿದೆ. ಸಾವಿನ ಸಂಖ್ಯೆ 288ಕ್ಕೆ ಏರಿದ್ದರೆ, 900 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ರೈಲು ದುರಂತ ಸಂಭವಿಸಿದ ಈ ಮಾರ್ಗದಲ್ಲಿ 'ಕವಚ್' ಸುರಕ್ಷತಾ ವ್ಯವಸ್ಥೆಯು ಲಭ್ಯವಿರಲಿಲ್ಲ ಎಂದು ಭಾರತೀಯ ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ತಿಳಿಸಿದ್ದಾರೆ.
'ಕವಚ್' ಎಂದರೇನು?:'ಕವಚ್' ಎಂಬುದು ಸ್ವಯಂಚಾಲಿತ ರೈಲು ರಕ್ಷಣೆ (ATP) ವ್ಯವಸ್ಥೆಯಾಗಿದೆ. ಕವಚ್ ಸುರಕ್ಷತಾ ವ್ಯವಸ್ಥೆಯು ಲೋಕೋಮೋಟಿವ್ ಪೈಲಟ್ಗಳಿಗೆ ಅಪಾಯದ ಸಮಯದಲ್ಲಿ ಸಿಗ್ನಲ್ ಪಾಸಿಂಗ್ (SPAD) ಮತ್ತು ಅತಿ ವೇಗವನ್ನು ತಪ್ಪಿಸಲು, ವೇಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ಚಳಿಗಾಲದಲ್ಲಿ ದಟ್ಟವಾದ ಮಂಜಿನಂತಹ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ರೈಲು ಕಾರ್ಯಾಚರಣೆಗಳಲ್ಲಿ ಸಹಾಯ ಮಾಡುತ್ತದೆ.
'ಕವಚ್' ವಿಶೇಷತೆಯೇನು?:ಲೋಕೋಮೋಟಿವ್ ಪೈಲಟ್ಸರಿಯಾದ ಸಮಯಕ್ಕೆ ಬ್ರೇಕ್ ಹಾಕಲು ವಿಫಲವಾದಲ್ಲಿ ಸ್ವಯಂಚಾಲಿತವಾಗಿ ಬ್ರೇಕ್ ಮಾಡುವ ಮೂಲಕ ಕವಚ್ ರೈಲಿನ ವೇಗವನ್ನು ನಿಯಂತ್ರಿಸುತ್ತದೆ. ಮಂಜು ಕವಿದು ಮಸುಕಾಗಿದ್ದಾಗ ಮತ್ತು ಹೆಚ್ಚಿನ ವೇಗದಲ್ಲಿ ಸುಧಾರಿತ ಗೋಚರತೆಗಾಗಿ ಕ್ಯಾಬಿನ್ನಲ್ಲಿ ಲೈನ್- ಸೈಡ್ ಸಿಗ್ನಲ್ ಒದಗಿಸುತ್ತದೆ. ಲೆವೆಲ್ ಕ್ರಾಸಿಂಗ್ಗಳಲ್ಲಿ ಸ್ವಯಂಚಾಲಿತ ವಿಸಿಲಿಂಗ್, ನೇರ ಲೊಕೊ-ಟು-ಲೊಕೊ ಸಂವಹನದ ಮೂಲಕ ಘರ್ಷಣೆ ತಪ್ಪಿಸುತ್ತದೆ. ಎಲ್ಲಾ ಸಂಭಾವ್ಯ ಅಪಘಾತಗಳನ್ನು ತಡೆಯುತ್ತದೆ.
ಇದನ್ನೂ ಓದಿ:ಭೀಕರ ತ್ರಿವಳಿ ರೈಲು ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣ: ಘಟನೆಯ ತನಿಖೆ ಆರಂಭ