ಕರ್ನಾಟಕ

karnataka

ಡಿಜಿಟಲ್ ರೇಪ್ ಎಂದರೇನು, ಶಿಕ್ಷೆಯ ನಿಬಂಧನೆಗಳು ಯಾವವು?

By

Published : Aug 13, 2022, 8:54 AM IST

ವಿಶೇಷ ಎನ್ನಿಸುವ 'ಡಿಜಿಟಲ್ ರೇಪ್' ಪ್ರಕರಣವೊಂದು ಮೇ ತಿಂಗಳಿನಲ್ಲಿ ಬೆಳಕಿಗೆ ಬಂದಿತ್ತು. ಉತ್ತರಪ್ರದೇಶದಲ್ಲಿ ವಾಸಿಸುತ್ತಿರುವ ವೃದ್ಧ ಪೇಂಟರ್​ವೊಬ್ಬ ತನ್ನ ಅಪ್ರಾಪ್ತ ಸೇವಕಿಯ ಮೇಲೆ ಸುಮಾರು ಏಳು ವರ್ಷಗಳಿಂದ ಡಿಜಿಟಲ್​ ರೇಪ್​ ಎಸಗುತ್ತಿದ್ದನಂತೆ. ಈ ಕುರಿತು ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಿ ಜೈಲಿಗೆ ತಳ್ಳಿದ್ದರು. ಡಿಜಿಟಲ್​ ರೇಪ್​ ಎಂದರೇನು.. ಡಿಜಿಟಲ್​ ರೇಪ್​ ಶಿಕ್ಷೆಯ ನಿಬಂಧನೆಗಳೇನು ಎಂಬುದರ ಬಗ್ಗೆ ತಿಳಿಯೋಣ ಬನ್ನಿ.

what is Digital Rape  Digital Rape and the provision of punishment  Maharashtra crime news  Digital Rape details  ಡಿಜಿಟಲ್ ರೇಪ್  ಡಿಜಿಟಲ್​ ರೇಪ್​ ಎಂದರೇನು  ಡಿಜಿಟಲ್​ ರೇಪ್​ ಶಿಕ್ಷೆಯ ನಿಬಂಧನೆ
ಶಿಕ್ಷೆಯ ನಿಬಂಧನೆಗಳು ಯಾವವು

ಮುಂಬೈ(ಮಹಾರಾಷ್ಟ್ರ): 81 ವರ್ಷದ ವೃದ್ಧ ಪೇಂಟರ್​ವೊಬ್ಬ ಕಳೆದ ಏಳು ವರ್ಷಗಳಿಂದ ತನ್ನ ಅಪ್ರಾಪ್ತ ಸೇವಕಿಯ ಮೇಲೆ 'ಡಿಜಿಟಲ್ ಅತ್ಯಾಚಾರ' ನಡೆಸುತ್ತಿದ್ದ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ಬೆಳಕಿಗೆ ಬಂದಿತು. ಸ್ಕೇಚ್​ ಕಲಾವಿದ ಮೌರಿಸ್ ರೈಡರ್​ನ್ನು ವಿವಿಧ ಅಡಿ ಎಫ್‌ಐಆರ್ ದಾಖಲಿಸಿದ ನಂತರ ಬಂಧಿಸಲಾಯಿತು. ಈಗ ಡಿಜಿಟಲ್ ಅತ್ಯಾಚಾರದ ಪರಿಕಲ್ಪನೆಯು ಕಂಪ್ಯೂಟರ್ ಅಥವಾ ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದ ಕೆಲವು ಅಶ್ಲೀಲ ಕೃತ್ಯ ಎಂದು ಹಲವರು ಅರ್ಥಮಾಡಿಕೊಳ್ಳುತ್ತಾರೆ. ಅದು ತಪ್ಪು, ಡಿಜಿಟಲ್ ಅತ್ಯಾಚಾರ ಶಿಕ್ಷೆಗೆ ಸಂಬಂಧಿಸಿದಂತೆ ವಿಭಿನ್ನವಾದ ನಿಬಂಧನೆ ಸಹ ಇದೆ.

ಡಿಜಿಟಲ್ ರೇಪ್ ಎಂದರೇನು?:ಡಿಜಿಟಲ್ ಅತ್ಯಾಚಾರ ಅಪರಾಧದ ಬಗ್ಗೆ ಅಡ್ವೊಕೇಟ್ ದರಿಶೀಲ್ ಸುತಾರ್ ಈಟಿವಿ ಭಾರತ್‌ಗೆ ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಾ, ಡಿಜಿಟಲ್ ಅತ್ಯಾಚಾರಕ್ಕೂ ಮೊಬೈಲ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳಿಗೂ ಯಾವುದೇ ಸಂಬಂಧವಿಲ್ಲ. ಡಿಜಿಟಲ್ ರೇಪ್ ಎಂದರೆ ಯಾವುದೇ ಹುಡುಗಿ ಅಥವಾ ಹುಡುಗ ಇಂಟರ್ನೆಟ್ ಮೂಲಕ ಶೋಷಣೆಗೆ ಒಳಗಾಗಬೇಕು ಎಂದೂ ಇಲ್ಲ.

ಇಂಗ್ಲಿಷ್‌ನಲ್ಲಿ ಡಿಜಿಟ್​ ಎಂದರೆ ಸಂಖ್ಯೆ ಎಂದರ್ಥ. ಇಂಗ್ಲಿಷ್ ನಿಘಂಟಿನ ಪ್ರಕಾರ, ದೇಹದ ಕೆಲವು ಭಾಗಗಳನ್ನು ಸಂಖ್ಯೆಗಳಿಂದ ಗುರುತಿಸುತ್ತೇವೆ. ಉದಾಹರಣೆಗೆ ಬೆರಳು, ಹೆಬ್ಬೆರಳು, ಕೈಬೆರಳು ಅಥವಾ ಕಾಲ್ಬೆರಳು ಸೇರಿದಂತೆ ದೇಹದ ಅಂಗಗಳನ್ನು ಎಣಿಸುವುದು, ಗುರುತಿಸುವುದನ್ನು ಮಾಡುತ್ತೇವೆ. ಈ ಕೈಬೆರಳು ಮತ್ತು ಕಾಲ್ಬೆರಳುಗಳಿಂದ ಹೆಣ್ಮಕ್ಕಳ ಖಾಸಗಿ ಸ್ಥಳಗಳನ್ನು ಸ್ಪರ್ಶಿಸುವುದಕ್ಕೆ ಡಿಜಿಟಲ್​ ರೇಪ್​ ಎನ್ನುವರು.

ಈ ಪ್ರಕರಣದಲ್ಲಿ ಶಿಕ್ಷೆ ಏನು:ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ರ ಅಡಿ ಡಿಜಿಟಲ್ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದ ವ್ಯಕ್ತಿಯು ಐದು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಅನುಭವಿಸಬಹುದು ಎಂದು ವಕೀಲ ದರ್ಹಿಶೀಲ್ ಸುತಾರ್ ಹೇಳಿದರು.

ಕೆಲವು ಪ್ರಕರಣಗಳಲ್ಲಿ ಈ ಶಿಕ್ಷೆಯು 10 ವರ್ಷಗಳವರೆಗೆ ಅಥವಾ ಜೀವಾವಧಿ ಶಿಕ್ಷೆಯಾಗಬಹುದು. POCSO ಮತ್ತು ಡಿಜಿಟಲ್ ರೇಪ್ ಪ್ರಕರಣದಲ್ಲಿ ಹುಡುಗ ಅಥವಾ ಹುಡುಗಿ ಇಬ್ಬರೂ ಬಲಿಪಶುಗಳಾಗಬಹುದು.

ನಿದರ್ಶನ, ಅಭಿಯಾನ: ಡಿಜಿಟಲ್ ರೇಪ್ ಬಗ್ಗೆ ಕಳೆದ ಐದು ವರ್ಷಗಳಿಂದ ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. 2016ರಲ್ಲಿ ಶಾಲೆಯಿಂದ ಮನೆಗೆ ವಾಪಸ್​ ಆಗುತ್ತಿದ್ದಾಗ ಶಾಲಾ ಬಸ್ ಕಂಡಕ್ಟರ್ ಎಲ್​ಕೆಜಿ ಓದುತ್ತಿದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದಾಗ ಇಂಥದ್ದೊಂದು ಘಟನೆ ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು.

ಬಾಲಕಿಯೊಂದಿಗೆ ಈ ಹೇಯ ಕೃತ್ಯ ನಡೆದಿರುವುದು ತಿಳಿದ ಆಕೆಯ ಪೋಷಕರು ಆಕ್ರೋಶಗೊಂಡು ನ್ಯಾಯಕ್ಕಾಗಿ ಪ್ರತಿಭಟಿಸಿದ್ದರು. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಆ ಸಮಯದಲ್ಲಿ ಅಭಿಯಾನಗಳೂ ನಡೆದವು. ಬಳಿಕ ಆರೋಪಿಗೆ ಇಪ್ಪತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.

ಓದಿ:ವೃದ್ಧನ 'ಡಿಜಿಟಲ್‌ ಅತ್ಯಾಚಾರ'ದಿಂದ ನೊಂದ ಬಾಲಕಿ; ಸಂತ್ರಸ್ತೆ ಪೊಲೀಸರಿಗೆ ಹೇಳಿದ್ದೇನು?


ABOUT THE AUTHOR

...view details