ಕರ್ನಾಟಕ

karnataka

ETV Bharat / bharat

ಬಾರ್ಡರ್​ಗಳನ್ನು ಸೀಲ್​ ಮಾಡಿ.. ಹೊರಗಿನಿಂದ ಬರುವವರ ಮೇಲೆ ನಿಗಾ ಇಡಿ: ಬಿಪಿನ್ ರಾವತ್

ಜಮ್ಮುಕಾಶ್ಮೀರದಲ್ಲಿ ಇತ್ತೀಚೆಗೆ ನಾಗರಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ಸೇನಾ ಮುಖ್ಯಸ್ಥ ಬಿಪಿನ್ ರಾವತ್​ ದೇಶದ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ..

ಬಿಪಿನ್ ರಾವತ್
ಬಿಪಿನ್ ರಾವತ್

By

Published : Oct 23, 2021, 10:58 PM IST

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಗುಂಡಿನ ಚಕಮಕಿಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ನಾಗರಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ಸೇನಾ ಮುಖ್ಯಸ್ಥ ಬಿಪಿನ್ ರಾವತ್​ ದೇಶದ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಅಸ್ಸೋಂನ ಗುವಾಹಟಿಯಲ್ಲಿ ಮಾತನಾಡಿದ ಅವರು, ಆಫ್ಘಾನಿಸ್ತಾನದಲ್ಲಿ ಈಗ ಏನು ನಡೆಯುತ್ತಿದೆಯೋ ಅದು ಜಮ್ಮು ಮತ್ತು ಕಾಶ್ಮೀರದಲ್ಲೂ ನಡೆಯಬಹುದು. ಇದನ್ನು ಎದುರಿಸಲು ನಾವು ಈಗಲೇ ಸಿದ್ಧವಾಗಬೇಕಿದೆ. ನಮ್ಮ ಬಾರ್ಡರ್​ಗಳನ್ನು ಸೀಲ್ ಮಾಡಿ, ಉಸ್ತುವಾರಿಕೆ ಈಗ ಬಹುಮುಖ್ಯವಾಗಿದೆ. ಹೊರಗಿನಿಂದ ಯಾರು ಬರುತ್ತಿದ್ದಾರೆ ಅನ್ನೋದರ ಮೇಲೆ ನಾವೀಗ ಎಚ್ಚರಿಕೆಯ ಕಣ್ಣಿಡಬೇಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೊದಲು ಕ್ಷೇತ್ರ ವಿಂಗಡಣೆ.. ಬಳಿಕ ಚುನಾವಣೆ: ಜೆ - ಕೆ ಪ್ರವಾಸದಲ್ಲಿರುವ ಅಮಿತ್ ಶಾ ಘೋಷಣೆ

ಮ್ಯಾನ್ಮಾರ್​ನಲ್ಲಿ ಅಂತರ್​ಯುದ್ಧ ನಡೆಯುತ್ತಿದೆ. ಆದರೂ, ಮ್ಯಾನ್ಮಾರ್​ ಜತೆ ನಮ್ಮ ವ್ಯಾಪಾರ ಸಂಬಂಧಗಳು ಉತ್ತಮವಾಗಿವೆ. ಅವರು ಯಾವುದೇ ಕಾರಣಕ್ಕೂ ಚೀನಾ ಜತೆ ಕೈ ಜೋಡಿಸಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details